ಗುರುವಾರ, ಸೆಪ್ಟೆಂಬರ್ 22, 2016

ಕಾವೇರಿ ಕರ್ಮಕಾಂಡ! ಬುದ್ಧಿ ಕಲಿಯುತ್ತಾರ ಕನ್ನಡಿಗರು?

ಕಾವೇರಿ ಕರ್ಮಕಾಂಡ!



ಪ್ರಚಲಿತ ವಿದ್ಯುನ್ಮಾನಗಳು ಕರ್ನಾಟಕದ ಜನತೆಗೆ ಬುದ್ಧಿ ಕಲಿಸುವುದೇ?




ಭಾರತದಲ್ಲೆಲ್ಲಾ ಮೋದಿಯದ್ದೇ ಅಲೆ! ಭಾರತಕ್ಕೆ "ಅಚ್ಛೇ ದಿನ್" ಬರುತ್ತಿದೆ! ಆದರೆ ಕರ್ನಾಟಕ ಭಾರತದಲ್ಲಿದೆಯೇ ಎಂಬುದೇ ಉತ್ತರಿಸಲಾಗದ ಪ್ರಶ್ನೆ!
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಆಡಳಿತವಿದ್ದೂ, ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಉನ್ನತ ಪಟ್ಟ ಸಿಕ್ಕಿದೆ. ಹಾಗೆಂದು ಇದಕ್ಕೆಲ್ಲ ಕರ್ಣಾಟಕ ಕಾಂಗ್ರೆಸ್ ಕಾರಣ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಕೆಟ್ಟದ್ದಕ್ಕೂ ಹಿಂದಿನ ಸರ್ಕಾರಗಳನ್ನು ದೂಷಿಸುವ ಅಡಳಿತಾರೂಢಿ ಸರ್ಕಾರಗಳು, ಒಳ್ಳೆಯದಕ್ಕೂ ಹಿಂದಿನ ಸರ್ಕಾರಗಳ ಕೊಡುಗೆ ಇದೆ ಎಂದು ಒಪ್ಪಲಾರವು! ಎಲ್ಲದಕ್ಕಿಂತ ಹೆಚ್ಚಾಗಿ ಅಂಥ ಸ್ಥಾನಮಾನಗಳನ್ನು ರಕ್ಷಿಸಿಕೊಂಡು, ನಿಭಾಯಿಸಿಕೊಂಡು ಸಾಗುತ್ತಿರುವ ರಾಜ್ಯದ ಜನತೆಯನ್ನು ಪಕ್ಷಾತೀತವಾಗಿ ಸ್ಮರಿಸಬೇಕಾಗುತ್ತದೆ.

ಈಗ ಅದು ಪಕ್ಕಕ್ಕಿರಲಿ. ಸ್ವಲ್ಪ ಕರ್ನಾಟಕದ ಸುತ್ತ ಮುತ್ತ ತಿರುಗಾಡಿ ಬರುವ.
ಕೇರಳದಲ್ಲಿ ಓಣಂ ಸಡಗರ. ಕಾವೇರಿಯಲ್ಲಿ ಅತಿ ಕಮ್ಮಿ ಪಾಲು ಇರುವ ರಾಜ್ಯಗಳಲ್ಲಿ ಕೇರಳವೂ ಒಂದು. (ಪಾಂಡಿಚೇರಿ ಮತ್ತೊಂದು).
ಕೇರಳದಲ್ಲಿ ಸ್ಥಾಪನೆಯಾದ ವಿದ್ಯುತ್ ಸ್ಥಾವರಕ್ಕಾಗಿ ಕೊಡಗಿನ ಬಹುಭಾಗ ಅರಣ್ಯವನ್ನು ನಾಶ ಮಾಡಲಾಗಿದೆ. I mean, ಮರಗಳಿಗೆ ಕೊಡಲಿ ಇಟ್ಟು ಕಾವೇರಿಯ ಮೂಲಕ್ಕೇ ಕತ್ತರಿ ಹಾಕಿದಂತಾಗಿದೆ!
ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಕೊಡಗಿಗೆ ರೈಲ್ವೇಯ ಅಗತ್ಯವೇನಿದೆಯೋ ಕಾಣೆ. ಆದರೆ ರೈಲ್ವೆಯ ಹೆಸರಲ್ಲಿಯೂ ಸಹ ಮರಗಳ ಮಾರಣ ಹೋಮವೇ ನಡೆಯುತ್ತಿದೆ! ಇಷ್ಟೆಲ್ಲಾ ನಡೆಯುವಾಗ ಕಾವೇರಿ ಕೊಳ್ಳದ ಜನ ಕಾವೇರಿ ನದಿಯಲ್ಲಿ ಹೆಚ್ಚು ನೀರು, ಮಳೆ ನಿರೀಕ್ಷಿಸುವುದು ನಿರಾಶಾವಾದವಲ್ಲದೆ ಮತ್ತಿನ್ನೇನು?


ತಮಿಳುನಾಡು! ಇದು ಪರರಾಜ್ಯಗಳ ಸಹಾಯ ಹಸ್ತದಿಂದ ಬೆಳೆದ ರಾಜ್ಯವೆಂದರೆ ತಪ್ಪಾಗಲಾರದು!
ಮುಲ್ಲಾ ಪೆರಿಯರ್'ಗಾಗಿ ಕೇರಳಿಗರೊಡನೆ, ಕಾವೇರಿಗಾಗಿ ಕನ್ನಡಿಗರೊಡನೆ, ಕೃಷ್ಣೆಗಾಗಿ ಕನ್ನಡಿಗರು ಮತ್ತು ತೆಲುಗರೊಡನೆ ಕಿತ್ತಾಡುವ ರಾಜ್ಯ ಎಂಬುದು ಸಾಮಾನ್ಯರ ಭಾವ. ಇದು ರಾಜಕೀಯದ ಆಯಾಮವೂ ಹೌದು. ಭಾಷಾ ರಾಜಕಾರಣಕ್ಕೆ ಹೆಸರುವಾಸಿಯಾದ ರಾಜ್ಯ. So called ರಾಷ್ಟ್ರೀಯ ಪಕ್ಷಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ರಾಜ್ಯ! ಹಿಂದೊಮ್ಮೆ ಇಡೀ ದಕ್ಷಿಣ ಭಾರತವೇ ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬೇಡಿಕೆಯೊಡನೆ ಸದ್ದು ಮಾಡಿದ ನೆಲ. ಈಗೇಕೊ ಅದರ ಬಗ್ಗೆ ಹೆಚ್ಚು ಚಿಂತಿಸದೆ ರಾಜ್ಯ ರಾಜಕಾರಣದಲ್ಲಿ ಅಲ್ಲಿನ ಎಲ್ಲಾ ಪಕ್ಷಗಳು ಬ್ಯುಸಿಯಾಗಿವೆ.


ಇನ್ನು ಆಂಧ್ರ ಇತ್ತೀಚೆಗೆ ಇಬ್ಬಾಗವಾಗಿದೆ! ತೆಲಂಗಾಣ ಹೊಸ ರಾಜ್ಯ. ಇಂಥದ್ದೇ ಬೇಡಿಕೆ ಮಹಾರಾಷ್ಟ್ರದ ವಿದರ್ಭ, ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕಾಸರಗೂಡಿನಲ್ಲಿ ತುಳುನಾಡು, ಮತ್ತು ಕೊಡವನಾಡುಗಳ ಪ್ರತ್ಯೇಕ ರಾಜ್ಯಗಳಿಗೆ ಧನಿ ಮೂಡಿದೆ. ತೆಲಂಗಾಣ ಮಾತ್ರ ಪ್ರತ್ಯೇಕ ರಾಜ್ಯವಾಗಲು ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಅಖಂಡ ಆಂಧ್ರದ ರಾಜಧಾನಿಯಾಗಿದ್ದ ಹೈದರಾಬಾದನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸೀಮಾಂಧ್ರ ಭಾಗಕ್ಕೆ ಹೊಸ ರಾಜಧಾನಿ ಹುಡುಕಿಕೊಳ್ಳುವ ಸಮಸ್ಯೆ ತಂದೊಡ್ಡಿದೆ. ಸೀಮಾಂಧ್ರಕ್ಕೆ ಈಗ ಅಮರಾವತಿಯ ಮೇಲೆ ಕಣ್ಣು!
ಅದನ್ನು ಅಭಿವೃದ್ಧಿಪಡಿಸಲು ಒಂದಷ್ಟು ರಾಜಕೀಯ ತಂತ್ರಗಾರಿಕೆ ಅತ್ಯಗತ್ಯ.


ಗುಜರಾತ್! ರಾಷ್ಟ್ರದ ಪ್ರಧಾನಿಯ ತವರು. ಡಿಜಿಟಲ್ ಲೋಕದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯ ಎಂಬಂತೆ ಬಂಬಿತವಾದ ರಾಜ್ಯ‌. ಆದರೆ ವಾಸ್ತವ ತೀರಾ ಭಿನ್ನ!

ಇವೆಲ್ಲವುದರ ನಡುವೆಯೂ ಕೇರಳಾ ಮತ್ತು ಕರ್ಣಾಟಕ ಅದೆಷ್ಟೋ ಉತ್ತಮ ವಿಚಾರಗಳಲ್ಲಿ ಉನ್ನತ ಸ್ಥಾನ ಗಳಿಸಿದೆ.
ಕರ್ಣಾಟಕ-ಭಾರತದ ರಾಜಕೀಯ ಇತಿಹಾಸದ ಎಂದೂ ಸಹ ಎರಡೂ ಕಡೆ, ಎಂದರೆ ರಾಜ್ಯದ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದ ಉದಾಹರಣೆಗೆ ಸಿಗುವುದಿಲ್ಲ. ಪ್ರಸ್ತುತ ಉದಾಹರಣೆಯೇ ತೆಗೆದುಕೊಳ್ಳಿ. ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಕೇಂದ್ರದಲ್ಲಿ ಭಾಜಪಾ ಇದೆ! ಈ ಸಂಗತಿಯು ಕರ್ನಾಟಕದ ಹಿತಾಸಕ್ತ ರಾಜಕಾರಣಕ್ಕೆ ಪ್ರತಿಬಾರಿಯೂ ತಣ್ಣೀರೆರಚಿರುವುದಂತು ನಿಜ!


ರಾಜಧಾನಿಯಲ್ಲಿಯೇ ಪರಭಾಷಿಕರ ಧಾಂದಲೆ, ಕನ್ನಡದ ಅವಗಣನೆ, ಕನ್ನಡಿಗರ ಕಡೆಗಣನೆ, ಹುಸಿ ರಾಷ್ಟ್ರೀಯತೆ, ಧರ್ಮಾಂಧತೆ, ಅರ್ಥ ಕಳೆದುಕೊಂಡ ಜಾತ್ಯಾತೀತ ತತ್ವ ಸಿದ್ಧಾಂತ, ಭಾರತದ ನೆಲಕ್ಕೆ ಹೊಂದದ ಕಮ್ಯುನಿಸಂ, ಇತ್ಯಾದಿ ರಾಜಕೀಯ ದೃಷ್ಟಿಕೋನಗಳಿಂದ ಕರ್ನಾಟಕದ ರಾಜಕಾರಣ ಅಸ್ಥಿರತೆ ಎದುರಿಸಿದರೂ ಸಹ ಬೆಳವಣಿಗೆಯಲ್ಲೇನು ಹಿಂದೆ ಬೀಳಲಿಲ್ಲ. ಸ್ಥಳಿಯ ರಾಜಕಾರಣಿಗಳ ನಿರಾಸಕ್ತಿಯಿಂದ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯಕ್ಕೊಳಗಾಯ್ತು ಎಂಬ ಆಪಾದನೆಯೊಂದನ್ನು ಬಿಟ್ಟರೆ, ಮಿಕ್ಕವೆಲ್ಲಾ ಅದ್ವಿತೀಯ!

ಕೇವಲ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಚಾರಗಳಲ್ಲೇ ಕೇರಳ ಮತ್ತು ಕರ್ನಾಟಕ ಅಂತಹ "ಮಾದರಿ ಗುಜರಾತ" ಎಂದು ಬಿಂಬಿತವಾದ ಪ್ರಧಾನಿಯ ತವರೂರನ್ನೇ ಹಿಂದಿಕ್ಕಿದ್ದು ಏನು ಸುಳ್ಳಲ್ಲ! ಮೊದಲೇ ಹೇಳಿದಂತೆ ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಎಂದು ಪಟ್ಟಿ ಕಟ್ಟಿಕೊಳ್ಳುವುದೂ ಸಹ ಹಾಸ್ಯಾಸ್ಪದ ಸಂಗತಿಯೆ!


ಇಂಥಹ ಕರ್ನಾಟಕವು ಅದೆಷ್ಟು ಪರರಾಜ್ಯಗಳ ಕಣ್ಣುರಿಸಿರಬಹುದು?


ಇದಕ್ಕೆ ರಾಜಕೀಯ ಆಯಾಮ ತೊಡಿಸಿ ಯೋಚಿಸಿ!
ಬೇರಾವ ವಿಚಾರಕ್ಕೂ ಭುಗಿಲೇಳದಷ್ಟು ಆಕ್ರೋಶ ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆಯೇ ಭುಗಿಲೇಳುವುದಕ್ಕೆ ಒಂದು ಪ್ರಬಲ ಕಾರಣವಿದೆ. ಅದೇ ರಾಜಧಾನಿ ಬೆಂಗಳೂರು!
ಅಖಂಡ ಕರ್ನಾಟಕದ ೧೭೫ ತಾಲ್ಲೂಕುಗಳ ನಿವಾಸಿಗಳಲ್ಲಿ ೧೦೦ಕ್ಕೆ ಕನಿಷ್ಠ ೫-೭ ಜನ ಬೆಂಗಳೂರಿನಲ್ಲಿ ವಾಸಿಸುತ್ತಾರೆ!
ಕರ್ಣಾಟಕದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ, ವ್ಯವಹಾರ ವಹಿವಾಟುಗಳು ನಡೆಯುವುದು ಬೆಂಗಳೂರಿನಲ್ಲಿ. ಸಿಲಿಕಾನ್ ವ್ಯಾಲಿ, ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು ಕೇವಲ ಕರ್ನಾಟಕದ ಜನರಿಗಷ್ಟೇ ಅಲ್ಲದೇ, ಪರರಾಜ್ಯಗಳ ವಲಸಿಗರಿಗೂ ಸ್ವರ್ಗ ಎನಿಸಿಕೊಂಡಿದೆ. ಉದ್ಯೋಗಾವಕಾಶಗಳ ಬಲೆಯಾಗಿದೆ. ಇಲ್ಲಿನ ವಾಯುಗುಣ, ಹವಾಮಾನ ಪ್ರಕೃತಿಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ! ಉತ್ತರ ಭಾರತಕ್ಕೆ ದಿಲ್ಲಿ ಕೇಂದ್ರವಾದರೆ ಅದಕ್ಕೆ ದಕ್ಷಿಣದಲ್ಲಿ ಸರಿಸಮನಾಗಿ ನಿಲ್ಲಬಲ್ಲ ಏಕೈಕ ನಗರ ಬೆಂಗಳೂರು!


ಇದೆಲ್ಲಕ್ಕೂ ಹಲವು ಅಂಶಗಳು ಕೊಡುಗೆ ಕೊಟ್ಟಿವೆ. ಆದರೆ ಕಾವೇರಿ ನದಿ ನೀರಿನ ಕೊಡುಗೆ ಅಪಾರ!
ಬೆಂಗಳೂರು, ಮೂಲಭೂತ ಸೌಕರ್ಯಗಳೊಂದಿದೆ ಒಂದು ಸುಸಜ್ಜಿತ ನಗರವಾಗಿ ರೂಪುಗೊಂಡಿರುವುದರಲ್ಲಿ ಕಾವೇರಿಯ ಪಾತ್ರ ಪ್ರಮುಖವಾದುದು.

ನಾಡಪ್ರಭು ಕೆಂಪೇಗೌಡರ ಕಾಲಕ್ಕೆ ಬೆಂಗಳೂರು ನೀರು ಸರಬರಾಜಿನ ವಿಚಾರದಲ್ಲಿ ಸ್ವತಂತ್ರವಾಗಿತ್ತು. ಅದಕ್ಕೆ ಕಾರಣ ಅಂದು ಬೆಂಗಳೂರಿನಲ್ಲಿದ್ದ ಅಸಂಖ್ಯಾತ ಕೆರೆ ತೊರೆಗಳು!
ನಗರೀಕರಣದ ಹೊಡೆತಕ್ಕೆ ಸಿಕ್ಕಿ ಭಾಗಶಃ ೮೦-೮೫% ಕೆರೆಗಳು ಇಂದು ಬಹುಮಹಡಿ ಕಟ್ಟಡಗಳನ್ನು, ಜನವಸತಿ ಬಡಾವಣೆಗಳನ್ನು ಹೊತ್ತು ನಿಂತಿದೆ. ಇಂದು ಬೆಂಗಳೂರು ಕಾವೇರಿಯ ಮೇಲೆ ಅವಲಂಬಿಸಿದೆ.
ಕರ್ಣಾಟಕದಲ್ಲಿ ದಕ್ಷಿಣ ಕೇಂದ್ರಿತ ಅಭಿವೃದ್ಧಿ ಇರುವ ಕಾರಣ ಕಾವೇರಿ ಕೊಳ್ಳದ ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರುಗಳ ಬೆಳವಣಿಗೆಯಲ್ಲಿಯೂ ಸಹ ಕಾವೇರಿಯದ್ದು ಬಹುಮುಖ್ಯ ಪಾತ್ರ!


ಆದರೆ ಕರ್ನಾಟಕಕ್ಕೆ ಭಾರತ ಒಕ್ಕೂಟದಲ್ಲಿ ಕೇಂದ್ರದಿಂದ ಆದ ಅನ್ಯಾಯಗಳು ಕರ್ನಾಟಕದ ಎಲ್ಲಾ ಪ್ರಾಂತ್ಯಗಳಿಗೂ ಹಂಚಲಾಗಿದೆ! 

ಅದರಲ್ಲೂ ಕಾವೇರಿಯ ವಿಚಾರಕ್ಕೆ ಆದ ಅನ್ಯಾಯ ಅತಿ ದೊಡ್ಡದ್ದು!
ಉಚ್ಛ ನ್ಯಾಯಾಲಯ ಕಾವೇರಿ ವಿಷಯದಲ್ಲಿ "ಹುಚ್ಚ ನ್ಯಾಯಾಲಯ"ವಾಗಿದ್ದಂತು ನಿಜ!
ಮಹದಾಯಿ ವಿಚಾರದಲ್ಲೂ ಗಾಯದ ಮೇಲೆ ಬರೆ!

ಕೃಷ್ಷೆಯ ವಿಚಾರದಲ್ಲಂತು ಒಂದೆಜ್ಜೆ ಮುಂದೆ ಸಾಗಿ ತುಂಗಭದ್ರಾ ಅಣೆಕಟ್ಟನ್ನೇ ಕಿತ್ತುಕೊಂಡಿದೆ ಕೇಂದ್ರ ಸರ್ಕಾರ! ಈ ವಿಷಯ ಬಹಳಷ್ಟು ಕನ್ನಡಿಗರಿಗೆ ತಿಳಿದೇ ಇಲ್ಲ!

ಇನ್ನೂ ಈಗ KRS, ಹಾರಂಗಿ, ಗೋರೂರು, ಯಗಚಿ ಇತ್ಯಾದಿ ಕಾವೇರಿ ಕೊಳ್ಳದ ಅಣೆಕಟ್ಟುಗಳನ್ನು ಕೇಂದ್ರ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ!
ಇದನ್ನು ನಾಲ್ಕು ವಾರಗಳಲ್ಲಿ ಮಾಡುವಂತೆ ನಮ್ಮ ಭಾರತದ ಹುಚ್ಚ ನ್ಯಾಯಾಲಯವು, ಭಾರತ ಸರ್ಕಾರಕ್ಕೆ ಆದೇಶಿಸಿರುವುದು.
ಕಾವೇರಿ ಕೊಳ್ಳದ ಬಹಳಷ್ಟು ಅಣೆಕಟ್ಟುಗಳು ರಾಜಮಹಾರಾಜರ ಸಾರ್ವಜನಿಕ ರೈತರ ಆಸ್ತಿ!
KRS ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಅರಸಿಯರ ಮೂಟೆಗಟ್ಟಲೆ ಒಡವೆಗಳನ್ನು ಬಾಂಬೆಯ ಚೀನಿವಾರ ಪೇಟೆಯಲ್ಲಿ ಹರಾಜು ಹಾಕಿ ದುಡ್ಡು ತಂದು ಕಟ್ಟಿಸಿದ್ದಾರೆ!
ಮಂಡ್ಯ ಮೈಸೂರಿನ ಸುತ್ತಮುತ್ತಲಿನ ಸಾರ್ವಜನಿಕರು ರೈತರು, ತಮ್ಮ ಮನೆಯ ಕೆಲಸವೇನೋ ಎಂಬಂತೆ ಎತ್ತಿನಬಂಡಿಗಳನ್ನು ಕಟ್ಟಿಕೊಂಡು ಬಂದು ಕನ್ನಂಬಾಡಿಯಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.







ಹೀಗಿರುವಾಗ ಯಾವ ನೈತಿಕತೆಯ ಹಕ್ಕಿನಿಂದ ಕೇಂದ್ರಕ್ಕೆ ಕಾವೇರಿ ಕೊಳ್ಳದ ಅಣೆಕಟ್ಟುಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ?


ಮಹದಾಯಿ, ಕೃಷ್ಣೆ, ಕಾವೇರಿ ವಿಚಾರಗಳನ್ನು ಕೇವಲ ಜಲವಿವಾದಗಳಾಗಿ ನೋಡದೆ, ಇದರ ಹಿಂದಿನ ರಾಜಕೀಯ ಷಡ್ಯಂತ್ರವನ್ನು ಕೆದಕುತ್ತಾ ಹೋದರೆ ಕೆಲವು ರೋಚಕ ಸಂಗತಿಗಳು ಹೊರಬರುತ್ತವೆ!
ಕರ್ನಾಟಕದ ಏಳಿಗೆಯನ್ನು ಸಹಿಸದ ಪರದೇಸಿ ಹಿತಾಸಕ್ತಿಗಳ ಕೈವಾಡ ಇಲ್ಲಿ ಕಾಣುತ್ತದೆ!
ಕಾವೇರಿ ನೀರೊಂದು ಇಲ್ಲವೆಂದಾದರೆ ಮೂಲ ಸೌಕರ್ಯದಿಂದ ವಂಚಿತವಾಗುವ ಬೆಂಗಳೂರಿಗೆ ವಿದ್ಯುತ್ತಿನ ಅಭಾವವಾಗುವುದೂ ಸಹ ಖಂಡಿತ. ಕರ್ನಾಟಕ ಬಳಸುವ ೧೦೦% ವಿದ್ಯುತ್ತಿನಲ್ಲಿ ಕೇವಲ ೪-೫% ವಿದ್ಯುತ್ ಮಾತ್ರವನ್ನು ತಮಿಳುನಾಡಿನಿಂದ "ಕೊಂಡುಕೊಳ್ಳಲಾಗುತ್ತದೆ".
ಇಂತಹ ಅವ್ಯವಸ್ಥೆಗಳಿಂದಾಗಿ ಬೆಂಗಳೂರನ್ನು ಹೈರಾಣಾಗಿಸುವ ಸಾಧ್ಯತೆಗಳಿವೆ! ಪಕ್ಕದ ರಾಜ್ಯವೊಂದು ಇಬ್ಬಾಗವಾಗಿ ಹೊಸ ರಾಜಧಾನಿಯನ್ನು ಹೇಗೆ ಅಭಿವೃದ್ಧಿಗೊಳಿಸುವುದು ಎಂದು ಕಾಯುತ್ತಾ, ಈ ಬೆಂಗಳೂರಿನ ಅವಸ್ಥೆಯನ್ನು ಎನ್ಕ್ಯಾಷ್ ಮಾಡಿಕೊಳ್ಳುವ ಸಾಧ್ಯತೆ ಇದೆ!

ಜಲ ಮತ್ತು ವಿದ್ಯುತ್ತಿನ ಅಭಾವವನ್ನು ಬೆಂಗಳೂರು ಎದುರಿಸುವಂತಾದರೆ, ನಿಜಕ್ಕೂ ಅದರ ದುಷ್ಪರಿಣಾಮ ರಾಜ್ಯದ ಆರ್ಥಿಕತೆಯ ಮೇಲೆ ಬೀರಬಹುದು. ಐಟಿ ಸೆಕ್ಟಾರ್, ಕೈಗಾರಿಕೆಗಳು, ಇತ್ಯಾದಿ ಕರ್ನಾಟಕದಿಂದ ವರ್ಗವಾಗುವುದು ಪರರಾಜ್ಯಗಳಿಗೆ ತಮ್ಮ ಹಿತಾಸಕ್ತಿ ಅವಕಾಶ ಮಾಡಿಕೊಡುವುದಂತು ನಿಜ. ಹೊಸ ರಾಜ್ಯವಾದ ಸೀಮಾಂಧ್ರದ ಹೊಸ ರಾಜಧಾನಿ ಅಮರಾವತಿ, ತೆಲಂಗಾಣದ ಹೈದರಾಬಾದ್, ಮತ್ತು ತಮಿಳುನಾಡಿನ ಇತರೇ ನಗರಗಳಿಗೆ ಶಿಫ್ಟ್ ಆಗುವುದಂತು ನಿಜ.


ಇನ್ನು ಕೇಂದ್ರದಲ್ಲಿ ತನ್ನದ್ದಲ್ಲದ ಸರ್ಕಾರ ರಾಜ್ಯದಲ್ಲಿರುವುದರಿಂದ ಅದಕ್ಕೆ ನಮ್ಮ ರಾಜ್ಯದ ಹಿತಾಸಕ್ತಿ ಮುಖ್ಯವೆನಿಸದು! ಬದಲಿಗೆ ಆದಷ್ಟು ತುಚ್ಛೀಕರಿಸುವ ಪ್ರಯತ್ನವನ್ನಂತೂ ಮಾಡದೆ ಇರದು!

ರಾಜ್ಯದ ಮುಖ್ಯಮಂತ್ರಿಗಳು ದೇಶದ ಪ್ರಧಾನಿಗೆ ೬-೭ ಪತ್ರಗಳು ಬರೆದರೂ ಪ್ರಧಾನಿ ಪ್ರತಿಕ್ರಿಯೆ ನೀಡಲಿಲ್ಲ ಎಂಬ ವಿಚಾರವನ್ನೇ ಪರಿಗಣಿಸಿದರೆ, ರಾಜ್ಯ ಸರ್ಕಾರವು ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ ಎಂದು ಸುದ್ಧಿ ಹಬ್ಬಿಸಿ ಕೇಂದ್ರ ಸರ್ಕಾರದ ಮತ್ತು ದೇಶದ ಪ್ರಧಾನಿಯ ಅಸಡ್ಡೆಯ ಬಗ್ಗೆ ತೋರಿ ಅದರ ಮೇಲೆ ಆಪಾದನೆ ಒರೆಸುತ್ತಿದೆ ಎನ್ನಬೇಕೇ? ಅಥವ ಅದೇ ಸತ್ಯ ಎಂದು ಪರಿಗಣಿಸಬೇಕೆ?

ಇಂದು ನಮ್ಮ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯದ ಪ್ರಜೆಗಳ ಹಿತಾಸಕ್ತಿಯ ಬಗ್ಗೆ ಏನೇ ನಿರ್ಧಾರ ತೆಗೆದುಕೊಳ್ಳ ಬೇಕಿದ್ದರೂ ಸಹ ದಿಲ್ಲಿಯ ಹೈಕಮಾಂಡ್ ಆದೇಶಕ್ಕಾಗಿ ಕಾಯುವಂತಾಗಿದೆ!
ಇನ್ನು ರಾಜ್ಯದ ೧೭-೧೮ ಸಂಸದರ ಸ್ಥಿತಿಯೇನೂ ಭಿನ್ನವಾಗಿಲ್ಲ! ರಾಜ್ಯದ ಹಿತಕ್ಕಾಗಿ ಏನೇ ಮಾತಾಡಬೇಕಾದರೂ, ಏನೇ ನಿಲುವುಗಳನ್ನು ಪ್ರಕಟಿಸಬೇಕಾದರೂ ನಾಗಪುರದ ಹೈಕಮಾಂಡ್, sorry sorry, ದಿಲ್ಲಿಯ ಹೈಕಮಾಂಡ್'ನ ಆದೇಶಕ್ಕಾಗಿ ಕಾಯುವಂತಾ ದುಸ್ಥಿತಿಯು ಎಲ್ಲಾ so called ರಾಷ್ಟ್ರೀಯ ಪಕ್ಷಗಳಿಗಿದೆ!
ಅದು ಈಗಿನ ಕಾಂಗ್ರೆಸ್ ಪಕ್ಷ, ಆಗಿನ ಭಾಜಪ ಪಕ್ಷ ಯಾವುದನ್ನೂ ಬಿಟ್ಟಿಲ್ಲ! ಇದೊಂದು ರೀತಿ ಆಧುನಿಕ ಗುಲಾಮಗಿರಿಯಾಗಿದೆ. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳ ಕೆಸರೆರಚಾಟ ಕನ್ನಡಿಗರನ್ನು ಅನಾಥ ಪ್ರಜ್ಞೆಯಲ್ಲಿ ಮುಳುಗುವಂತೆ ಮಾಡಿದೆ!

ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಎಕ್ಕುಟ್ಟೋಗಬೇಕು. ಅದು ರಾಜ್ಯದ ಕಾಂಗ್ರೆಸ್ ಸರ್ಕಾರದ ತಲೆಗೆ ಕಟ್ಟಿ ಅದನ್ನು ಮುಂದಿನ ಚುನಾವಣೆಯಲ್ಲಿಯ ಸರಕಾಗಿಸಿಕೊಂಡು ಕಾಂಗ್ರೆಸ್ ಪುನಃ ಕರ್ನಾಟಕಲ್ಲಿ ಅಧಿಕಾರಕ್ಕೆ ಬಾರದಂತೆ ನಿರ್ವಹಿಸಬೇಕು!

ರಾಜ್ಯ ಸರ್ಕಾರವು ಅಸಹಾಯಕ ಸ್ಥಿತಿಯಲ್ಲಿ ಎಲ್ಲವನ್ನು ಕೇಂದ್ರ ಸರ್ಕಾರವೇ ಮಾಡಿದ್ದು ಎಂಬಂತೆ ಆಪಾದನೆಯನ್ನು ಹೊರೆಸಿ ಕೇಂದ್ರ ಸರ್ಕಾರವನ್ನು ದೂಷಿಸಬೇಕು!

ಪ್ರಚಾರ ಹೆಚ್ಚಾದಂತೆಲ್ಲಾ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಮೇಲೆ ನಿರೀಕ್ಷೆ ಹೆಚ್ಚುತ್ತಿತ್ತು. ಇವರದು ವಿಭಿನ್ನ ವ್ಯಕ್ತಿತ್ವ, ಭಾರತದ ಬಹಳಷ್ಟು ಸಮಸ್ಯೆಗಳು ಇವರಿಂದ ಪರಿಹಾರವಾಗುತ್ತವೆ, ಭಾರತಕ್ಕೆ ಓರ್ವ ಮಹಾನ್ ನಾಯಕ ಸಿಕ್ಕಿದ ಎಂದುಕೊಂಡಿದ್ದೆವು! ಆದರೆ ಅವರಿಗೆ ಕಾವೇರಿ ಸಮಸ್ಯೆ ಭಾರತದ್ದೇ ಅಲ್ಲ ಎನಿಸಿತೇನೊ?
ಹಿಂದಿನ ಸಾಧಾರಣ ಪ್ರಧಾನಿಗಳಂತೆಯೇ ರಾಜಕಾರಣದ ನಂಬರ್ ಗೇಮಿಗಾಗಿ ಜಯಲಲಿತಾಳ ಕೈಗೊಂಬೆಯಾದದ್ದು ದೊಡ್ಡ ದುರಂತ!

ತಮಿಳುನಾಡಿನಲ್ಲಿ ತನಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ತಿಳಿದುಕೊಂಡಿರುವ ಭಾಜಪ, ಇದೇ ಕಾರಣಕ್ಕೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ಬೆಂಬಲಕ್ಕಾಗಿ ಕಾವೇರಿ ವಿಷಯದಲ್ಲಿ ಕನ್ನಡಿಗರನ್ನು ಬಲಿ ಕಾ ಬಕ್ರಾಗಳನ್ನಾಗಿಸಿಕೊಂಡಿದೆ!
ಈಗಿನ ಪ್ರಧಾನಿ ನರೇಂದ್ರ ಮೋದಿಯದ್ದು ವಿಶೇಷ ವ್ಯಕ್ತಿತ್ವವೆಂದು ಹಾಡಿ ಹೊಗಳಿದ್ದನ್ನೆಲ್ಲಾ ಕೇಳಿ, ಈಗ ಇವರ ಜಾಣ ಕುರುಡತ್ವ ನೋಡಿದರೆ "ದೊಡ್ಡಿಯೊಳಗಿನ ಕುರಿಮಂದೆಯೊಳಗೊಂದು ಕುರಿಯಾದೆ" ಎಂಬ ಸಾಲು ನೆನಪಾಗುತ್ತದೆ! ಎಲ್ಲಾ ಪ್ರಧಾನಿಗಳಂತೆ ಈತನೂ ಓರ್ವ ಸಾಮಾನ್ಯ ಪ್ರಧಾನಿ ಎಂಬುದು ತಿಳಿಯಬೇಕಿದೆ.
ಕಾವೇರಿ ವಿಚಾರದಲ್ಲಿ ಪ್ರಭಾವಿತ ಶಕ್ತಿಗಳು ಕರ್ನಾಟಕದ ೧೭-೧೮ ಸಂಸದರು! ನಿಷ್ಪಕ್ಷಪಾತವಾಗಿ ಇದನ್ನು ವಿಶ್ಲೇಷಿಸುತ್ತಾ ಹೋದರೆ, ರಾಜ್ಯ ಸರ್ಕಾರ ವಿಸರ್ಜಿಸಿ ಅಥವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನ ರಾಜಿನಾಮೆಯಿಂದಾಗಿ ಆಗುವ ಪ್ರಯೋಜನ ಏನೂ ಇಲ್ಲ! ಬದಲಿಗೆ ರಾಜ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತದೆ! ಮುಖ್ಯಮಂತ್ರಿಯ ರಾಜಿನಾಮೆಯಿಂದಾಗಿ ರಾಜ್ಯದಲ್ಲಿ ಮಾತ್ರ ರಾಜಕೀಯ ಅಸ್ಥಿರತೆ ಉಂಟಾಗಿ ರಾಜ್ಯವು ಕೇಂದ್ರದ ನೇರ ಆಳ್ವಿಕೆಗೆ ಒಳಪಡುವಂತಹ ಹಿನಾಯಮಾನ ಸ್ಥಿತಿಗೆ ತಲುಪಿಬಿಡುತ್ತದೆ. ಆಗ ನೇರವಾಗಿ ರಾಜ್ಯದ ಅಡಳಿತ ಕೇಂದ್ರಕ್ಕೆ ಒಳಪಟ್ಟು ಹೇಗೆಬೇಕೆಂದಾಗಲೆಲ್ಲ, ಯಾವಾಗಲಾದರೂ ತಮಿಳುನಾಡಿಗೆ ನೀರು ಹರಿಸುವ ಪ್ರವೃತ್ತಿ ಬೆಳೆದುಕೊಳ್ಳಬಹುದು.

ಆದರೆ ಸಂಸದರು ರಾಜಿನಾಮೆ ಕೊಟ್ಟರೆ ಅದರ ಕಥೆಯೇ ಬೇರೆ! ಕೇಂದ್ರ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ನರೇಂದ್ರ ಮೋದಿಯೇ ಈ ವಿಚಾರವಾಗಿ ಮದ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಅನಿವಾರ್ಯತೆ ಉಂಟಾಗುತ್ತದೆ!


ಆದರೆ ಇದು ಆಗುವುದಿಲ್ಲವಲ್ಲ?
ನಮ್ಮ ರಾಜ್ಯ ಸಂಸದರಲ್ಲಿ ೧೭-೧೮ ಸಂಸದರು ಮತ್ತು ಕಾಂಗ್ರೇಸೇತರ ಸಂಸದರು ಕೇಂದ್ರದಲ್ಲಿ ಭಾಜಪಾಕ್ಕೆ ಬೆಂಬಲುಸಿದ್ದಾರೆ. ಅದರಲ್ಲಿ ಮಂಡ್ಯದ ಜೆಡಿಎಸ್ ಸಂಸದ ಪುಟ್ಟರಾಜು ರಾಜಿನಾಮೆ ಕೊಟ್ಟು ತಾವು "ಮತದಾರರ ಭಕ್ತ" ಎಂದು ನಿರೂಪಿಸಿದ್ದಾರೆ!

ಆದರೆ ಮಿಕ್ಕ ಭಾಜಪಾ ಸಂಸದರು???

ಅವರೆಲ್ಲಾ ಮತದಾರರ ಭಕ್ತರಲ್ಲ! ಮೋದಿಯ ಭಕ್ತರು!
ತಮ್ಮನ್ನು ಸಂಸದರನ್ನಾಗಿಸಿದ ಮತದಾರರಿಗಿಂತ, ತಮ್ಮಿಂದ ಆಯ್ಕೆಯಾದ ಪ್ರಧಾನ ಮಂತ್ರಿ ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಕೊಳಕು ರಾಜಕಾರಣವೇ ಹೆಚ್ಚಾಯ್ತು ಅವಕ್ಕೆ!
"ನಿಮ್ಮ ಜಾಗದಲ್ಲಿ ನಾನೇನಾದರು ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದೆ" ಎಂದು ಬೊಗಳೆ ಬಿಡುವ ರಾಜ್ಯದ ಸಂಸದನೊಬ್ಬನಿಗೆ ಪಾಪ! ತಿಳಿದೇಯಿಲ್ಲ ಈ ವಿಚಾರಕ್ಕೆ ಯಾರ ರಾಜಿನಾಮೆಯ ಅವಶ್ಯಕತೆ ಇದೆ ಎಂದು.
ನಿಜಕ್ಕೂ ಇಂದಿನ ದುಸ್ಥಿತಿ ಕನ್ನಡಿಗರಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಷ್ಟಿದೆ ಮತ್ತದರ ಪ್ರಾಮುಖ್ಯತೆ ಏನೆಂಬುದನ್ನು ಮನಗಾಣುವಂತೆ ಮಾಡಿದ್ದರೆ ಒಳಿತು. ಕೇಂದ್ರ ಸರ್ಕಾರದ ಕೀಳಭಿರುಚಿಯ ಧೋರಣೆ, ರಾಜ್ಯ ಸರ್ಕಾರದ ಅಸಹಾಯಕ ಸ್ಥಿತಿ, ಇವೆರಡರ ನಡುವಿನ ಕೆಸರೆರಚಾಟ, ನ್ಯಾಯಾಂಗದ ಮಾರುಕಟ್ಟೆಯಾಗಿರುವ ಭಾರತದ ಹೆಮ್ಮೆಯ ಹುಚ್ಚ ನ್ಯಾಯಾಲಯ ಇವೆಲ್ಲವೂ ಸಾಮಾನ್ಯ ಕನ್ನಡಿಗನಿಗೆ ಒಳ್ಳೆಯ ಟ್ರೀಟ್ಮೆಂಟನ್ನೇ ಕೊಟ್ಟಿದೆ!
ಸದಾ ಪ್ರಾದೇಶಿಕ ಪಕ್ಷಗಳಿಗೇ ಅಧಿಕಾರದ ಗದ್ದುಗೆ ಏರಲು ಸಹಕರಿಸುವ ತಮಿಳುನಾಡು, ಇಂಥ ವಿಚಾರಗಳಲ್ಲಿ ಚಾಣಾಕ್ಷತೆ ಮೆರೆಯುವುದಂತು ನಿಜ!


"ಹೇಯ್ ಪ್ರಧಾನ ಮಂತ್ರಿ, ನೋಡು, ಇಂದು ತೀರ್ಪು ನಮ್ಮ ಪರ ಬರಲಿಲ್ಲವೆಂದಾದರೆ ನಮ್ಮ ರಾಜ್ಯದ, ನಮ್ಮ ಪಕ್ಷದ ಎಂ.ಪಿ.ಗಳೆಲ್ಲ ಪಾರ್ಲಿಮೆಂಟಿಗೆ ರಾಜಿನಾಮೆ ಕೊಟ್ಟು ನಿನ್ನ ಖುರ್ಚಿಯನ್ನೇ ಕೆಡವಿಬಿಡುತ್ತಾರೆ" ಎಂದು ಎಚ್ಚರಿಸಿದರೋ, ಅಥವ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಾಜೂಕಾಗಿ ಹೇಳಿದರೋ ಸಾಕು! ಎಂಥದ್ದೇ ವಾದ ಇದ್ದರೂ ಏನೇ ಅನ್ಯಾಯವಾದರೂ ತೀರ್ಪು ತಮಿಳುನಾಡಿನ ಹಿತಾಸಕ್ತಿ ಕಾಯುವಂತದ್ದಾಗಿರುತ್ತದೆ!

ಆದರೆ ಇಂಥಾ ಅವಕಾಶ ಕರ್ಣಾಟಕಕ್ಕೆ ಸಿಗುವುದಿಲ್ಲ! ಏಕೆಂದರೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಕನ್ನಡಿಗರಿಗೆ ಮಡಿವಂತಿಕೆ ಹೆಚ್ಚು! ಎಷ್ಟೇ ಆದರೂ ನಮ್ಮಲ್ಲಿ ದೇಶಭಕ್ತರು ಹೆಚ್ಚಲ್ಲವೇ?
ಕರ್ನಾಟಕ ಸುಟ್ಟು ಬೂದಿಯಾದರೂ ಪರವಾಗಿಲ್ಲ, ದೇಶ ಉದ್ದಾರವಾಗಬೇಕು ಎನ್ನುವ ಈ ಮತಿಗೇಡಿಗಳಿಗೆ ಪಾಪ! ಕರ್ನಾಟಕವೂ ಭಾರತದಲ್ಲೇ ಇದೆ ಎಂಬುದನ್ನು ಮರೆತಂತಿದೆ.
ಮನೆ ಮನೆಗಳು, ಮನೆಯಲ್ಲಿಯ ಮನಸ್ಸುಗಳು ಚೆನ್ನಾಗಿದ್ದರೆ, ಆ ಇಡೀ ಊರು ಚೆನ್ನಾಗಿರುತ್ತದೆ. ಹೀಗೇ ಊರುಗಳು ಚೆನ್ನಾಗಿದ್ದರೆ ನಾಡು ಸಹ ಚೆನ್ನಾಗಿರುತ್ತದೆ. ನಾಡುಗಳು ಹೀಗೆ ಒಳಿತನ್ನು ಕಂಡರೆ ದೇಶವೂ ಸುಭೀಕ್ಷವಾಗಿರುತ್ತದೆ.
ದೇಶ ಮೊದಲು ಎಂಬುದು "ಅಡಿಪಾಯಕ್ಕಿಂತ ಸೂರು ಮುಖ್ಯ" (Roof is Greater than Basement) ಎಂಬ ದಡ್ಡತನದ ವಾಕ್ಯದಂತಿರುತ್ತದೆ!
ಇದು ಒಂದು ರೀತಿ ನೆಲದ ಮೇಲೆ ಅಡಿಪಾಯ ಹಾಕಿ ಮನೆ ಕಟ್ಟುತ್ತೀನಿ ಎನ್ನುವ ಬದಲು ಆಕಾಶಕ್ಕೆ ನನ್ನ ಮನೆಯ ಸೂರನ್ನು ನೇತು ಹಾಕ್ತಿನಿ ಎಂಬಂತೆ!


ಸದ್ಯದ ಕರ್ನಾಟಕದ ಪರಿಸ್ಥಿತಿ ಜನತೆಯಲ್ಲಿ ತಮ್ಮವರು ಯಾರು, ಪರದೇಸಿಗಳ್ಯಾರು, ಹೈಕಮಾಂಡ್ ಗುಲಾಮರು ಯಾರು, ಯಾರು ನಮ್ಮ ಹಿತ ಕಾಯುವಲ್ಲಿ ಸಬಲರು ಎಂದು ಮನದಟ್ಟು ಮಾಡಿಕೊಳ್ಳುವ ಅವಕಾಶ ಕೊಟ್ಟಿದೆ.
ಈಗಲೂ ಬುದ್ಧಿ ಕಲಿಯದಿದ್ದರೆ ಪ್ರಯೋಜನವಿಲ್ಲ!
ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ತತ್ವ ಸಿದ್ದಾಂತ ಉಳ್ಳ ಪ್ರಾದೇಶಿಕ ಪಕ್ಷದ ಅವಶ್ಯಕತೆ ನಿಜಕ್ಕೂ ಬಹಳಷ್ಟಿದೆ. ಅದಕ್ಕೆ ತಕ್ಕಂತೆ ನಡೆಯಲಿ ಕನ್ನಡಿಗನು ಸಾಗುವ ದಾರಿ. ಪ್ರಾದೇಶಿಕ ಪಕ್ಷಗಳ ಉದಯಕ್ಕೆ ನಾಂದಿಯಾಡಲಿ ಈ ಘಟನೆಗಳು. ನಾಡಪರ ಕಾಳಜಿ ಉಳ್ಳವರು ಅಧಿಕಾರದ ಗದ್ದುಗೆ ಏರುವಂತಾಗಲಿ.
ಸದ್ಯಕ್ಕೆ ನೀರನ್ನು ಉಳಿಸಿಕೊಳ್ಳುವುದರ ಜೊತೆಗೆ ಕಾವೇರಿ ಕೊಳ್ಳದ ಅಣೆಕಟ್ಟುಗಳು ಕೇಂದ್ರದ ಹಿಡಿತಕ್ಕೆ ತಲುಪದಂತೆ ಪ್ರತಿಭಟಿಸಿ ವಿರೋಧಿಸಿಯಾದರೂ ತಡೆಯಬೇಕಿದೆ. ಜೊತೆಗೆ, ಈಗಾಗಲೇ ಕೇಂದ್ರ ಹಿಡಿತಕ್ಕೆ ಒಳಪಟ್ಟಿರುವ ತುಂಗಾಭದ್ರ ಅಣೆಕಟ್ಟನ್ನು ಪುನಃ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸಬೇಕಿದೆ. ವಿಕೇಂದ್ರೀಕರಣಕ್ಕಾಗಿ ಹೋರಾಡಬೇಕಿದೆ. ಕೇಂದ್ರದ ಹಿಡಿತದಲ್ಲಿ ರಕ್ಷಣಾ ಖಾತೆ ಮತ್ತು ವಿದೇಶಾಂಗ ಖಾತೆ ಇದ್ದರೆ ಅದೇ ಹೆಚ್ಚು! ಹೀಗಿರುವಾಗ ಕಂಡಕಂಡಲ್ಲೆಲ್ಲಾ ತನ್ನ ಪಾರುಪತ್ಯ ಮೆರೆಸಲು ಮುಂದಾಗಿ ಸರ್ವಾಧಿಕಾರದ ದೋರಣೆ ತಳೆಯಲು ಆರಂಭಿಸುತ್ತಿರುವುದು ದುರಂತ!
ದೇಶದ ಏಕತೆ ಇದು ಎಂದಿಗೂ ಒಳಿತನ್ನು ಉಂಟು ಮಾಡಲಾಗದು. ವಿಕೇಂದ್ರೀಕರಣ ಸಾಧ್ಯವಾಗದಿದ್ದರೆ ದೇಶ ಹೊಡೆದು ಚೂರುಗಳಾಗುವುದಂತು ಖಚಿತ!
ಈ ಸಮಸ್ಯೆಗಳಿಗೆಲ್ಲಾ ಪೂರ್ಣವಿರಾಮವಾಗಿ ವಿಕೇಂದ್ರೀಕರಣದ ಅವಶ್ಯಕತೆಯು ಇದೆ.



ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ




ಭಾನುವಾರ, ಆಗಸ್ಟ್ 21, 2016

ಬೆಟ್ಟದ ಮಾರಿ ಚಾಮುಂಡಿ. ಆದಿ ಕರ್ನಾಟರ ಶಾಕ್ತ ಪರಂಪರೆಯ ಮಾತೃ ದೈವ. ಮಹಿಷ ಆಕೆಯ ಬಂಟನೆ ಹೊರತು ಎದುರಾಳಿಯಲ್ಲ!



ಮಾರಿ ಬ್ರಾಹ್ಮಣನಲ್ಲ! ಕೋಣ ಮಾದಿಗನಲ್ಲ! ಮಹಿಷ ಖಳನಾಯಕನಲ್ಲ!

ಲೇಖಕರು:- ಇಮ್ಮಡಿ ಪುಲಕೇಶಿ 




ಭಾರತದ ಪ್ರಾಚೀನ ಸಂಸ್ಕೃತಿ ಪರಂಪರೆಯನ್ನು ಬೆನ್ನಟ್ಟಿದರೆ, ನಮಗೆ ಸಿಗುವುದು ವೈದಿಕ ಪೂರ್ವ ಅವೈದಿಕ ಸನಾತನ ಪರಂಪರೆ. ಇದನ್ನು 'Ancient Indian Paganism' (ಭಾರತೀಯ ಪುರಾತನ ವಿಗ್ರಹಾರಾಧನೆ) ಅಥವ "Ancient Indian Primitive Culture" ಎನ್ನಬಹುದು. ಇದರ ಜೀವಾಳ "ಸತ್ತ ಹಿರಿಯರ/ಪೂರ್ವಜರ ಆರಾಧನೆ" (Ancestral Worship/Dead Ancestral Worship".
ಇದನ್ನು ಜಾನಪದೀಯವಾಗಿ 'ಹೊಲಯ ಜೀವನ ಶೈಲಿ' ಎನ್ನಲಾಗುತ್ತದೆ.
ಈಗಲೂ ಈ ಪದ್ಧತಿಯನ್ನು 'ಹೊಲಯ' (Ho-la-ya) ಎಂದೇ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗು ಐರೋಪ್ಯ ದೇಶದ ಮೂಲನಿವಾಸಿಗಳು ಕರೆಯುತ್ತಾರೆ. ಭಾರತದಲ್ಲಿ ಹೊಲಯ ಎಂಬ ಸಮುದಾಯದ ಸಂಸ್ಕೃತಿಯಲ್ಲಿಯೂ ಸಹ ನಿರಾಕಾರ-ಆಕಾರ ವಿಗ್ರಹಾರಾಧನೆ ನಡೆಯುತ್ತದೆ, ಹಾಗು ಅದರ ಜೀವಾಳವು ಸತ್ತ ಹಿರಿಯರ ಆರಾಧನೆಯಲ್ಲಿಯೇ ಅಡಗಿದೆ.



ಎಡೆ ಬಡಿಸಿ ಸತ್ತ ಹಿರಿಯರನ್ನು ಆರಾಧಿಸುವ ಕ್ರಮಕ್ಕೆ ಇಲ್ಲಿಯ ಕೆಲ ಜಾನಪದರಲ್ಲಿಯೂ ಹಾಗು, ಇತರೇ ವಿದೇಸಿ ದೇಶಗಳ ಅಲ್ಲಿನ ಮೂಲನಿವಾಸಿಗಳಲ್ಲೂ 'ಹೊಲಯ' ಎಂಬ ಪದವೇ ಬಳಕೆಯಲ್ಲಿರುವುದು ಸೂಜಿಗದ ಸಂಗತಿ.
ಇದೇ ಪದ್ಧತಿಯು ದ್ರಾವಿಡ ಭಾರತದಲ್ಲಿ 'ಅಸೀವಗಂ' ಎನಿಸಿಕೊಳ್ಳುತ್ತದೆ. ಸಂಸ್ಕೃತ ರೂಪದಲ್ಲಿ ಇದು 'ಅಜೀವಿಕ' ಎಂದಾಗುತ್ತದೆ.
ಆದಿಮ (ಶಾಕ್ತ), ಶೈವ, ವೈಷ್ಣವ, ಜೈನ, ಬೌದ್ಧ, ವೈದಿಕ ಧರ್ಮಗಳೆಲ್ಲಾ ಅಜೀವಿಕ (ಆಚರಣಾ/ಜೀವನ ಶೈಲಿ) ವ್ಯಾಪ್ತಿಯಲ್ಲೇ ಇವೆ.
ಈ ವಿಷಯವಾಗಿ ಮತ್ತೊಂದು Articleನಲ್ಲಿ ವಿವರವಾಗಿ ಬರೆಯುತ್ತೇನೆ.

ಸದ್ಯಕ್ಕೆ, ಪ್ರಸ್ತುತ Topicಗೆ ಬರುವ.
ಮೃಗ - ಪೂರ್ಣವಾನರ - ಅರೆವಾನರ - ನರವಾನರ - ಆದಿ ಮಾನವನ ವಿಕಾಸನದ ಹಂತದಲ್ಲಿಯೇ ಆಧ್ಯಾತ್ಮ ಮತ್ತು ದೈವೀಕ ನೆಲೆಯಲ್ಲಾದ ಬೆಳವಣಿಗೆಗಳ ಪಲವಾಗಿ ಮೃಗ, ಪೂರ್ಣವಾನರ, ಅರೆವಾನರ, ಮತ್ತು ಆದಿ ಮಾನವರನ್ನು ಸೂಚಿಸುವ (ಹೋಲುವ) ಕೆಲ ದೈವಗಳನ್ನು ಇಂದಿಗೂ ಈಗಿನ ಭಾರತೀಯ ಪರಂಪರೆಯಲ್ಲಿ ಕಾಣಬಹುದಾಗಿದೆ.
ಮತ್ಸ್ಯ, ವರಾಹ, ನರಸಿಂಹ, ಹನುಮ, ಜಾಂಭವ, ಭೈರವ (ಶಿವ), ಪರಶುರಾಮ, ಇತ್ಯಾದಿ ಅವತಾರಿ ದೈವಗಳೇ ಇದಕ್ಕೆ ಸಾಕ್ಷಿ.










ಇವೆಲ್ಲದಕ್ಕೂ ಒಂದೇ ಮೂಲವೆಂಬಂತೆ, ಭರತ ಭೂಮಿಯ ಎಲ್ಲಾ ಸಂಸ್ಕೃತಿ ಮತ್ತು ಪರಂಪರೆಗೂ ಮೂಲ ಮತ್ತು ಅತ್ಯಂತ ಪ್ರಾಚೀನವೇ 'ಶಕ್ತಿ'! ಅರ್ಥಾತ್ ಮಾತೃ ಪರಂಪರೆಯ ಮಾತೃ ದೈವಗಳು.
ಭಾರತೀಯ ಪ್ರಾಚೀನ ಧಾರ್ಮಿಕ ಇತಿಹಾಸದಲ್ಲಿ ಈ ಶಾಕ್ತ ಪರಂಪರೆಯ ಪಾತ್ರ ಅಗ್ರಗಣ್ಯ!
ಭಾರತದ ಎಲ್ಲಾ ಧರ್ಮದಲ್ಲೂ ಶಕ್ತಿಯರು (ಶಾಕ್ತ ಧರ್ಮದ) ಹಸ್ತಕ್ಷೇಪವಿದೆ. ಆದಿಮರಲ್ಲಿ (ಶಾಕ್ತರಲ್ಲಿ) ಆದಿಶಕ್ತಿ, ಮಾರಿ, ಚೌಡಿ, ಊರ ಅಮ್ಮ, ಗ್ರಾಮದೇವತೆಯಾಗಿ, ಶೈವದಲ್ಲಿ ಭಾಗಶಃ ಆದಿಮರಲ್ಲಿದ್ದಂತೆಯೇ ಇದ್ದು, ವೈಷ್ಣವದಲ್ಲಿ ಸಿರಿದೇವಿ ಭೂದೇವಿಯರಾಗಿ, ಬೌದ್ಧ ಹಾಗು ಜೈನರಲ್ಲಿ ಯಕ್ಷಿಣಿಯರಾಗಿ ತನ್ನ ಅಸ್ತಿತ್ವವನ್ನು ಎಲ್ಲೆಡೆ ಮೆರೆದಿದೆ.

ಭಾರತದ ಈ ಶಕ್ತಿ (ಶಾಕ್ತ) ಧರ್ಮವು ಪ್ರಾಚೀನ ಭಾರತದ ಮೂಲನಿವಾಸಿಗಳು ಎನಿಸಿಕೊಳ್ಳುವ ಆದಿ ದ್ರಾವಿಡರು, ಆದಿ ಕರ್ಣಾಟರು, ನಾಗರು, ಜಾಂಭವರು, ಮಾತಂಗರು, ಒಟ್ಟಾರೆ ಆದಿಮ ಸಂಸ್ಕೃತಿಯ ಮೂಲವಾಗಿದೆ.

ಮೇಲೆ ತಿಳಿಸಿರುವ ಎಲ್ಲಾ ಪ್ರಾಚೀನ ಜನಾಂಗಗಳು ಹಿಂದೆ ಭಾರತದ ತುಂಬೆಲ್ಲಾ ಹರಡಿದ ಪ್ರಾಚೀನ ಜನಸಮುದಾಯದಗಳಾಗಿವೆ. ಇವರದ್ದು ಮಾತೃ ಪ್ರಧಾನ ಸಮಾಜವಾಗಿದ್ದು, ಭಾರತದಲ್ಲಿ ರಾಜರಾಗಿ ಆಳಿದ್ದ ರಾಜರ ಅಥವ ರಾಜಮನೆತನಗಳ ಹೆಸರುಗಳಲ್ಲಿ ಮಾತೃ ಸೂಚಕ ಪದಗಳ ಬಳಕೆಯೇ ಸಾಕ್ಷಿಯಾಗಿದೆ.

ಸತಿಯ ಪುತ್ರರು, ಗೌತಮಿ ಪುತ್ರರು, ಹರತಿ ಪುತ್ರರು, ಮಾತಂಗಿ ಪುತ್ರರು, ಮೋರಿಯ ಪುತ್ರರು, ಇತ್ಯಾದಿ ನಾಮಧೇಯದ ಅರಸರು ಮತ್ತು ಅರಸುಕುಲಗಳೇ ಇದಕ್ಕೆ ಸಾಕ್ಷಿ.


'ಮಾರಿ' ಕೆಡುಕಿನವಳಲ್ಲ! ಈ ನೆಲದ ದೈವ! ಭಾರತದ ಆದಿಮ ಪರಂಪರೆಯೂ ಮಾತೃ ದೈವ! ಮೂಲ ಶಕ್ತಿ! ಆದಿ ಶಕ್ತಿ ಸ್ವರೂಪಳು!

ಮಾನವ ತನ್ನ ವಿಕಾಸನದ ಆದಿಯಿಂದಲೂ ಎಲ್ಲದಕ್ಕೂ ಪ್ರಕೃತಿಯ ಮೇಲೆ ಅವಲಂಬಿತ. ಇದು ಲೌಕಿಕ ಮತ್ತು ಬೌದ್ಧಿಕ ಸತ್ಯ! ಆಗಲೇ ಆತ ಪ್ರಕೃತಿಯನ್ನು ದೈವೀಕರಿಸಿ, ದೈವ, ದೇವರುಗಳ ಲೌಕಿಕ ಸೃಷ್ಟಿಗೆ ಕಾರಣನಾದ!
ತನೆಗೆ ಒಳಿತು ಮಾಡಿದ್ದನ್ನು, ಮಾಡಬಲ್ಲದ್ದನ್ನು ಒಳಿತುಂಟು ಮಾಡುವ ವಸ್ತು ವ್ಯಕ್ತಿ ಮತ್ತು ಪ್ರಕೃತಿಯನ್ನು ದೈವೀಕರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ.

ಹಾಗೆಯೇ ಆಹಾರ ಪದ್ದತಿಯೂ ಕೂಡ!
ಆದಿ ಮಾನವನು ಮೊದಲಿಗೆ ಗೆಡ್ಡೆ ಗೆಣಸು, ಹಣ್ಣು, ತರಕಾರಿ ತಿಂದನು. ನಂತರ ಆತನಿಗೆ ಮೊದಲು, ಮಾಂಸದ ರುಚಿ ಕಂಡದ್ದು ಸತ್ತ ಪ್ರಾಣಿಯ ಮಾಂಸವನ್ನು ತಿಂದಾಗ.
ನಂತರ ಮೀನುಗಾರಿಕೆ, ಬೇಟೆ, ವ್ಯವಸಾಯ, ಪಶುಸಾಕಾಣಿಕೆ,  ಆರಂಭವಾಯಿತು.

ಗಡ್ಡೆ ಗೆಣಸು ತಿಂದು, ನಂತರ ಮಾಂಸದ ರುಚಿಯನ್ನೂ ಕಂಡು ನಾಗರೀಕತೆ ಸಾಕ್ಷಿಯಾದ ಆದಿ ಮಾನವ ಕುಲವು, ನಾಕರೀಕ ಬಾಳ್ವೆಯ ಆಹಾರ ಪದ್ದತಿಯಲ್ಲಿಯು ಸಹ ಆಯಾ ಪ್ರಾದೇಶಿಕ ಪ್ರಕೃತಿಯ ಮೇಲೆ ಅವಲಂಬಿತನಾಗಿರುತ್ತಾನೆ. ಪ್ರಾದೇಶಿಕವಾಗಿ ಯಾವ ಆಹಾರ ಪದಾರ್ಥಗಳು (ಹಣ್ಣು ಹಂಪಲು ಮಾಂಸ) ಯಥೇಚ್ಛವಾಗಿ ದೊರೆಯುತ್ತವೋ ಅವು ಅಲ್ಲಿನ ಸಂಸ್ಕೃತಿ, ದೈವ, ಆಚರಣೆಗಳೊಂದಿಗೆ ಬೆರೆತುಕೊಂಡಿರುತ್ತವೆ. ಮೂಲ ಸಂಸ್ಕೃತಿ, ಸತ್ತ ಹಿರಿಯರು, ಪೂರ್ವಜರನ್ನು, ದೈವೀಕರಿಸಿ, ಗೌರವಿಸುವ, ಆರಾಧಿಸುವ ಸಂಸ್ಕೃತಿಯ ಪ್ರಾಚೀನ ಜನಸಮುದಾಯಗಳು ತಾವು ತಿನ್ನುವ ಆಹಾರವನ್ನು ಮೊದಲು ಸಾಂಕೇತಿಕವಾಗಿ ದೈವಿಕ ಅರ್ಪಿಸುವ ಪದ್ದತಿಯು ಸಹ ಒಂದು ಪುರಾತನ ಆಚರಣೆಯೇ ಆಗಿದೆ.
ಇದೇ ಪದ್ದತಿ ಮೂಲತಃ ಜಾನಪದೀಯವಾಗಿ "ಹೊಲಯ ಪದ್ದತಿ ~ ಜೀವನ ಶೈಲಿ ~ ಆಚರಣೆ" ಎನಿಸಿಕೊಂಡರೆ, ಭಾರತೀಯ ದ್ರಾವಿಡ ರಾಜ ಪರಂಪರೆಯಲ್ಲಿ 'ಅಸೀವಗಂ' ಎನಿಸಿಕೊಂಡು, ಶಿಷ್ಟ ಸಂಸ್ಕೃತ ರೂಪದಲ್ಲಿ 'ಅಜೀವಿಕ' ಎಂದಾಗುತ್ತದೆ.



ಆಫ್ರಿಕಾ, ಅಮೇರಿಕ, ಆಷ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ, ಇನ್ನೂ Primitive Cultureಗಳನ್ನು (ಅಲ್ಲಿನ ಪುರಾತನ ಪ್ರಾದೇಶಿಕ ಪದ್ಧತಿಯನುಸಾರ ಆಚರಿಸಲ್ಪಡುವ ಆಚರಣೆಗಳು) ಅನುಸರಿಸುವ ಮೂಲ‌ ಆಫ್ರಿಕನ್ನರು, ಅಮೇರಿಕಾದ ದ್ರಾವಿಡ ನಾಗ ಮೂಲದ ರುದ್ರಗಣ ಭಾರತೀಯರು (Red Indians), ಮತ್ತು ಇನ್ನೀತರೆ ಪ್ರದೇಶಗಳ ಮೂಲನಿವಾಸಿಗಳಲ್ಲಿ ಈಗಲೂ ಸಹ, ಅವರ ಪ್ರಾಚೀನ ವಿಗ್ರಹಾರಾಧನೆ, ಎಡೆ ಬಡಿದಿ ಸತ್ತ ಹಿರಿಯರನ್ನು ಪೂಜಿಸುವ, ಆರಾಧಿಸುವ ಪದ್ಧತಿಗೆ 'ಹೊಲಯ', ಮತ್ತು ಅದರ ಸಮಾನಾಂತರವಾದ, ಹೋಲಿಕೆಯುಳ್ಳ ಪದಗಳೇ ಬಳಕೆಯಾಗುವುದುಂಟು.
ಈ ಆಹಾರ ಪದ್ದತಿಯ ವಿಚಾರಕ್ಕೆ ಬಂದಾಗ, ಆಹಾರವನ್ನು ಆಹಾರ ಪದಾರ್ಥವನ್ನು ದೈವದೊಡನೆ ಹಂಚಿ ತಿನ್ನುವ ವಿಷಯದಲ್ಲಿ ಪ್ರಾದೇಶಿಕ ಭಿನ್ನತೆಗಳು ಕಾಣಬಹುದು. ನಿತ್ಯ ಯಥೇಚ್ಛವಾಗಿ ಸಿಗುವ ಸಸ್ಯಹಾರ ಆಹಾರ ಪದಾರ್ಥಗಳು, ಮಾಂಸಾಹಾರ ಆಹಾರ ಪದಾರ್ಥಗಳು ಸಾಮಾನ್ಯ ಆಹಸರಗಳು/ಬಲಿಗಳು ಆದರೆ ಇನ್ನು ಕೆಲವು ಆಹಾರ ಪದಾರ್ಥ, ಪ್ರಾಣಿ ಬಲಿಗಳು ಅಪರೂಪದ್ದಾಗಿರುತ್ತವೆ.
ಒಂದೆಡೆ ನೆಲೆ ನಿಂತು ಜೀವನ ಸಾಗಿಸಲು ಆರಂಭಿಸಿದಾಗ ಪಶುಪಾಲನೆ, ವ್ಯವಸಾಯಕ್ಕೆ ಅಂಟಿಕೊಳ್ಳುತ್ತಾನೆ.

ಆಗ ತನ್ನ ಕಾರ್ಯ ಕಸುಬುಗಳಿಗೆ ಅಡ್ಡಿಯಾಗುವ ಇತರೆ ಪ್ರಾಣಿಗಳನ್ನು ಸಂಹರಿಸಿ, ಅದನ್ನೂ ಸಹ ದೈವೀಕರಿಸುವ ಕೆಲಸವೂ ನಡೆದಿದೆ.
ಉದಾಹರಣೆಗೆ, ವ್ಯವಸಾಯಕ್ಕೆ ಅಡ್ಡಿಪಡಿಸುವ ಕಾಡು ಹಂದಿ, ಕಾಡು ಎಮ್ಮೆಗಳನ್ನು ಮೊದಲಿಗೆ ಬೇಟೆಯಾಡಿ ಕೊಂದು ತಿನ್ನಲು ಆರಂಭಿಸಿದರೆ, ನಂತರ ಅದು ದೈವೀಕರಣಕ್ಕೆ ಒಳಗಾಗಿ ದೈವದ ಮುಂದೆ ಬಲಿ ಕೊಡುವ ಪದ್ಧತಿ ಆರಂಭವಾಗುತ್ತದೆ.
ಪ್ರಾಚೀನ ಭಾರತೀಯರು ದೈವ ಮತ್ತು ದೈವತ್ವದೊಡನೆ ತೀರಾ ಹತ್ತಿರದ ಮತ್ತು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ತಾವು ತಿನ್ನುವ ಆಹಾರ ಮೊದಲು ತಮ್ಮ ದೈವ ದೇವರಿಗೆ ಸಮರ್ಪಣೆಯಾಗಬೇಕು ಎಂಬ ಭಾವನೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಪ್ರಾಣಿಬಲಿಗಳು ದೇವರ ಮುಂದೆ ನಡೆಯುವುದು.

ಇದು ಯಾವುದೇ ರೀತಿ ಹೀನವಾಗಲಿ, ದುರಾಚಾರವಾಗಲಿ, ಮೂಡನಂಭಿಕೆಯಾಗಲಿ ಅಲ್ಲ!

ಇದರ ಹಿಂದೆ "ಎಲ್ಲವೂ ಒಂದೇ ಅಥವ ಎಲ್ಲವೂ ಶೂನ್ಯ" ಅಥವ, ಪ್ರಕೃತಿ (ಶಕ್ತಿ) ಕೊಟ್ಟದ್ದನ್ನು ಪ್ರಕೃತಿಗೇ (ಶಕ್ತಿ) ಅರ್ಪಿಸಿ, ಪ್ರಕೃತಿಯೊಡನೆ ಹಂಚಿ ತಿನ್ನು ಸೂಕ್ಷ್ಮವಾದ ಬ್ರಹ್ಮವಾದ ಇದೆ.
ಹಾಗೆಯೇ ಹಿಂದೂಗಳು ಮಾಡುವ ಪ್ರಾಣಿಬಲಿ ಅಹಿಂಸಾ ರೂಪದ್ದು ಎಂದೇ ಹೇಳಬಹುದು!
ಮುಸ್ಲಿಂರಂತೆ, ಪ್ರಾಣಿಯ ಕುತ್ತಿಗೆಗೆ ಚೂರಿ ಹಾಕಿ ನರಳಿ ಸಾಯುವಂತೆ ಮಾಡಿ, ಹಲಾಲ್ ಮಾಂಸವನ್ನು ಸೇವಿಸುವ ಪದ್ದತಿ ಹಿಂದೂಗಳಲ್ಲಿಲ್ಲ.
ಒಮ್ಮೆಲೆಗೆ ಪ್ರಾಣಿಯ ಕುತ್ತಿಗೆಯನ್ನೇ ಕತ್ತರಿಸುವದರಿಂದ ದೇಹ ಮತ್ತು ಮೆದುಳಿನ ನಡುವಿನ ನರಮಂಡಲದ ಸಂಪರ್ಕವೇ ಕಡಿತಗೊಳ್ಳುವುದರಿಂದ, ಬಲಿಯಾಗುವ ಪ್ರಾಣಿಗೆ ಅನುಭವವಾಗುವ ನೋವು ತೀರಾ ಕನಿಷ್ಠ ಪ್ರಮಾಣದ್ದು.
ಹೋಲಿಕೆಯಲ್ಲಿ, ಒಂದು ಬಾಳೆ ಕಂದು ಅಥವ ಒಂದು ಸೌತೆಕಾಯಿ ಕತ್ತರಿಸಿದಾಗ ಆ ಸಸ್ಯ ಜೀವಕ್ಕೆ ಆಗುವ ನೋವಿನಷ್ಟು ಎಂದನ್ನಬಹುದು.

ಕರ್ನಾಟಕದ ಪ್ರಾಚೀನ ಇತಿಹಾಸದಲ್ಲೂ ಸಹ ಇಂಥದ್ದೇ ಹಸ್ತಕ್ಷೇಪಗಳಿದ್ದು, ಅವು ಸಹ ಇಲ್ಲಿನ ಮೂಲನಿವಾಸಿಗಳಾದ ಆದಿ ಕರ್ಣಾಟರ ಪರಂಪರೆಯ ಹಿನ್ನೆಲೆಯವಾಗಿವೆ.
'ಕರುಮಾರಿ' ಕರ್ನಾಟಕ ನೆಲದ ದೈವ. ಮಾತೃ ಸಂಸ್ಕೃತಿಯಾಧಾರಿತ ಶಾಕ್ತರಾದ ಆದಿ ಕನ್ನಡಿಗರ, ಆದಿ ಕರ್ನಾಟರ ಪರಂಪರೆಯ ದೈವ. ಈಕೆ ಕೇವಲ ಕರ್ನಾಟಕದಲ್ಲಲ್ಲ, ಇಡೀ ಭಾರತದಲ್ಲಿ ಆಯಾ ಪ್ರದೇಶದ ಆದಿಮರ ಮೂಲನಿವಾಸಿಗಳೊಡನೆಯೇ ಬೆಸೆದುಕೊಂಡು, ಊರಮ್ಮರಾಗಿ, ಗ್ರಾಮದೇವತೆಗಳಾಗಿ ತಮ್ಮ ಅಸ್ತಿತ್ವವನ್ನು ಹೊಂದಿದ್ದಾರೆ.

ತಮಿಳುನಾಡು, ಕೇರಳ, ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಮಾರಿ, ಮಾರಮ್ಮ, ಮಾರಿ ಅಮ್ಮ, ಇತ್ಯಾದಿಯರಾಗಿ ಅಸ್ತಿತ್ವದಲ್ಲಿದ್ದರೆ, ಆಂಧ್ರ ಪ್ರಾಂತ್ಯದಲ್ಲಿ ಗಂಗಮ್ಮಳಾಗಿದ್ದಾಳೆ. ಹಾಗೆಯೇ ಮಿಕ್ಕ ಪ್ರದೇಶಗಳಲ್ಲಿ ಕಾಳಿ, ದುರ್ಗಾ, ಶಿವೇ ವೈಷ್ಣವಿಯಾಗಿ ಅಸ್ತಿತ್ವವನ್ನು ಹೊಂದಿದ್ದಾಳೆ.
ಭಾರತದಲ್ಲಿರುವ ಶಕ್ತಿ ಪೀಠಗಳು, ಮತ್ತು ಪ್ರಮುಖ ಸ್ತ್ರೀ ದೈವಗಳ ಮೂಲ ರೂಪವೇ ಮಾರಿಗುಡಿಗಳು. ಶಾಕ್ತ ಪಂಥದ ಮೂಲ ನೆಲೆ.
ಹಾಸನದ ಹಾಸನಾಂಬೆ, ಶಿರಸಿ ಮಾರಿಕಾಂಬೆ, ಮಧುಗಿರಿ ದಂಡಿನ ಮಾರಮ್ಮ, ಇತ್ಯಾದಿ ಕರ್ನಾಟಕದ ಪ್ರಖ್ಯಾತ ಮಾರಿಗುಡಿಗಳು ಇದ್ದು, ಇವಲ್ಲಿ ಹಲವು ಕಡೆ ಪ್ರಾಣಿ ಬಲಿ ನಿಷೇಧವಾಗಿದೆ. ಅದರಲ್ಲೂ ಕೋಣಬಲಿ ನಿಂತಿದೆ. ಇನ್ನು ಕೆಲವು ಕಡೆ ಯಾವುದೇ ಅಡ್ಡಿ ಇಲ್ಲದೆ ಮುಂದುವರೆದಿದೆ.


ಈ ವಿಚಾರಕ್ಕೆ ಅನುಗುಣವಾಗಿ ಹಾಸನಾಂಬೆಯ ನಿದರ್ಶನವನ್ನು ಆಯ್ದು ಮುಂದಿನ ವಿಷಯಕ್ಕೆ ಸಾಗುವ.



ಹಾಸನಾಂಬೆ ದೇವಿಯ ದೇವಾಲಯ ವರ್ಷದ ಕೆಲವೇ ದಿನಗಳ ಕಾಲ ತೆರೆದಿರುತ್ತದೆ. ಅದು ಅಶ್ವಯುಜ ಮಾಸದ ಜಾತ್ರೆಯ ಸಮಯದಲ್ಲಿ ಮಾತ್ರ! ಇನ್ನುಳಿದ ದಿನಗಳಲ್ಲಿ ಅದು ಸದಾ ಮುಚ್ಚಿರುತ್ತದೆ. ಆಶ್ಚರ್ಯದ ವಿಷಯವೆಂದರೆ ಈ ಮುಚ್ಚಲ್ಪಟ್ಟ ದೇವಾಲಯದಲ್ಲಿ ವರ್ಷ ಪೂರ್ತಿ, ಜಾತ್ರೆಯ ಕಡೆಯ ದಿನ ಹಚ್ಚಲ್ಲಟ್ಡ ಒಂದೇ ದೀಪ ವರ್ಷ ಪೂರ್ತಿ ಉರಿಯುತ್ತಿರುತ್ತದೆ. ಹಾಗೆಯೇ ಹೊಲಯ ಪದ್ದತಿಯಂತೆಯೆ ಜಾತ್ರೆಯ ಕಡೆಯ ದಿನ ದೇವರ ಮುಂದೆ ಬಡಿಸಲ್ಪಟ್ಟ ಎಡೆಯೂ ವರ್ಷ ಪೂರ್ತಿ ಕೆಡದಿರುವುದು!



ವರ್ಷದಲ್ಲಿ ಕೆಲವೇ ದಿನ ಜಾತ್ರೆಯಲ್ಲಿ ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ಹಬ್ಬದ ಕಡೆಯ ದಿನ ಎಡೆ ಬಡಿಸಿ ಪೂಜಿಸಿ, ಒಂದು  ದೀಪವನ್ನು ಹಚ್ಚಿ, ದೇವಾಲಯವನ್ನು ಮುಚ್ಚಲಾಗುತ್ತದೆ. ಮುಂದಿನ ವರ್ಷದವರೆಗು ತೆರೆಯುವುದಿಲ್ಲ!
ಇನ್ನೂ ಆ ದೇವಾಲಯ ತೆಗೆಯುವುದು ಮುಂದಿನ ವರ್ಷದ ಜಾತ್ರೆಗೆಯೆ.
ಹೀಗಿರುವಾಗ ದೀಪವು ಹಾರದೆ, ಎಡೆಯು ಕೆಡದಿರುವುದು ನಿಜಕ್ಕೂ ರೋಚಕ ಸಂಗತಿಯೇ ಸರಿ!
ಈ ವಿಚಾರಗಳನ್ನು ಹೊರತುಪಡಿಸಿ ಇನ್ನಷ್ಟು ರೋಚಕ ಸಂಗತಿಗಳಿವೆ.





ಜಾತ್ರೆಯ ಸಮಯದಲ್ಲಿ ಶ್ರೀ ರಾವಣೇಶ್ವರರಿಗೆ ಮೊದಲ ಹಾಗು ಕಡೆಯ ಪೂಜೆ ಸಲ್ಲುತ್ತದೆ.
ಬಹುಶಃ ರಾವಣನು ಈ ಪ್ರದೇಶವನ್ನೂ ಆಳಿದವನಿದ್ದಿರಬಹುದು ಎನಿಸುತ್ತದೆ.
ಇಲ್ಲಿ ಹಿಂದೆ ಬಹಳಷ್ಟು ಪ್ರಾಣಿಬಲಿ ನಡೆಯುತ್ತಿತ್ತು. ಈಗ ಹೇಗೊ ತಿಳಿದಿಲ್ಲ. ಕೋಣ, ಹೋತ, ಟಗರು, ಹುಂಜಗಳ ಬಲಿ ಸರ್ವೇ ಸಾಮಾನ್ಯವಾಗಿತ್ತು. ಬಹುಶಃ ಈಗ ಸ್ವಲ್ಪ ಕಟ್ಟುನಿಟ್ಟಾಗಿ ಕೆಲವನ್ನು ನಿಷೇಧ ಮಾಡಿರಬಹುದು! ಇದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ.

ಈ ಪ್ರಾಣಿಬಲಿ ಪದ್ಧತಿಯು, ಮೇಲೆ ತಿಳುಸಿರುವಂತೆ, ಆಯಾ ಪ್ರದೇಶಗಳಲ್ಲಿ ಯಥೇಚ್ಛವಾಗಿ ಸಿಗುವ ಆಹಾರವಾಗಿ ಸೇವಿಸಲು ಯೋಗ್ಯವಾದ ಸೊಪ್ಪು ತರಕಾರಿ ಮಾಂಸ ಇತ್ಯಾದಿ ಆಹಾರ ಪದಾರ್ಥಗಳ ಮೇಲೆ ಅವಲಂಭಿತವಾಗಿರುತ್ತವೆ.
ನೇಪಾಳದಿಂದಿಡಿದು, ನರ್ಮದಾ ಕೊಳ್ಳದ ಮಹಿಷ್ಮತಿ, ಕಾವೇರಿ ಕೊಳ್ಳದ ಮಹಿಷಮಂಡಲ, ತಮಿಳಕಂ, ಮತ್ತು ಪುಲಸ್ಥೀನಗರ (ಲಂಕಾ) ಪ್ರಾಂತ್ಯಗಳಲ್ಲಿ ಕೋಣಗಳು ಯಥೇಚ್ಛವಾಗಿ ಕಾಣಸಿಗುವ ರಾಸುಗಳಾಗಿವೆ.
ಎತ್ತು ದನಗಳಿಗೆ ಹೋಲಿಸಿದರೆ ಇವುಗಳ ಸಂಸತಿ ನಾಲ್ಕೈದು ಪಟ್ಟು ಹೆಚ್ಚೇ ಇವೆ. ಒಂದು ಕಾಲದಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕೋಣಗಳನ್ನು ಉಳುಮೆ ಮಾಡಲಿಕ್ಕೂ ಬಳಸುತ್ತಿದ್ದರು.
ಕರಾವಳಿ ಭಾಗದಲ್ಲಿ ಈಗಲು ಸಹ ಕೋಣಗಳ ಬಳಸಿ ಉಳುಮೆ ಮಾಡುವುದನ್ನ ಕಾಣಬಹುದು.

ಬೇಸಾಯಗಾರರು ಕಾಡು ಎಮ್ಮೆಗಳ ಉಪಟಳವನ್ನು ತಡೆಯುವ ಸಲುವಾಗಿ, ಅವನ್ನು ಬೇಟೆಯಾಡಿ ಮಾಂಸವಾಗಿ ಸೇವಿಸಿದ್ದು, ನಂತರದ ದಿನಗಳಲ್ಲಿ ತಮ್ಮ ದೈವದೊಂದಿಗೆ ಅದೂ ಬೆಸೆದುಕೊಂಡು ದೈವೀಕರಣಗೊಂಡು, ತಮ್ಮ ತಮ್ಮ ಮಾತೃ ದೈವಗಳ ಮುಂದೆ ಬಲಿ‌ ಕೊಡುವ ಪದ್ಧತಿ ಬಂದಿರುವುದನ್ನು ಮನಗಾಣಬಹುದು!
ತುಳುನಾಡು ಪ್ರಾಂತ್ಯದಲ್ಲಿ ಕಾಡು ಎಮ್ಮೆಗಿಂತ, ಕಾಡುಹಂದಿಗಳ ಉಪಟಳ ಹೆಚ್ಚು! ಕಾಡುಹಂದಿಯ ಬೇಟೆಗಳು ಹೆಚ್ಚು. ಇದು ಸಹ ಅಲ್ಲಿ  ದೈವೀಕರಣಗೊಂಡು, ದೈವಾರಾಧನೆಯ ರೂಪ ಪಡೆದು ಪಂಜುರ್ಲಿಯಾಗಿದೆ.

ಆದಿಮರ ಸಂಸ್ಕೃತಿಯಲ್ಲಿ ದೇವರಿಗರೆ ಬಲಿ ಕೊಡುವ ಪ್ರಾಣಿಗಳು ಕೇವಲ ಗಂಡು ಜಾತಿಯದ್ದಾಗಿರಬೇಕು ಎಂಬ ಕಟ್ಟಳೆ ಇದೆ. ಫಲವತಿಯಾದ ಸ್ತ್ರೀ ಜಾತಿಯ ಪ್ರಾಣಿಗಳಾದ ಎಮ್ಮೆ, ಹಸು, ಕುರಿ, ಆಡು, ಕೋಳಿಗಳನ್ನು ಬಲಿ ಕೊಡುವುದರಿಂದ ನಿಷೇಧವಿದೆ.

ಎತ್ತು, ಹೋರಿ, ಹೋತ, ಟಗರು, ಹುಂಜಗಳು ಇತ್ಯಾದಿ ಗಂಡು ಜಾತಿಯ ಪ್ರಾಣಿಗಳನ್ನು ಮಾತ್ರ ದೇವರಿಗೆ ಸಲ್ಲುವುದು ಎಂಬ ನಂಬಿಕೆ ಇದೆ.

ಇದಕ್ಕೆ ಕಾರಣ ಹೀಗಿರಬಹುದು:-

ಸ್ತ್ರೀ ಜಾತಿಯ ಪ್ರಾಣಿಗಳು ಬಹುಪಯೋಗಿ. ಮತ್ತು ಫಲವಂತಿಕೆಯ ಸಂಕೇತವಾಗಿದೆ.

ಕೋಣ, ಎತ್ತು ಅಥವ ಹೋರಿಗಳು ಒಂದು (ಸಂತಾನೋತ್ಪತ್ತಿಗೆ) ಅಥವ ಎರಡು (ನೇಗಿಲು/ಎತ್ತಿನ ಬಂಡಿಗೆ) ಇದ್ದರೆ ಸಾಕು ಎಂದಿರಬಹುದು.

ಹೀಗೆ ಆದಿಮ ಸಂಸ್ಕೃತಿಯಲ್ಲಿ ಗ್ರಾಮದೇವತೆಗಳಿಗೆ ಕೋಣ, ಹೋರಿ ಎತ್ತುಗಳನ್ನು ಬಲಿ ಕೊಡುವುದನ್ನು ನಡೆಸಲಾಗುತ್ತಿತ್ತು. ಆದರೆ ಯಾವಾಗ, ಎತ್ತು ಹೋರಿಗಳು ಸಾಗಟ ಮತ್ತು ಪ್ರಯಾಣದ ಬಳಕೆಗೆ ಬಂಡಿಗೆ ಕಟ್ಟಲು ಹೆಚ್ಚು ಬಳಸಲು ಆರಂಭವಾಯಿತೋ, ಅಂದು ಹೋರಿ ಮತ್ತು ಎತ್ತುಗಳ ಬಲಿಯೂ ಸಹ ನಿಷೇಧಕ್ಕೆ ಒಳಗಾಗಿ, ಕೋಣ ಬಲಿ ಒಂದೇ ಮುಂದುವರಿಯುವಂತಾಗುತ್ತದೆ.



ಕೆಲವು ಕಡೆ ಮಾರಿಯರು ಸಸ್ಯ-ಶಾಕಾಹಾರಿಗಳು. ಅದು ಆಯಾ ಊರಿನ ಮಾರಿಯರ ಹಿನ್ನೆಲೆ ಅನುಗುಣವಾಗಿ, ಅವರ ಇಷ್ಟ ಹಿನ್ನೆಲೆಗಳಿಗೆ ತಕ್ಕಂತೆ ಆಚರಣೆ ಮತ್ತು ಆಹಾರ ಪದ್ದತಿ ನಡೆಯುವುದುಂಟು.

ಇಷ್ಟೆಲ್ಲಾ ಇತಿಹಾಸ ಹಿನ್ನೆಲೆ ಇದ್ದ ಮೇಲೆ ಇದಕ್ಕೊಂದು ಪ್ರಚಲಿತ ಕಥೆ ಕಟ್ಟು ಕಥೆ ಉಪಕಥೆ ಇರಬೇಕಲ್ಲವೆ? ನಿಜ! ಅದೂ ಇದೆ!
ಒಂದು ಕಟ್ಟು ಕಥೆಯೇ ಇದೆ!

ಅದು ಪಟ್ಟಬದ್ರ ಹಿತಾಸಕ್ತರು, ಬ್ರಹ್ಮವಾದವನ್ನು ಮೆಟ್ಟಿ ನಿಂತ ಬ್ರಾಹ್ಮಣವಾದಿ ಬ್ರಾಹ್ಮಣಶಾಹಿಗಳು ಈ ನೆಲದ ಆದಿಮ ಮೂಲನಿವಾಸಿಗಳ ತೇಜೋವಧೆ ಮಾಡಲೆಂದೇ, ಸಾಂಸ್ಕೃತಿಕವಾಗಿ ತುಚ್ಚೀಕರಿಸಲೆಂದೇ ಸೃಷ್ಟಿಸಲಾದ ಕಟ್ಟು ಕಥೆ ಹೀಗಿದೆ!

ಬಹಳ ಹಿಂದೆ, ಒಬ್ಬ ಕೆಳಜಾತಿಯ (ಹೊಲಯ ಅಥವ ಮಾದಿಗ) ಹುಡುಗ ಊರಿಂದ ಊರಿಗೆ ಬಂದು, ಬ್ರಾಹ್ಮಣರ ಅಗ್ರಹಾರದಲ್ಲಿ ತಾನೂ ಬ್ರಾಹ್ಮಣನೆಂದು ಸುಳ್ಳು ಹೇಳಿ ಜನಿವಾರ ಧರಿಸಿ, ಆಲ್ಲಿಯೇ ಆಶ್ರಯ ಪಡೆಯುತ್ತಾನೆ‌. ಸುಮಾರು ತಿಂಗಳುಗಳ ನಂತರ ಆ ಮನೆಯ ಹಿರಿಯ ಬ್ರಾಹ್ಮಣ ಈತನನ್ನು ಬ್ರಾಹ್ಮಣನೆಂದೇ ನಂಬಿ ತನ್ನ ಮಗಳನ್ನು ಈತನಿಗೆ ಮದುವೆ ಮಾಡಿಕೊಡುತ್ತಾನೆ. ನಂತರ ಮೂರು ಮಕ್ಕಳೂ ಸಹ ಆದವು. ಇದೆಲ್ಲಾ ನಡೆದ ಮೇಲೆ ಒಂದು ದಿನ ಆ ಹೆಣ್ಣಿಗೆ, ತನ್ನ ಗಂಡ ಬ್ರಾಹ್ಮಣನಲ್ಲ ಎಂಬ ಸತ್ಯ ತಿಳಿದು ಕೋಪಗೊಂಡಳು! ಕ್ರೋದವು ಮುಗಿಲು ಮುಟ್ಟಿತು! ಸುತ್ತಮುತ್ತಲಿದ್ದ ತನ್ನ ಬಳಗದವರನ್ನು ಕರೆದು ತನ್ನ ಗಂಡ ಹಾಗು ಮೂವರು ಮಕ್ಕಳನ್ನು ಎಳೆದು ತಂದು ನನಗೆ ಬಲಿ ಕೊಡಿ ಎಂದು ಕೇಳಿಕೊಂಡಳು. ಇದರಿಂದ ಭಯಗೊಂಡ ಗಂಡ ಮತ್ತು ಮೂವರು ಮಕ್ಕಳು ಹೆದರಿ ಓಡಿ ಹೋಗಲು ಆರಂಭಿಸಿದರಂತೆ! ಗಂಡನು ಕೋಣದೊಳಗೆ, ಮೂವರು ಮಕ್ಕಳು ಟಗರು-ಹೋತ-ಹುಂಜದೊಳಗೆ ಅವಿತುಕೊಂಡರು.
ಆಗ ಅವುಗಳನ್ನೆಲ್ಲಾ ಬಲಿ ಕೊಡಲಾಯಿತು, ಎಂಬುದೆ ಇಲ್ಲಿ ಸದ್ಯಕ್ಕೆ ಅಲ್ಲಿನ ‌ಸ್ಥಳಿಯರಲ್ಲಿ ಪ್ರಚಲಿತದಲ್ಲಿರುವ ಒಂದು ಕಟ್ಟು ಕಥೆ!

ಆದರೆ ಇವುಗಳು ಸುಳ್ಳು ಎಂಬುದು ತುಂಬ ಸ್ಪಷ್ಟವಾಗಿಯೇ ಕಾಣುತ್ತದೆ.

ಇದು ಸುಳ್ಳು ಎನ್ನಲು ಬಹಳಷ್ಟು ಸಾಕ್ಷ್ಯಗಳಿವೆ :-

೧.) 'ಮಾರಿ' ಎಂಬುದು 'ಮಹಾರ' (ಮಾರ) ಎಂಬುದರ ಸ್ತ್ರೀ ರೂಪವಾಗಿದ್ದು, ಇದು ವೈದಿಕ ಪೂರ್ವ, ಹಾಗು ಅಬ್ರಾಹ್ಮಣ ಸಂಸ್ಕೃತಿಯ ಆದಿಮರ ದೈವವಾಗಿದೆ. ಮಹಾರ್ ಎಂಬುದು ಮಹಾರಾಷ್ಟ್ರ ಸೀಮೆಯ ಮೂಲನಿವಾಸಿ ಆದಿಮರ ಜಾತಿಯ ಹೆಸರು. ಕರ್ಣಾಟಕ ಸೀಮೆಯಲ್ಲಿ ಮಹಾರ 'ಹೊಲಯ' ಎಂದಾದರೆ, ಮಹಾರಿ (ಮಾರಿ) ಹೊಲತಿ ಎಂಬುದರ ಸಮಾನಾರ್ಥಕ ಪದವಾಗಿದೆ. ಮಹಾರ ಎಂಬ ಪದಕ್ಕೂ "ಮಹಾರಸ" ಎಂಬ ದ್ರಾವಿಡ ಪದದ ಮೂಲವಿದ್ದು, ರಾಷ್ಟ್ರಕೂಟ ಅರಸರಲ್ಲಿ ಇವರೂ ಪ್ರಮುಖರು ಎನ್ನಲಾಗುತ್ತದೆ.

೨.) ಕಥೆಯ ಪ್ರಕಾರ, ಈ ಹಬ್ಬ ಮಾಡಬೇಕಾದದ್ದು ಬ್ರಾಹ್ಮಣರಿಂದ ಬ್ರಾಹ್ಮಣರ ಅಗ್ರಹಾರದಲ್ಲಿರುವ ಮಾರಿಗುಡಿ(?)ಯಲ್ಲಿ!
ಆದರೆ ಸತ್ಯ ಎಂಬುದು ತದ್ವಿರುದ್ಧವಾಗಿದೆ! ಮಾರಿಗುಡಿಗಳು ಇರುವುದು ಹೊಲಗೇರಿ/ಮಾದಿಗೇರಿಗಳಲ್ಲಿಯೆ ಹೊರತು ಬ್ರಾಹ್ಮಣರ ಅಗ್ರಹಾರದಲ್ಲಲ್ಲ! ಈ ಹಬ್ಬ ನಡೆಯುವುದು ಸಹ ಬ್ರಾಹ್ಮಣರಿಂದೇನಲ್ಕ! ಹೊಲಯ ಮಾದಿಗರು, ಅಸಾಧಿ, ದುಸಾಧಿ, ಬೇಡರು ಇತ್ಯಾದಿ ಅಬ್ರಾಹ್ಮಣ ಜಾತಿಯ ಜನರಿಂದ!

೩.) ಇನ್ನೂ ಕಥೆಯ ಸತ್ಯಾನುಸತ್ಯಾತೆ ಪರಿಶೀಲಿಸಿದರೆ, ಒಬ್ಬ ಬ್ರಾಹ್ಮಣನಿಗೆ ಮತ್ತೊಬ್ಬ ವ್ಯಕ್ತಿ ಬ್ರಾಹ್ಮಣನೊ, ಅಥವ ಅಲ್ಲವೊ ಎಂಬುದನ್ನು ತಿಂಗಳಾನುಗಟ್ಟಲೆ ಜೊತೆ ಇದ್ದಾಗಲು ಕಂಡುಹಿಡಿಯಲು ಏನು ಕಷ್ಟದ ಕೆಲಸವಲ್ಲ! ಸಿನಿಮಾದಲ್ಲಿ ಮಾತ್ರ ಹಾಗೆ ತೋರಿಸಬಹುದಷ್ಟೇ!

೪.) ಮೂರು ಮಕ್ಕಳನ್ನು ಹೆರುವವರೆಗೂ ತನ್ನ ಗಂಡ ಬ್ರಾಹ್ಮಣನಲ್ಲ ಎಂದು ತಿಳಿಯದೆ ಇದ್ದ ಬ್ರಾಹ್ಮಣ ಹೆಣ್ಣು ಮಗಳ ಕಥೆಯೇ ಅತೀ ಹಾಸ್ಯಾಸ್ಪದವಾಗಿದೆ! ಅದಾಗಿಯೂ ನಂತರ, ಗಂಡ ಮಕ್ಕಳನ್ನೇ ಬಲಿ ಕೇಳುವ ಹೆಂಗಸು, ಸ್ತ್ರೀ ಕುಲಕ್ಕೇ ಅಪವಾದದಂತೆ ಬಾಸವಾಗುತ್ತಾಳೆ!

೫.) ಆಹಾರ ಪದ್ಧತಿಯ ವಿಷಯದಲ್ಲಿ ಬ್ರಾಹ್ಮಣರು ಸಾತ್ವಿಕರಾದರೆ, ಬ್ರಾಹ್ಮಣರ ಹೆಣ್ಣು ಮಕ್ಕಳು ಅದಕ್ಕಿಂತ ಹತ್ತು ಪಟ್ಟು ಸಾತ್ವಿಕರಾಗಿರುತ್ತಾರೆ! ಹೀಗಿರಿವಾಗ ಕೋಣ, ಟಗರು, ಹೋತ, ಹುಂಜ ಮಾಂಸದಡಿಗೆ, ಈ ಮಾರಿಗೆ ಪ್ರಿಯವಾದುದು ಎಂಬುದು ಇಡೀ ಕಥೆಯ ಅಸಲಿ ಮುಖವನ್ನು ತೋರಿಬಿಡುತ್ತದೆ!


ಇಂಥದ್ದೆ ಹೋಲಿಕೆಗಳನ್ನು ಹೊಂದಿರುವ ಕಥೆಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಿದೆ! ಹೊಲಯ ಮಾದಿಗರ ಮತ್ತು ವಿವಿಧ ಪ್ರದೇಶಗಳಲ್ಲಿ ಅವರ ಸಮಾನಾಂತರ ಜಾತಿಗಳು ಬಲಿಷ್ಠರಾಗಿದ್ದ ಭಾರತದ ಬಹುತೇಕ ಭಾಗಗಳಲ್ಲಿ ಈ ಕಟ್ಟು ಕಥೆ ಚಾಲ್ತಿಯಲ್ಲಿದೆ.

ಇದು ನಿಜಕ್ಕೂ ಒಂದು ಸುಳ್ಳು ಕಥೆಯೆ! ಅರ್ಥಸತ್ ಕೆಲವು ನಿರ್ದಿಷ್ಟ ಜನಾಂಗದ ಹಿರಿಮೆ ಗರಿಮೆಗಳನ್ನು ತುಚ್ಛೀಕರಿಸಲು, ದಾಯಾದಿ ಅಥವ ವಿರೋಧಿ ಜನಾಂಗ ಕಟ್ಟುವ ಕಥೆ! ಇದರಲ್ಲಿ ನವ ಕ್ಷತ್ರಿಯ (ಮೇಲಸ್ತರದ ಶೂದ್ರರು) ಮತ್ತು ಬ್ರಾಹ್ಮಣರ ಕೈವಾಡವಿರುವುದಂತು ನಿಜ!


ಊರ ಮಾರಿ/ಊರ ಅಮ್ಮ/ಗ್ರಾಮದೇವತೆ/ಮೂಲಶಕ್ತಿ/ಆದಿ ಶಕ್ತಿಯರ ಹಿನ್ನೆಲೆ.

ಮೂಲನಿವಾಸಿಗಳಾದ ಆದಿಮ ಪರಂಪರೆಯ ಆದಿ ಕರ್ನಾಟರು, ಆದಿ ದ್ರಾವಿಡರು, ನಾಗರು (ಹೊಲಯರು), ಮಾತಂಗರು (ಮಾದಿಗರು), ಮೂಲತಃ ಶಕ್ತಿ ಆರಾಧಕರು. ಸಾಮಾನ್ಯವಾಗಿ ಈ ಮಾರಮ್ಮ ಅಥವ ಊರಮ್ಮ ದೇವಿಯರು ನಾಗ (ಹೊಲಯ) ಅಥವ ಮಾತಂಗ (ಮಾದಿಗ) ಸ್ತ್ರೀಯರಾಗಿರುತ್ತಾರೆ. ಎಂದರೆ 'ಹೊಲತಿ' ಅಥವ 'ಮಾತಂಗಿ/ಮಾದಿಗಿತ್ತಿ'ಯರಾಗಿರುತ್ತಾರೆ.
'ನಾಗ' ಎಂಬುದರ ಅರ್ಥ 'ಸಿಂಹ' ಅಥವ 'ರಾಜ' ಎಂದು. 'ನಾಗರ ಹಾವು/ನಾಗ ಸರ್ಪ' ಎಂದರೆ ಸರ್ಪಗಳ ರಾಜ ಅಥವ ರಾಜ ಸರ್ಪ ಎಂದು ಅರ್ಥ.

ಮಾತಂಗ ಎಂದರೆ ಮಾದಿಗ, ಕರಿ, ಆನೆ ಎಂದು ಅರ್ಥೈಸುತ್ತದೆ.
ಈ ನಾಗ ಮಾತಂಗರ ಮೂಲರೂಪ 'ಹೊಲಯ ಮಾದಿಗರು' ಪ್ರಾಂತೀಯವಾಗಿ ಇವರ ಹೆಸರುಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಪುಲಯನ್ ಚಕ್ಕಿಲಿಯನ್, ಪರಯ್ಯ‌ ಚಕ್ಕಿಲಿಯಾರ್, ಮಾಲ ಮಾದಿಗ, ಮಹಾರ್ ಮಾಂಗ್, ಹೊಲಾರ್ ಮಾದರ್, ಹಲ್ಸರ್ ಚಮ್ಮಾರ್, ಪಾಸಿ ಮೂಸಿ, ಇತ್ಯಾದಿ ಹೀಗೆ ಜಾನಪದೀಯ ಹೆಸರುಗಳಿಂದ ಗುರುತಿಸಲಾಗುತ್ತದೆ.

ಈ ಎರಡೂ ಜನಾಂಗಗಳ ಮೂಲ ಒಂದೇ ಆಗಿದ್ದು, ಆಧಾರಗಳ ಪ್ರಕಾರ ಕ್ರಿ.ಪೂ ೧೦೦೦ದಲ್ಲೆ ಭಾರತೀಯ ಕ್ಷಾತ್ರ ಪರಂಪರೆಗೆ ಆದಿ ಬರೆದ ಆದಿ ಕ್ಷತ್ರಿಯರು ಎನಿಸಿಕೊಂಡು ರಾಜರಾಗಿ ರಾಜ್ಯಾಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬಲಗೈ ಮತ್ತು ಎಡಗೈ ಎಂದು ವಿಭಾಗಿಕರಣಗೊಂಡು ಕೃಷಿ ಮತ್ತು ರಾಜಪ್ರಭುತ್ವ ನಿರ್ವಹಣೆಗೆ ಬಲಗೈ ವಿಭಾಗ, ಕೃಷಿಯೇತರ ಹಾಗು ಸೈನ್ಯಸಾಮಂತಿಕೆಗೆ ಎಡಗೈ ವಿಭಾಗವೆಂದೂ ನಿರ್ವಹಣೆಗೆ ಒಳಪಟ್ಟಿತ್ತು ಎನ್ನಬಹುದು.
ಹೀಗೆ ಈ ಎರಡೂ ಪ್ರಾಚೀನ ಜನಾಂಗಗಳು ಪರಸ್ಪರ ಒಂದೇ ಮೂಲವನ್ನು ಹೊಂದಿದೆ.

ಪುರಾಣ ದಂತಕಥೆಗಳ ಪ್ರಕಾರ, ಹೊಲಯರು ಶಿವನ ಬಲಭುಜದಿಂದ (ಭುಜ - ಕ್ಷಾತ್ರತ್ವದ ಸಂಕೇತ) ಹುಟ್ಟಿ, ಉಮೆಯ ಬಲಮೊಲೆಯ ಹಾಲು ಕುಡಿದು ಬೆಳೆದರು ಎಂದು, ಮಾದಿಗರು ಶಿವನ ಎಡಭುಜದಿಂದ ಹುಟ್ಟಿ, ಉಮೆಯ ಎಡಮೊಲೆಯ ಹಾಲು ಕುಡಿದು ಬೆಳೆದವರು ಎಂದು ಹಿನ್ನೆಲೆಗಳಿವೆ.
ಇದೇ ಕಾರಣಕ್ಕೆ ಹೊಲಯ ಮಾದಿಗರನ್ನು ಆದಿ ಶಿವಾಚಾರ್ಯರು ಎನ್ನಲಾಗುತ್ತದೆ.


Edgar Thurstonರ South Indian Castes & Tribes ಕೃತಿಯಲ್ಲಿಯೂ ಸಹ ಹೊಲಯ ಮಾದಿಗರ ಮೂಲ ಒಂದೇ ಎನ್ನಲಾಗಿದೆ.
Reverend Ferdinand Kittelರ ಕನ್ನಡ ಶಬ್ದಕೋಶದಲ್ಲಿ 'ಹೊಲತಿ'ಗೆ ಮಾತಂಗಿ, 'ಮಾತಂಗಿ'ಗೆ ಹೊಲತಿ ಸಮಾನಾರ್ಥಕ ಪದವಾಗಿ ಸೂಚಿಸಲಾಗಿದೆ.

ಆದ್ದರಿಂದ ಹೊಲಯರಿಗೂ, ಮಾದಿಗರಿಗೂ 'ಮಾರಿ' ತಮ್ಮವಳು ಎಂದು ಹೇಳಿಕೊಳ್ಳುವ ಸಂಪೂರ್ಣ ಸತ್ಯ ಸ್ವಾತಂತ್ರ್ಯವಿದೆ.

'ಮಾರಿ' (ಮಹಾರಿ/ಭಾರಿ/ಭೈರವಿ) ಎಂಬುದು ಮಾರ (ಮಹಾರ/ಭಾರ/ಭೈರವ) ಎಂಬುದರ ಸ್ತ್ರೀ ರೂಪಕ ಪದ.

ಇದು ಕಾಳಿ, ದುರ್ಗಿ ಎಂದೂ ರೂಪಾಂತರ ಹೊಂದಬಲ್ಲದು!
ಮಹಾರರ ಇತಿಹಾಸ ಕೆದಕಿದರೆ ಇವರು ರಾಷ್ಟ್ರಕೂಟ ಅರಸರ ಮೂಲಜನರು. 'ಮಹಾರಸು' ಎಂಬುದು ಇದರ ಮೂಲ ಹಾಗು ಪೂರ್ಣ ರೂಪದ ಪದ. ಈ ಪದ ಅಪ್ಪಟ ದ್ರಾವಿಡ ಪದವೇ ಆಗಿದೆ. ಇವರು ಸೋತ ಅರಸರಾದಾಗ, ತುಳಿತಕ್ಕೊಳಗಾಗಿ, ತಮ್ಮ ಹೆಸರಿನಲ್ಲಿ '' ಕಾರವನ್ನು ಕಳೆದುಕೊಂಡ ಮಹಾರ'ಸ' > (ಮಹಾರ) ಮಹಾರ ಎಂದಾಗುತ್ತದೆ. ಈಗಲೂ ಸಹ ಮರಾಠರಲ್ಲಿ 'ಸ' ಎಂಬ ಪದ ಗೌರವ ಸೂಚಕ ಪದವಾಗಿಯೇ ಬಳಕೆಯಲ್ಲಿದೆ.

ಪಿತೃ ಪ್ರಧಾನ ರಾಜಾಡಳಿತಕ್ಕೂ ಹಿಂದಿನ ವ್ಯವಸ್ಥೆಯನ್ನು ತಿಳಿಯಬೇಕಾದರೆ, ಮಾತೃ ಪ್ರಧಾನ ನೆಲೆಯಲ್ಲಿ ಹುಡುಕಬೇಕಾಗುತ್ತದೆ.
ಮಹಾರ 'ರಾಜ' ಎಂದು ಅರ್ಥೈಸಿದರೆ, ಮಹಾರಿ 'ರಾಣಿ' ಎಂದಾಗುತ್ತದೆ.
ಸ್ತ್ರೀ ಕ್ಷಾತ್ರ ಪರಂಪರೆಯ ಮೂಲ ಮಾರಿಯರೇ ಆಗಿದ್ದಾರೆ.
ರಾಜ ಸ್ತ್ರೀ ಮಾರಿಯರು, ಊರ ಕಾಯುವ ಕಾಯಕದ ಅಥವ, ಊರ ಆಳುವ ಕಾಯಕದ ಮಾಡುತ್ತಿದ್ದರು ಎನ್ನಬಹುದು.
ಪ್ರಜೆಗಳ ಹಾರೈಕೆ, ವೈರಿಗಳ ಸಂಹಾರ, ಊರ ಆಕ್ರಮಿಸಲು ಬಂದವರ ಬಲಿ, ಹೀಗೆ ನಾಡ ಕಲ್ಯಾಣ ಮಾಡುತ್ತಿದ್ದ ಮಾರಿಯರು, ಮೊದಲ ಮಹಿಳಾ ವೈದ್ಯರು ಹೌದು.
ದೊಡ್ಡಮ್ಮ (Chicken Pox), ಚಿಕ್ಕಮ್ಮ (Small Pox), ಇತ್ಯಾದಿ ಚರ್ಮ ರೋಗಗಳಿಗೆ ಇವರು ಔಷಧಗಳನ್ನು ಕಂಡುಹಿಡಿದಿದ್ದರು ಎಂಬ ಮಾತಿದೆ.

ಆರ್ಯ/ಇಂಡೋ ಆರ್ಯ- ವೈದಿಕ - ಬ್ರಾಹ್ಮಣರ ಸಾಹಿತ್ಯದಲ್ಲಿ ಮಾರಿಯರನ್ನು "ಬೀದೀಲಿ ಹೋಗೊ ಮಾರಮ್ಮನ್ನ ಮನೆಗೆ ಕರಿಯಬಾರದು" ಎಂಬ ಗಾದೆಗಳ ಮೂಲಕ ಮಾರಿಯರನ್ನು ತುಚ್ಛೀಕರಿಸಲಾಗಿದೆ. ಮಾರಿಯರಿಂದ ತೊಂದರೆಗಳನ್ನು ಎದುರಿಸಿದವರಲ್ಲಿ ಇವರೂ ಒಬ್ಬರಿರಬೇಕು!?!?

ಬಹುಶಃ, ಈ ಮಾರಿಯರು ತಮ್ಮ ಜನರ ಹಿತಕ್ಕಾಗಿ, ತಮ್ಮ ಮೇಲೆ, ತಮ್ಮ ನಾಡಿನ ಮೇಲೆ ಆಕ್ರಮಣಕಾರರು ಎರಗಿ ಬಂದಾಗ, ಆ ಪರಕೀಯರನ್ನ ಕೊಂದು, ಅವರ ಪಾಲಿಗೆ ಮಹಾಮಾರಿಯಾಗಿರಬೇಕು! (ಪರಕೀಯರ ಸ್ಥಾನದಲ್ಲಿ ಯಾರನ್ನು ಬೇಕಾದರೂ ಪರಿಗಣಿಸಿ! ಆರ್ಯರನ್ನೂ ಸಹ!)



ಆದರೆ ಬ್ರಾಹ್ಮಣರೇನು ಸುಮ್ಮನಿದ್ದರೆ? ಅನುಕೂಲ ಸಿಂಧು ಧರ್ಮಪಾಲನೆ ಎಂಬಂತೆ, ಇಂದು ಮಾರಿಯರನ್ನೂ ಬ್ರಾಹ್ಮಣೀಕರಿಸಿ/ವೈದಿಕರಿಸಿ ಆದಿಶಕ್ತಿ, ಗಾಯತ್ರಿ, ಲಕ್ಷ್ಮಿ ಸರಸ್ವತಿಯಾಗಿಸಿಕೊಂಡಿರುವ ಸಾಧ್ಯತೆಗಳು ಹೆಚ್ಚಿವೆ. ವಿಗ್ರಹಾರಾಧನೆ ಒಪ್ಪದ ವೈದಿಕ ಧರ್ಮವನ್ನೂ ಮೀರಿ, ವೈದಿಕರು ಅನುಕೂಲ ಸಿಂಧು ಧರ್ಮಪಾಲನೆಯಂತೆ ಮಾರಿ ಸಂಸ್ಕೃತಿಯನ್ನು ಆದಿಮರಿಂದ ದೂರಾಗಿಸಿ ತಮ್ಮದಾಗಿದಿಕೊಳ್ಳುವ ಪ್ರಯತ್ನವಂತೂ ನಡೆದಿದೆ. ಇದಕ್ಕೆ ಹಿಂಬು ಕೊಡುವಂತೆ ಮಾತಂಗಿ ಮತ್ತು ಸರಸ್ವತಿಯ ಚಿತಪಟಗಳ ನಡುವೆ ಬಹಳಷ್ಟು ಹೋಲಿಕೆಗಳಿವೆ.



ಹಾಗೆಯೇ ಬ್ರಹ್ಮನು ಮೂಲ ಪುರುಷ ಎಂದೂ,  ಆದಿ ಎಂದು ಎನ್ನುವ ವೈದಿಕ ಸಾಹಿತ್ಯವು, ಜಾನಪದರು ಆದಿ ಎನ್ನುವ ಆದಿ ಜಾಂಭವನನ್ನು ಹಿಂದಿಕ್ಕಲು "ಬ್ರಹ್ಮನು ಕರಡಿಯೊಂದಿಗೆ ಸಂಭೋಗ ನಡೆಸಿ ಜಾಂಭವಂತನಿಗೆ ಜನ್ಮ ಕೊಟ್ಟ"ಎಂಬ ಕಟ್ಟು ಕಥೆ ಸೃಷ್ಟಿಸಿದ್ದಾರೆ. ಹಾಗೆಯೇ ಹೊಲತಿಯರು, ಎಂದರೆ ಮಾರಿಯರು ಹರತಿ/ಹರಿತಿ (ಹೊಲತಿ) ಹರ-ತಿ = ಪಾರ್ವತಿ/ಗಾಯತ್ರಿ, ಹರಿ-ತಿ = ಸಿರಿದೇವಿ/ಭೂದೇವಿಯಾಗಿ ಮಾರ್ಪಾಡುಗಳಾಗಿರುವಂತೆ ಸ್ಪಷ್ಟವಾದ ದೃಷ್ಟಿಕೋನವನ್ನು ನೀಡುತ್ತದೆ.



ಪ್ರಾಚೀನ ಬೌದ್ಧ ಗ್ರಂಥಗಳು ಮಾರಿಯರ ಉಲ್ಲೇಖಗಳಿವೆ. ಅದು ಯಕ್ಷಿಣಿಯರಾಗಿ. ಹರಿತಿಯನ್ನು‌ ಸಹ ಓರ್ವ ಬೌದ್ಧ ಯಕ್ಷಿಣಿ ಎಂದು ಉಲ್ಲೇಖಿಸುವ ಬೌದ್ಧ ಗ್ರಂಥಗಳು, ಹರಿತಿಯನ್ನು ಸಹ ಮೊದಲಿಗೆ, ತನ್ನ ಐನೂರು ಮಕ್ಕಳನ್ನು ಕಾಪಾಡಿಕೊಳ್ಳಲು ಪರರನ್ನು ಕೊಂದು ಹಾಕುತಿದ್ದಳು ಎಂದು ಅತಿ ಕ್ರೂರವಾಗಿಯೇ ಬಣ್ಣಿಸಲಾಗುತ್ತದೆ.
ನಂತರ ಬುದ್ಧನು ಆಕೆಗೆ ಶಾಂತಿ ಅರಿವು ಮೂಡಿಸಿ, ತನ್ನ ಯಕ್ಷಿಣಿಯಾಗಿಸಿಕೊಂಡ ಎನ್ನಲಾಗುತ್ತದೆ.
ಇದೇ ರೀತಿಯ ಪ್ರಸಂಗ, ಕೊಲ್ಲೂರು ಮೂಕಾಂಬಿಕೆ ಮತ್ತು ಶಂಕರಾಚಾರ್ಯರ ನಡುವೆಯೂ ನಡೆಯುವುದು ಗಮನಾರ್ಹ!

ಇದನ್ನು ಶಾಕ್ತ ಧರ್ಮದ ಮೇಲೆ, ಶೈವ ವೈಷ್ಣವ ಬೌದ್ಧ ಜೈನ ಧರ್ಮಗಳ ಪಾರುಪತ್ಯ ಸಾಧಿಸುವ ಸೂಚಕ ಸನ್ನಿವೇಶಗಳಾಗಿವೆ.
ಹರಿತಿ ಪುತ್ರರು ಎನ್ನಲಾಗುವ ಚಾಲುಕ್ಯರು ಸಹ ಹೊಲಯಾರಸರಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಇಂಥಹ ಹೆಸರಾಂತ ರಾಣಿಯರು (ಮಾರಿಯರು) ಕಾಲರಾದ ಮೇಲೆ, ಅಭಿಮಾನ ಹೊತ್ತ ಪ್ರಜೆಗಳು ಅಥವ ಆಕೆಯ ವಂಶಸ್ಥರು, ಆಕೆಯ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಗದ್ದುಗೆಯನ್ನು ಕಟ್ಟಿ, 'ಕರಿಕಲ್ಲು/ಕರುಕಲ್ಲು/ಗೋರ್ಕಲ್ಲು'ಗಳನ್ನು ನೆಟ್ಟಿ, ಅದನ್ನು ಮಾರಿಗುಡಿಯಾಗಿಸಿ ಹೊಲಯ (ಅಸೀವಗಂ/ಅಜೀವಿಕ) ಪದ್ಧತಿಯಂತೆ ಎಡೆ ಬಡಿಸಿ ಆರಾಧಿಸುತ್ತಾರೆ.
ಕಾಲಾನಂತರ ಇವು ಶಕ್ತಿ ಕೇಂದ್ರಗಳಾಗಿ ಪರಿವರ್ತನೆ ಹೊಂದಿ ಆದಿಶಕ್ತಿಯ ಗುಡಿಗಳಾಗುತ್ತವೆ.
ಕರ್ನಾಟಕಕ್ಕೆ ಕರುನಾಡು ಎಂದು ಹೆಸರು ಬರಲು ಈ 'ಕರುಕಲ್ಲು' ಸಹ ಒಂದು ಕಾರಣವೆಂದು ಹೇಳಲಾಗುತ್ತದೆ. 'ಕರಿಕಲ್ಲು' ಇದ್ದೆಡೆ ದೈವ ನೆಲೆ ಇದೆ ಎಂದು, ಅಥವ ಪೂರ್ವ ಹೊಲಯರು/ಮಾದಿಗರು ಇದ್ದರೆಂದು ಪರಿಗಣಿಸಿ, ಅದು ಮಾನವರು ವಾಸಿಸಲು ಸೂಕ್ತ ಸ್ಥಳವೆಂದು ಗುರುತಿಸಿ ಹೊಲಯರು ಕರುಕಲ್ಲು ನೆಟ್ಟಿ ಕಟ್ಟಿದ ನಾಡು ಕರುನಾಡು ಎಂಬ ವಾದವೂ ಸಹ ಇದೆ. ಹೊಲಯರ ಸಾಮ್ರಾಜ್ಯ ಕರುನಾಡು, ಸಿಂಧೂ ದಕ್ಷಿಣ ಕೊಳ್ಳದಿಂದ ಕಾವೇರಿಯ ಕೊಳ್ಳದ ದಕ್ಷಿಣ ದಡದವರೆಗೂ, ಭಾರತ ಖಂಡದೊಳಗೆ ಪಶ್ಚಿಮಕ್ಕೆ ಇತ್ತು ಎನ್ನಲಾಗಿದೆ.


ಸಂಸ್ಕೃತ ಶ್ಲೋಕಗಳಲ್ಲಿ ಹೊಲತಿ ಮಾತಂಗಿಯರ ಉಲ್ಲೇಖ :-

ಶಕ್ತಿ-ಆದಿಶಕ್ತಿಯನ್ನು ಎಷ್ಟೇ ಆರ್ಯೀಕರಣಕ್ಕೊಳಪಡಿಸಿದರೂ ಸಹ, ಅದು ತನ್ನ ಮೂಲರೂಪವನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಸಂಸ್ಕೃತ ಶ್ಲೋಕಗಳಲ್ಲಿರುವ ಹೊಲತಿ-ಮಾತಂಗಿ ಸೂಚಕ ಪದಗಳೇ ಸಾಕ್ಷಿ!

'ಮಾತಂಗಪ್ರಿಯೆ', 'ಮಾತಂಗಿ' ಎಂಬುದು ಆದಿಶಕ್ತಿ-ದೇವಿಗೆ ಸಂಬಂಧ ಪಟ್ಟ ಸಂಸ್ಕೃತ ಶೋಕಗಳಲ್ಲಿ ಕಂಡು ಬರುವ ಸಾಮಾನ್ಯ ಪದವಾಗಿದ್ದು, ಇದು ಆದಿಶಕ್ತಿ-ದೇವಿಯು ಮಾತಂಗ/ಮಾದಿಗ ಗಣದವಳು ಎಂದು ಸೂಚಿಸುತ್ತದೆ.
.
'ವಲ್ಲಭೆ', 'ಪುಲಮಾಯಿ', 'ಹರಿತಿ', 'ಹರತಿ', 'ಪ್ರತ್ಯಂಗಿರ' ಎಂಬುದು ಆದಿಶಕ್ತಿ-ದೇವಿಗೆ ಸಂಬಂಧ ಪಟ್ಟ ಸಂಸ್ಕೃತ ಶೋಕಗಳಲ್ಲಿ ಕಂಡು ಬರುವ ಸಾಮಾನ್ಯ ಪದವಾಗಿದ್ದು, ಇದು ಆದಿಶಕ್ತಿ-ದೇವಿಯು ನಾಗ/ಹೊಲಯ ಗಣದವಳು ಎಂದು ಸೂಚಿಸುತ್ತದೆ.
.
.
ಈ ಮಾರಿಯರು ಆಯಾ ಊರಿನ ಹೆಸರಿನೊಡನೆಯೂ ಗುರುತಿಸಿಕೊಳ್ಳುವುದು ಸಹಜ.
.
ಸುತ್ತಮುತ್ತಲಿನ ಏಳು ಊರುಗಳಿಗೆ ಒಂದೇ ಮಾರಿಗುಡಿ ಇದ್ದರೆ ಆಕೆ "ಏಳೂರಮ್ಮ"
ಹಾಸನದ ಮಾರಿ "ಹಸನಾಂಭೆ"
ಕಬ್ಬಾಳುವಿನ ಮಾರಿ "ಕಬ್ಬಾಳಮ್ಮ"
ಕೋಲಾರದ ಮಾರಿ "ಕೋಲಾರಮ್ಮ"
ಮದ್ದೂರಿನ ಮಾರಿ "ಮದ್ದೂರಮ್ಮ"
ಮುಳಕಟ್ಟೆಯ ಮಾರಿ "ಮುಳ್ಕಟ್ಟಮ್ಮ"
ಇತ್ಯಾದಿ ಇತ್ಯಾದಿ.........


ಇನ್ನು ಕೆಲವೊಮ್ಮೆ, ಗುಣ ಮತ್ತು ಬಣ್ಣದೊಡನೆಯೂ ಸಹ ಮಾರಿಯರ ಹೆಸರುಗಳು ತಳುಕು ಹಾಕಿಕೊಂಡಿರುತ್ತವೆ.

ಗಾಢ ಬಣ್ಣದವಳು "ಕಾಳಮ್ಮ"
ಕೆಂಪಗಿದ್ದವಳು "ಕೆಂಪಮ್ಮ"
ಕೆಂಚಗಿದ್ದವಳು "ಕೆಂಚಮ್ಮ"
ಕಪ್ಪಗಿದ್ದವಳು "ಕರಿಯಮ್ಮ/ಕಾಳಮ್ಮ"
ಅಗಲ ಕಣ್ಣುಳ್ಳವಳು "ಕಣ್ಣಮ್ಮ"
ಮುದ್ದಾಗಿದ್ದವಳು "ಮುದ್ದಮ್ಮ"
ದಾನ ಮಾಡುತ್ತಿದ್ದವಳು "ದಾನಮ್ಮ"
ಚೆನ್ನಾಗಿದ್ದವಳು "ಚೆನ್ನಮ್ಮ"
ಸಿಂಹದ ಗಾಂಭೀರ್ಯ ಹೊಂದಿದ್ದವಳು "ಸಿಂಗಮ್ಮ"
ಮಾಡಿದ ತಪ್ಪಿಗೆ ಶಿಕ್ಷಿಸಿ ಪಾಪ ಪರಿಹಾರ ಮಾಡುತ್ತಿದ್ದವಳು "ದಂಡಮ್ಮ"
ಜೇನು-ಹೊನ್ನಿನ ಬಣ್ಣದವಳು "ಹೊನ್ನಮ್ಮ"
ಮುತ್ತನ್ನು ಧರಿಸುತ್ತಿದ್ದವಳು "ಮುತ್ತಮ್ಮ"
ನಾಗರ ಕಣ್ಣುಳ್ಳವಳು "ನಾಗಮ್ಮ"
ಕೆಂಡದಂತ ಕೋಪವುಳ್ಳವರು "ಉರಿಮಾರಿ"
ಭೈರರು ಪೂಜಿಸುತ್ತಿದ್ದ ರಾಣಿ (ಮಾರಿ), "ಬೋರಮ್ಮ"
ಚಂಡಾಲರು ಮತ್ತು ಮುಂಡಾಲರು ಪೂಜಿಸುತ್ತಿದ್ದ ರಾಣಿ (ಮಾರಿ) "ಚಾಮುಂಡಿ"
ರಕ್ಷಕರು ಪೂಜಿಸುತ್ತಿದ್ದ ಮಾರಿ "ರಾಕಾಸಮ್ಮ"
ಇತ್ಯಾದಿ ಇತ್ಯಾದಿ...

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಹೀಗೆ ಅಖಂಡ ಭಾರತದ ಉದ್ದಗಲಕ್ಕೂ ಮಾರಿಯರ ಅಸ್ತಿತ್ವವಿದ್ದು ಅವರೆಲ್ಲರೂ ನಾಗಮಾತಂಗರ (ಹೊಲಯ ಮಾದಿಗರ) ಅಥವ ಆದಿಮ ಪರಂಪರೆಯವರೇ ಆಗಿದ್ದಾರೆ.

ಚೋಳ-ಚಾಲುಕ್ಯರ ಉದಯದವರೆಗೂ ಈ ಮಾರಿಗುಡಿಯ ಮಾರಿಯನ್ನು ನಿರಾಕಾರ 'ಕರಿಕಲ್ಲು' ರೂಪದಲ್ಲೇ ಪೂಜಿಸಲಾಗುತ್ತುತ್ತು.
(ಈಗಲೂ ಸಹ ಭಾರತದ ಎಲ್ಲಾ ಶಕ್ತಿಪೀಠ, ದೇವಿಯರ ದೇವಾಲಯಗಳಲ್ಲೂ ಉತ್ಸವ ಮೂರ್ತಿ ಮತ್ತು ಮೂಲಮೂರ್ತಿ ಎಂಬ ಎರಡು ಬಗೆಯ ವಿಗ್ರಹಗಳಿರುತ್ತವೆ.
(ಮೂಲ ಮೂರ್ತಿಗೆ ಯಾವುದೇ ರೀತಿಯ ರೂಪವಿರುವುದಿಲ್ಲ!)
ಆದರೆ ಕಲಾಭಿಮಾನಿಗಳಾಗಿದ್ದ ಚಾಲುಕ್ಯರಿಂದ ನಿರಾಕಾರ ಮೂಲಮೂರ್ತಿಯೊಡನೆಯೇ 'ಉತ್ಸವ ಮೂರ್ತಿ' ಎಂಬ ಹೊಸ ವಿಚಾರ ತಲೆ ಎತ್ತಿತು.
ಚಾಲುಕ್ಯರಿಗಿಂತ ಮೊದಲೇ ದೇವಿಯ ವಿಗ್ರಹಗಳು ಕೆತ್ತಿದ್ದಿರಬಹುದಾದರು, ಅದನ್ನು ನಿರಾಕಾರ ಮೂಲಮೂರ್ತಿಯ ಎದುರು ಉತ್ಸವ ಮೂರ್ತಿಯಾಗಿ ಬಳಸಲಾಗುತ್ತಿರಲಿಲ್ಲ.

ಇನ್ನು ಕೆಲವೊಮ್ಮೆ, ಮೂಲ ಮೂರ್ತಿಯಾದ ನಿರಾಕಾರವಕಲ್ಲುಗಳಿಗೇ ಮೂರ್ತ ರೂಪ ಕೊಟ್ಟಿರುವ ಹಲವು ಉದಾಹರಣೆಗಳನ್ನು ಮೂರ್ತ ರೂಪವಿರುವ ಮಾರಿಯರ ಮಾರಿಗುಡಿಗಳಲ್ಲಿ ಕಾಣಬಹುದು.
ಚೋಳ ಚಾಲುಕ್ಯರಿಗೂ ಮೊದಲೇ ಶಕ್ತಿಯರ ಕೆತ್ತನೆಗಳು ಆಗಿದ್ದರು ಸಹ ಅದು ಕೇವಲ ಅಲಂಕಾರಿಕ ಕೆತ್ತನೆಗಳಾಗಿಯಷ್ಟೆ ಬಳಕೆಯಾಗಿದೆ. ಗೋಡೆಕೆತ್ತನೆ ಶಿಲ್ಪಕಲೆಗೆ ಮಾತ್ರಾ ಸೀಮಿತವಾಗಿರುತ್ತಿತ್ತು.
ಹೀಗೆ ಮಾರಿಗುಡಿಯ ಮಾರಿಯರು ಮೂರ್ತರೂಪ ಪಡೆಯಲು ಆರಂಭಿಸಿದವು.


ಮಾರ ಮಾದರ ಮೇಲೆ (ಮೂಲನಿವಾಸಿ ಸೂರ್ಯಚಂದ್ರಾದಿಕುಲ ನಾಗ ಮಾತಂಗರ ಮೇಲೆ) ಸಾಂಸ್ಕೃತಿಕ ಆಕ್ರಮಣ - ತುಚ್ಛೀಕರಣ :-


ಅಂದಿಗೆ ಮಾರಿಗುಡಿಗಳು ಕೇವಲ ಗುಡಿಗಳಾಗಿ ಉಳಿದಿರಲಿಲ್ಲ. ಅದು ಎಲ್ಲಾ ಆದಿಮರನ್ನು ಮತ್ತು ಇತರೇ ಅವೈದಿಕರನ್ನು ಒಗ್ಗೂಡಿಸುವ ಕೇಂದ್ರವಾಗಿತ್ತು. ಎಲ್ಲಾ ರೀತಿಯ ಶುಭಕಾರ್ಯಗಳು, ಆರೋಗ್ಯ ವಿಚಾರದಲ್ಲಿನ ವಿಷಯಗಳು ಇತ್ಯಾದಿಗಳು, ಎಲ್ಲದಕ್ಕೂ ಮಾರಿಗುಡಿಗಳು ಕೇಂದ್ರವಾಗಿ ಸಾಕ್ಷಿಯಾಗಿದ್ದವು.
ಅಲ್ಲಿ ಹೊಲಯ ಮಾದಿಗರು (ನಾಗಮಾತಂಗರು) ಕ್ಷಾತ್ರತ್ವವನ್ನು ತೊಟ್ಟು ಅರಸರಾಗಿದ್ದರು.
ಮೂರ್ತಿ ಆರಾಧಕರಲ್ಲದ ವೈದಿಕರು ತಮ್ಮ ಪ್ರಭುತ್ವವನ್ನು ಎಲ್ಲಾ ಆದಿಮರ ಮೇಲೆ ಮತ್ತು ಇತರೆ ಅಬ್ರಾಹ್ಮಣರ ಮೇಲೆ ಸಾಧಿಸಲು, ತಮ್ಮ ಕಟ್ಟು ಪಾಡುಗಳನ್ನು ಮೀರಿ ಮೂರ್ತಿ ಆರಾಧಕರಾಗುತ್ತಾರೆ.

ಮೇಲ್ನೋಟಕ್ಕೆ ಅದು ಬಹುಸಂಖ್ಯಾತರಾಗಿದ್ದ ಆದಿಮ-ಅವೈದಿಕರನ್ನು ಓಲೈಕೆಯಂತೆ ಕಂಡರೂ ಸಹ, ಅದು ಷಡ್ಯಂತ್ರವೇ ಆಗಿತ್ತು. ಅದಿಕ್ಷತ್ರೀಯ ಪರಂಪರೆಯ ಆದಿ ನಾಗಮಾತಂಗರ ಕ್ಷಾತ್ರತ್ವದಲ್ಲಿದ್ದ ಭರತ ಭೂಮಿಯಲ್ಲಿ ಸುಭೀಕ್ಷೆಯಂದಿದ್ದ ಎಲ್ಲಾ ಆದಿಮರು ಅವೈದಿಕರ ಮೇಲೆ ಅಂದು ನಡೆದದ್ದು ಅಕ್ಷರ ಸಹ ಒಂದು ಸಾಂಸ್ಕೃತಿಕ ಯುದ್ಧವೇ ಸರಿ!
ಆದಿಮ-ಅವೈದಿಕರ ಮೇಲೆ ಪ್ರಭುತ್ವ ಸಾಧಿಸಲು ಯೋಚಿಸಿದ ವೈದಿಕರು, ಅವರೆಲ್ಲರಿಗೂ ಕೇಂದ್ರವಾಗಿದ್ದ ಮಾರಿಗುಡಿಯ ಮೇಲೆ ಪ್ರಭುತ್ವ ಸಾಧಿಸಿದರೆ ಸುಲಭವಾಗುವುದು ಎಂಬುದು ಅರಿತಿದ್ದಂತಿದೆ! ಮೊದಲಿಗೆ, ಬ್ರಾಹ್ಮಣ/ವೈದಿಕರು ತಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಮಾರಿಗುಡಿಗಳ ಮೂಲಕ ಪರಿಚಯಿಸಲು (ಹೇರಲು) ಮುಂದಾಗುತ್ತಾರೆ.
ಇದನ್ನು ಸಂಸ್ಕೃತಿಯ ಕೂಡುಕೊಳ್ಳುವಿಕೆ ಎಂದು ಭಾವಿಸಿದ ನಾಗಮಾತಂಗರು ಮೊದಲಿಗೆ ಇದನ್ನು ವಿರೋಧಿಸುವುದಿಲ್ಲ. ಆದರೆ ನಂತರ ಇದರ ಒಳಮರ್ಮವನ್ನು ತಿಳಿದು ಪ್ರಬಲವಾಗಿ ವಿರೋಧಿಸಲು ಆರಂಭಿಸುತ್ತಾರೆ.
ಆದಿಮರ ನಡುವೆಯೇ ಒಗ್ಗಟ್ಟನ್ನು ಒಡೆದು, ನಾಗಮಾತಂಗರ ನಡುವೆ ಭಿನ್ನಾಭಿಪ್ರಾಯದ ಕಂದಕವನ್ನು ಸೃಷ್ಟಿಸಿ, ಆದಿಮರು ಮತ್ತು ಇತರೇ ಅಬ್ರಾಹ್ಮಣರನ್ನೂ ಒಗ್ಗೂಡದಂತೆ ಮಾಡಿ ತಮ್ಮ ಕಾರ್ಯ ಸಾಧನೆಗೆ ಮುಂದಾಗುತ್ತಾರೆ. ಇದಕ್ಕೆ ಜೊತೆಯಾಗಿ ವೈದಿಕರೊಡನೆ ಕೈ ಜೋಡಿಸುವವರು ನಮ್ಮವರಲ್ಲದ ನಮ್ಮವರೆ! ಅರ್ಥಾತ್ ಈವತ್ತಿನ ಮೇಲಸ್ಥರದ ಶೂದ್ರರು (ನಿಯೋ-ಕ್ಷತ್ರೀಯಾಸ್)!

ಇಷ್ಟಾದರೂ ಕುಗ್ಗದ ನಾಗಮಾತಂಗರನ್ನು ಸಾಂಸ್ಕೃತಿಕ ಸಾಂಪ್ರದಾಯಿಕವಾಗಿ ತುಚ್ಛೀಕರಿಸಲು ಎಣೆದು ಪ್ರಚಾರ ಮಾಡಿದ ಕಥೆಯೇ "ಬ್ರಾಹ್ಮಣರ ಮಾರಿ-ಕೋಣ ಟಗರು ಹೋತ ಹುಂಜದ ಕಥೆ"!


"ಮಾರಿ ನಮ್ಮವಳಲ್ಲ! ಮಹಿಷ ಮರ್ಧಿನಿ! ಮೂಲನಿವಾಸಿ ಆದಿಮರ ವಿರೋಧಿ" ಎಂಬ ತಪ್ಪು ಕಲ್ಪನೆಯ ಅನರ್ಥಗಳು!


ಮಾರಿಯರು ಅಥವ ಶಕ್ತಿ ಆರಾಧನೆಯು ಆದಿಮರ ಮೂಲ ಪರಂಪರೆ. ಆದಿ ಕರ್ಣಾಟ - ಆದಿ ದ್ರಾವಿಡರ ಪರಂಪರೆ! ಇಂದಿನ ಹೊಲಯರು, ಮಾದಿಗರು, ಪರಯ್ಯರು, ಪುಲಯರು, ಚಕ್ಕಿಲಿಯರು, ಮಾತಂಗರು, ಮಹಾರರು, ಮಾಂಗರು, ಮಾಲರು, ಪಲ್ಲರು, ಈ ಪರಂಪರೆಯ ಮೂಲ ವಾರಸುದಾರರಾಗಿದ್ದಾರೆ.


"ಶೋಷಿತ" ಎಂಬ ನೆಲೆಯಲ್ಲಿ "ದಲಿತ" ಎಂಬ ಹೆಸರಿನ ಬಂಡವಾಳದಲ್ಲಿ ವಾಕರಿಕೆ ಹುಟ್ಟಿಸುವಂತ ರಾಜಕೀಯದಲ್ಲಿ, ಮತಾಂತರವೆಂಬ ಆಧುನಿಕ ವ್ಯಭಿಚಾರದ ವ್ಯಾಪಾರದಲ್ಲಿ ಇಂತಹ ಭವ್ಯ ಆದಿಮ ಪರಂಪರೆ ಮತ್ತು ಸಂಸ್ಕೃತಿ ಕಡೆಗಣನೆಗೆ ಒಳಗಾಗುತ್ತಾ, ಇಂದು ಅಳಿವಿನಂಚಿಗೆ ಸಾಗುತ್ತಿರುವುದು ದುರಂತದ ಸಂಗತಿ!

ಆದಿಮ ಪರಂಪರೆಯೊಳಗೆ ಮೂಡಿರುವ ಶಾಕ್ತ (ಶಕ್ತಿ ಆರಾಧನೆ), ಆದಿ ಶೈವ (ಸಿದ್ಧ/ನಾಥ ಪರಂಪರೆ), ಆದಿ ವೈಷ್ಣವ (ತಿರುಕುಲ ದಾಸಯ್ಯ ಪರಂಪರೆ) ಪರಂಪರೆಗಳು ಇಂದು ತನ್ನ ಜನರಿಂದಲೇ ಕಡೆಗಣಣೆಗೊಳಗಾಗುತ್ತಿರುವುದು ಒಂದು ಧಾರ್ಮಿಕ/ಸಾಂಸ್ಕೃತಿಕ ಆಘಾತಕಾರಿ ಬೆಳವಣಿಗೆಯೇ ಸರಿ!

ಇದು ಮುಂದೆ ನಮ್ಮ ಮೂಲನೆಲೆ, ಭವ್ಯ ಇತಿಹಾಸ ಪರಂಪರೆಗಳನ್ನೇ ಕಳೆದುಕೊಂಡು ಸಾಮುದಾಯಿಕವಾಗಿ ನವ ಸಂಸ್ಕೃತಿಯ ತ್ರಿಶಂಖು ಸ್ಥಿತಿಗೆ ಬೀಳಿಸಿ ಅನಾಥ ಪ್ರಜ್ಞೆಗೆ ನೂಕಬಹುದು!

ದಲಿತರನ್ನು ತಮ್ಮ ಮೂಲ ಸಂಸ್ಕೃತಿಯಿಂದ ಬೇರ್ಪಡಿಸಿ, ಧಾರ್ಮಿಕವಾಗಿ ಹಾಗು ಸಾಂಸ್ಕೃತಿಕವಾಗಿ ಅತಂತ್ರಗೊಳಿಸುವಲ್ಲಿ ಮತಾಂತರಗಳು ಹಾಗು ಮತಾಂತರಿಗಳು ಕಾರ್ಯನಿರತರಾಗಿದ್ದಾರೆ!

ಶಕ್ತಿ (ಶಾಕ್ತ) ಪರಂಪರೆಯ, ಶೈವ, ವೈಷ್ಣವ, ಬೌದ್ಧ, ಜೈನ ಮತ್ತು ವೈದಿಕ ಧರ್ಮಗಳನ್ನೆಲ್ಲಾ ತನ್ನ ಅಜಾನುಬಾಹುಗಳಿಂದ ತಬ್ಬಿ ಹಿಡಿದಿದ್ದರೂ ಸಹ, ಇಂದು ಮತಗಳು ರಾಜಕೀಯ ಸರಕಾಗಿ, ಎಲ್ಲವೂ ಪ್ರತ್ಯೇಕತೆಯ ಅಂತರವನ್ನು ಕಾಯ್ದು ಕೊಂಡಿವೆ!

ಕಾಲ ಉರುಳಿದಂತೆ, ಇಂದು ಹೊಲಯ ಮಾದಿಗರಲ್ಲಿ ಕೊಂಚ ಮಟ್ಟಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚೇತರಿಕೆ ಕಾಣುತ್ತಾ, ಸಾಂಸ್ಕೃತಿಕ ಹಾಗು ಧಾರ್ಮಿಕವಾಗಿಯೂ ತಮ್ಮ ಮೂಲ ಪರಂಪರೆ ಸಂಸ್ಕೃತಿಯನ್ನು ಆಚರಿಸುತ್ತಾ, ಅನುಸರಿಸುತ್ತಾ, ಇಂದು ಸಮಾಜದ ಮುಖ್ಯವಾಹಿನಿಗೆ, ಮತ್ತು ತನ್ನ ಸಹೋದರ ಜಾತಿ ಸಮುದಾಯಗಳೊಡನೆ ಬೆರೆಯಲು ಆರಂಭಿಸುತ್ತಿರುವ ಈ ಸಮಯದಲ್ಲೇ, ಈ ಹೊಲಯಮಾದಿಗರನ್ನು ತಮ್ಮ ಮೂಲ, ಶಾಕ್ತ ಮತ್ತು ಶಾಕ್ತ ಪರಂಪರೆಯೊಂದಿಗೆ ಗುರುತಿಸಿಕೊಳ್ಳುವ ಆದಿ ಶೈವ (ಸಿದ್ಧ, ನಾಥ ಪಂಥ), ಆದಿ ವೈಷ್ಣವ (ತಿರುಕುಲ ದಾಸಯ್ಯ ಪರಂಪರೆ) ಸಂಸ್ಕೃತಿಗಳಿಂದ ದೂರ ಮಾಡಲು ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿಯೇ ತಿಳಿದಿರುವ ಮತಾಂತರಿಗಳು, ಇಂದು ಅದೇ ಶಾಕ್ತ ಪರಂಪರೆಯು ಹೊಲಯ ಮಾದಿಗರ ಪರಂಪರೆಯೇ ಅಲ್ಲ, ಮಾರಿಯರು ಕಾಳಿಯರು ಚಾಮುಂಡಿಯರು ಮೂಲನಿವಾಸಿಗಳ ವಿರೋಧಿಗಳು ಎಂದೆಲ್ಲಾ ಇಲ್ಲಸಲ್ಲದ ಕಟ್ಟು ಕಥೆಗಳನ್ನು ಸೃಷ್ಟಿಸಿ, ಬೊಗಳೆ ಬಿಡಿತ್ತಾ, ಮುಗ್ಧ ಹೊಲಯ ಮಾದಿಗರ ಪ್ರಜ್ಞೆಯೊಂದಿಗೆ ಆಟವಾಡುತ್ತಾ ನಮ್ಮ ಬೆರಳಿನಿಂದ ನಮ್ಮ ಕಣ್ಣನ್ನೇ ಚುಚ್ಚುವ ತಂತ್ರ ಉಪಯೋಗಿಸುತ್ತಿದ್ದಾರೆ!


ಹೊಲಯ (ನಾಗ) ಮಾದಿಗರ (ಮಾತಂಗ) ಸಂತತಿಯ ವ್ಯಾಪ್ತಿಯು ಬಹಳ ದೊಡ್ಡದಿದೆ.
ಪ್ರಾಂತೀಯವಾಗಿ, ತಾವು ನುಡಿವ ನುಡಿಯ ಅನುಸಾರ, ತಮ್ಮ ಪ್ರಾದೇಶಿಕತೆಗೆ ಅನುಸಾರ ಭಿನ್ನ ಹೆಸರುಗಳಿಂದ ಗುರುತಿಸಿಕೊಂಡರು ಸಹ ಇವರೆಲ್ಲರೂ ಒಂದೇ ಮೂಲವನ್ನು ಪರಸ್ಪರ ಹಂಚಿಕೊಂಡಿದ್ದಾರೆ.
ಹೊಲಯ ಸಂಸ್ಕೃತಿ ಪದ್ದತಿ (ಅಸೀವಗಂ/ಅಜೀವಿಕ ಜೀವನ ಶೈಲಿ) ಅನುಸಾರ, ಆದಿಮ, ಶೈವ, ವೈಷ್ಣವ, ಜೈನ, ಬೌದ್ಧ ಧರ್ಮಗಳ ಆದಿಯನ್ನು ಹೊಲಯ ಮಾದಿಗರು ಅಥವ ಆದಿಮರು ಇಲ್ಲದೇ ಊಹಿಸಿಕೊಳ್ಳಲು ಸಾಧ್ಯವಿಲ್ಲ!

ಇದನ್ನು ಪ್ರಾದೇಶಿಕವಾಗಿಯೂ ಭಿನ್ನವಾದ ನಿಲುವು ತಾಳಿದೆ. ಈಶಾನ್ಯ ಭಾರತದಲ್ಲಿ ಮಲ್ಲರು ಎನಿಸಿಕೊಳ್ಳುವ ನಾಗ/ಹೊಲಯರು ಮೂಲತಃ ಆದಿಶೈವ/ಆದಿವೈಷ್ಣವರಾಗಿದ್ದರೂ ಸಹ, ಬುದ್ಧನ ಕಾಲದಲ್ಲಿ ಶುದ್ಧ ಬೌದ್ಧರಾಗಿದ್ದರೆ, ಮಿಕ್ಕ ಭಾರತದಾದ್ಯಂತ ಆದಿಮ ಶಾಕ್ತರಾಗಿ, ಆದಿ ಶೈವರಾಗಿ, ಕೆಲವೊಮ್ಮೆ ಜೈನರಾಗಿಯೂ, ಆದಿ ವೈಷ್ಣವರಾಗಿಯೂ ಗುರುತಿಸಿಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ ಅಸೀವಗಂ/ಅಜೀವಿಕ (ಹೊಲಯ ಪದ್ಧತಿ :- ಸತ್ತ ಹಿರಿಯರನ್ನು/ಪೂರ್ವಜರನ್ನು ಆರಾಧಿಸುವ ಪದ್ಧತಿ) ಇರುವುದಂತು ನಿಜ.

ಇಂಥಹ ಆದಿಮ ಪರಂಪರೆಯ ಮೂಲದ ಅರಸು ಕುಲಗಳೇ ಭಾರತ ಭೂಮಿಯಲ್ಲಿ ಈ ನೆಲದಲ್ಲಿ ಹುಟ್ಟಿದ ಧರ್ಮಗಳನ್ನೆಲ್ಲಾ ಪೋಷಿಸಿದ್ದಾರೆ. ಎಲ್ಲದಕ್ಕೂ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.
ಇಂತಹ ಹಿನ್ನೆಲೆ ಇತಿಹಾಸ ತಿಳಿಯದ ನಮ್ಮ ಮುಗ್ಧ ಜನರು ಮತಾಂತರಗಳಿಗೆ ಬಲಿಯಾಗಿ ತಮ್ಮ ಸಂಸ್ಕೃತಿ ಪರಂಪರೆಗಳನ್ನು ಅನಾಥ ಪ್ರಜ್ಞೆಗೆ ನೂಕುವಂತಾಗುತ್ತಿರುವುದು ದೊಡ್ಡ ದುರಂತ!
ಆದಿಮರನ್ನು ತಮ್ಮದೇ ಪರಂಪರೆಗಳ ವಿರುದ್ಧ ಎತ್ತುಕಟ್ಟಿ ತಮ್ಮ ಮೂಲ ನೆಲೆಯಿಂದ ದೂರ ಮಾಡಿ ಮತಾಂತರಗಳಿಗೆ ಎಡೆಮಾಡಿಕೊಡುವ ದುರುದ್ದೇಶವೂ ಇದರ ಹಿಂದೆ ಅಡಗಿದ್ದಿರಬಹುದು! ಇಂದು ಇಂತಹ ಹೇಯ ಕೃತ್ಯಗಳು ರಾಜಕೀಯ ಅಸ್ತ್ರವೂ ಆಗಿದೆ!

ಈ ದುಶ್ಕಾರ್ಯ ಸಾಧನೆಗೆ ಮತಾಂತರಿಗಳು ಇಂದು ಬಳಸುತ್ತಿರುವ ಅಸ್ತ್ರ "ಮಹಿಷಾಸುರ ರಾಜನನ್ನು ಚಾಮುಂಡಿಯು ಕೊಂದು, ಮೂಲನಿವಾಸಿಗಳಿಗೆ ಅನ್ಯಾಯ ಮಾಡಿದಳು" ಎಂಬ ಇರಾದೆ!



ಈ ಅಸುರ ಮತ್ತು ಅಸುರ ಮರ್ಧಿನಿಯ ಕಥೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದರೂ ಸಹ, ಅವೆಲ್ಲವೂ ಒಟ್ಟಾರೆ ಒಂದೇ ಕಥೆಯೆಂಬುದು ಮೇಲ್ನೋಟಕ್ಕೆ ತಿಳಿಯಿವುದಂತು ನಿಜ! ಅದನ್ನು "ಅಪಾರ್ಥಕ್ಕೆ ಸೃಷ್ಟಿಯಾದ ಕಟ್ಟು ಕಥೆ" ಎನ್ನಬಹುದು!
"ಮಹಿಷ" ಎಂದರೆ ಈಶ್ವರನ ಮತ್ತೊಂದು ಹೆಸರು. ಹಾಗು ಅದನ್ನು 'ಕೋಣ' ಎಂದೂ ಅರ್ಥೈಸಲಾಗುತ್ತದೆ. ಸಿಂಧೂ ಅವಶೇಷಗಳಲ್ಲಿ ಸಿಕ್ಕಲಾಗಿದೆ ಎನ್ನಲಾಗುವ '



ಪಶುಪತಿ ಮುದ್ರೆ'ಯ ಮೂಲ ಹೆಸರು 'ಮಹಿಷ ಮುದ್ರೆ' ಎಂದು! ಚಿತ್ರ ನೋಡಿದರೆಯೆ ತಿಳಿಯುತ್ತದೆ! ಅಲ್ಲಿಯ ಪಶುಪತಿಯ ಶಿರ ಭಾಗವು ಕೋಣದ ಕೊಂಬು/ತಲೆಯಿಂದ ಕೂಡಿದೆ.

ಮಾರಿಯರ ಬಂಟರು



ಸಾಮಾನ್ಯವಾಗಿ, ಮೇಲೆ ತಿಳಿಸಿರುವ ಮಾರಿಯರಿಗೆ ಒಬ್ಬರು ಅಥವ ಇಬ್ಬರು ಬಂಟರು ಇರುತ್ತಾರೆ. ಸೀಡೀರಣ್ಣ, ಕೆಂಚಣ್ಣ, ಕರಿಯಣ್ಣ, ಸೋಮ, ಭೀಮ ಇತ್ಯಾದಿ ಹೆಸರುಗಳಲ್ಲಿ ಅವರನ್ನು ಗುರುತಿಸಲಾಗುತ್ತದೆ.

ಆದಿಶಕ್ತಿಯ ಪ್ರಸಂಗದಲ್ಲಿಯೂ ಸಹ, ಮೊದಲಿಗೆ ಮೂಲ ಶಕ್ತಿಗೆ ಹರಿ ಮತ್ತು ಹರರು ಬಂಟರಾಗಿದ್ದನ್ನು ಇಲ್ಲಿ ಉದಾಹರಿಸಬಹುದು!
ನಂತರ ಶಕ್ತಿಯು, ಪುನರ್ಜನ್ಮ ತಾಳಿ, ಹರಿ ಹರ ಇಬ್ಬರಿಗೂ, ಪಾರ್ವತಿ ಮತ್ತು ಲಕ್ಷ್ಮಿಯರಾಗಿ ಜನ್ಮ ತಾಳುವುದು ಪುರಾಣದ ಕಥನ!

ಹೀಗೆಯೇ, ಮಾರಿಯರಿಗೂ ಬಂಟರಿರುತ್ತಾರೆ.
ಕೆಲವೊಮ್ಮೆ ಸಿಡೀರಣ್ಣ. ಇನ್ನು ಕೆಲವು ಪ್ರಸಂಗದಲ್ಲಿ ಕರಿಯಣ್ಣ ಕೆಂಚಣ್ಣ, ಇವರೂ ಹಲವು ಸಲ ಶ್ರೀ ಹರಿಯ ಬಂಟರಾದ ಜಯ ವಿಜಯರಾಗಿಯೂ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ಸೋಮಗಳು ಭೀಮರು ಬಂಟರಾಗಿ ಕಾಣಿಸಿಕೊಳ್ಳುತ್ತಾರೆ.

ಹೀಗೆ ಮಹಿಷಾಸುರನನ್ನೂ ಮಾರಿ ಅಥವ ಶಕ್ತಿಯ ಬಂಟ ಎಂದೇ ಪರಿಗಣಿಸಬಹುದು.

ಇದಕ್ಕೆ ಹಿಂಬು ಕೊಡುವಂತೆ ಮಹಿಷನ ಉಲ್ಲೇಖಗಳು ಪಾಂಡ್ಯ ಮತ್ತು ಅಳುಪರ ಕಾಲದ ಶಾಸನಗಳಲ್ಲಿ ಆಗಿದ್ದು, ಅಲ್ಲೆಲ್ಲ ಅವನನ್ನು ಶಿವ-ಶಕ್ತಿ ಆರಾಧಕನೆಂದು ಹೇಳುವುದನ್ನು ಮರೆತಿಲ್ಲ!



ಕೆಲವು ಪುರಾಣ ಕಥೆಗಳ ಪ್ರಕಾರ ಕಾಳಿಯು (ಭೈರವಿಯು) ದುಷ್ಟರನ್ನು ಸಂಹರಿಸಿ ಕೋಪೋದ್ರಿಕ್ತಳಾಗಿ ಆವೇಶದಿಂದ ಎಲ್ಲೆಡೆ ಅಲೆದಾಡಲು ಆರಂಭಿಸಿದಾಗ ಆಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ! ಯಾರೂ ಆ ಸಾಹಸಕ್ಕೆ ಮುಂದಾಗಲಿಲ್ಲ! ಕಾರಣ, ಆ ಆವೇಶದ ಕಾಳಿಯ ಎದುರು ನಿಂತರೆಯೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಲ್ಲರಿಗೂ ತಿಳಿದಿತ್ತು! ಇದನ್ನು ಹೀಗೇ ಬಿಡಬಾರದು ಎಂದು ಗಟ್ಟಿ ಮನಸ್ಸು ಮಾಡಿದ ಶಿವನು (ಭೈರವನು) ಆಕೆಗೆ ಏನಾದರು ಅಸಹಜತೆ ಮನವರಿಕೆಯಾದಲ್ಲಿ ಮಾತ್ರ ಅವಳು ಸಹಜ ಸ್ಥಿತಿಗೆ ಮರಳುತ್ತಾಳೆ ಎಂದು ತಿಳಿದ ಶಿವನು (ಭೈರವನು) ಕಾಳಿಯ (ಭೈರವಿಯ) ದಾರಿಗೆ ಅಡ್ಡಲಾಗಿ ಮಲಗುತ್ತಾನೆ!
ಕಾಳಿಯು (ಭೈರವಿಯು) ಶಿವನ ಎದೆ ಭಾಗದ ಮೇಲೆ ಕಾಲಿಡುತ್ತಾಳೆ! ಕಾಳಿಯ ತುಳಿತಕ್ಕೆ ಶಿವನ ಎದೆ ಬಡಿತ ನಿಂತು ಹೋಗುತ್ತದೆ! ಕಾಳಿಗೆ ಶಿವನ ಗುಂಡಿಗೆಯನ್ನೇ ತುಳಿದ ಅಸಹಜತೆ ಮನವರಿಕೆಯಾಗಿ ಕ್ರೋದದಲ್ಲಿ ಬಾಯಿಂದ ಹೊರ ಹಾಕಿದ್ದ ನಾಲಿಗೆಯನ್ನು ಆತುರದಲ್ಲಿ ಕಚ್ಚಿಕೊಂಡಾಗ, ಆಕೆ ಸಹಜ ಸ್ಥಿತಿಗೆ ಮರಳುತ್ತಾಳೆ! ರುದ್ರಗಣದ ಅಧಿಪತ್ಯದ ಸಂತತಿಯನ್ನು ಉಳಿಸಿಕೊಳ್ಳುವ ಸಲುವಾಗಿ, ಸತ್ತ ಶಿವನೊಂದಿಗೆ (ಭೈರವನೊಂದಿಗೆ) ಸಂಭೋಗ ನಡೆಸುತ್ತಾಳೆ!
(ಅಘೋರಿಗಳು ಶವದೊಂದಿಗೆ ಸಂಭೋಗ ನಡೆಸುವ ಪವೃತ್ತಿ ಪದ್ದತಿ ಈಗಲು ಇದೆ)



ಹೀಗೊಂದು ಹಿನ್ನೆಲೆ ಪುರಾಣ ಕಥೆಗಳಲ್ಲಿದೆ.
ಬಹುಶಃ ಇದೇ ಹಿನ್ನೆಲೆಯನ್ನು ಬಳಸಿಕೊಂಡು "ಮಹಿಷ ಮರ್ಧಿನಿ" ಎಂಬ ಕಟ್ಟು ಕಥೆ ಕಟ್ಟಲಾಗಿದೆ ಎನ್ನಬಹುದು!
ಸಿಡೀರಣ್ಣ, ಕರಿಯಣ್ಣ, ಕೆಂಚಣ್ಣ, ಸೋಮಗಳು, ಭೀಮರ, ಮಾರಿಯರ ಬಂಟರ ಸಾಲಿನಲ್ಲಿ ಮಹಿಷನನ್ನೂ ನಿಲ್ಲಿಸಬಹುದಾಗಿದೆ.
ಒಮ್ಮೊಮ್ಮೆ ಭೈರವರೂ, ಹನುಮರೂ, ಪರಶುರಾಮರು, (ವಾನರರೂ) ಮಾರಿಯರ ಬಂಟ ಪರಂಪರೆಯಲ್ಲಿ ಕಾಣಿಸಿಕೊಳ್ಳುವುದುಂಟು.
ಇವರೆಲ್ಲರೂ ಸಹ ಆದಿಮರ ಪರಂಪರೆಯ ಮೂಲವನ್ನೇ ಹೊಂದಿದ್ದಾರೆ.

ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿದರೆ, ಇಂದು ನಮ್ಮ ಆದಿಮ ಪರಂಪರೆಯನ್ನು ನಮ್ಮ ವಿರುದ್ಧವೇ ಎತ್ತು ಕಟ್ಟು ಮತಾಂತರಿಗಳಂತೆ, ಹಿಂದೆ ಬ್ರಾಹ್ಮಣರೂ ಸಹ ನಮ್ಮ ಆದಿಮ ಪರಂಪರೆಯನ್ನು ನಮ್ಮಿಂದ ದೂರ ಮಾಡಿ, ಶಾಕ್ತ ಪರಂಪರೆಯ ವಾರಸುದಾರಿಕೆಯನ್ನು, ಮಾರಿಯರನ್ನು, ಕಿತ್ತುಕೊಳ್ಳುವ ಹುನ್ನಾರ ನಡೆದ್ದಿದ್ದಂತು ನಿಜ ಎಂಬುದು ಮನದಟ್ಟಾಗುತ್ತದೆ!
ಇರುವ ಹಿನ್ನೆಲೆಗಳನ್ನು ತಿರುಚಿ, ಇಲ್ಲಸಲ್ಲದ ಕಥೆಗಳೆಲ್ಲವನ್ನು ಸೃಷ್ಟಿಸಿದ್ದರು ಎಂಬು ನಿರ್ವಿವಾದ!


ಇತ್ತೀಚೆಗೆ ನಮ್ಮ ಜನರು, ಸತ್ಯವನ್ನು ಸೂಕ್ಷ್ಮ ಸತ್ಯಗಳನ್ನು ಅರಿಯದೆ, ಪಟ್ಟಬದ್ರ ಹಿತಾಸಕ್ತರು, ಮತಾಂತರಿಗಳು, ವಾಮಪಂಥಿಯರು ತಿದ್ದು ವಿರೂಪಗೊಳಿಸಿದ ಕಥೆಗಳನ್ನೇ ಇತಿಹಾಸವೆಂದುಕೊಂಡು, ಮಾರಿ ನಮ್ಮವಳಲ್ಲ, ಚಾಮುಂಡಿ ನಮ್ಮವಳಲ್ಲ ಹಾಗೆ ಹೀಗೆ ಎಂದೆಲ್ಲಾ ತೆಗಳುತ್ತಾ ತಮ್ಮ ಇತಿಹಾಸದ ಮೇಲೆ ತಾವೇ ಚಪ್ಪಡಿಯನ್ನು ಎಳೆದುಕೊಳ್ಳುತ್ತಿದ್ದಾರೆ!
ಇದಕ್ಕಿಂತ ದೊಡ್ಡ ವಿಪರ್ಯಾಸ್ಯ ಮತ್ತೊಂದಿಲ್ಲ!
ಕೆಲ ಪಟ್ಟಬದ್ರಹಿತಾಸಕ್ತರು ಕಟ್ಟುವ ಕಟ್ಟುಕಥೆಗಳಿಗೆ ತಮ್ಮ ಮಾನಸಿಕತೆಯನ್ನು ಬಲಿಕೊಟ್ಟು ನಮ್ಮದೇ ದೈವಗಳನ್ನು ಹೀಯಾಳಿಸುವುವಂತ ಮೂರ್ಖತನದಿಂದ ಹೊರಬರಲಿ!
ತಮ್ಮದು ಯಾವುದು ಪರರದ್ದು ಯಾವುದು, ನಮ್ಮ ಭವ್ಯ ಪರಂಪರೆ ಇತಿಹಾಸಗಳನ್ನು ಅರಿತು ಬಾಳುವಂತಾಗಲಿ.
ಚಾಮುಂಡಿಯು ಅಂಬಾರಿ ಒಳಗಿದ್ದರೆ ಅದಕ್ಕೆ ನಾವು ಹೆಮ್ಮೆ ಪಡಬೇಕೇ ಹೊರತು ಆಡಬಾರದ್ದನ್ನೆಲ್ಲಾ ಆಡಿ ವಿವಾದ ಸೃಷ್ಟಿಸುವುದಲ್ಲ!

ಚಾಮುಂಡಿಯು ಸಹ ಓರ್ವ ಮಾರಿಯೆ. ಬೆಟ್ಟದ ಮಾರಿ.
ಮಹಾರ ಮಾದರ ಸತ್ತ ಹಿರಿಯರು ಮಾರಿಯರು!
ನಮ್ಮ ಪೂರ್ವಜರು ಅಂಬಾರಿಯಲ್ಲಿದ್ದರೆ ನಮಗೆ ಹೆಮ್ಮೆಯಲ್ಲವೆ???





ಗುರುವಾರ, ಆಗಸ್ಟ್ 11, 2016

ವಚನ ಸಾಹಿತ್ಯ ಕನ್ನಡಕ್ಕೆ ಹೆಮ್ಮೆಯೂ ಹೌದು! ಅದರಲ್ಲಿಯ ಹೊಲಯ ಮಾದಿಗ ಹೆಸರುಗಳ ನಿಂದನೆ ಆದಿ ಕನ್ನಡಿಗರಿಗೆ ಆದ ದ್ರೋಹವೂ ಹೌದು!

(ಒಂದು ಅದ್ಭುತ ಬರವಣಿಗೆ. ಓದಲು ಸ್ವಲ್ಪ ಸಮಯ ಹಿಡಿಸಬಹುದು. ಸಮಯ ಮಾಡಿಕೊಂಡು ಓದಿ. ಇದು ಓದಲೇಬೇಕಾದ ಒಂದು ಅಪರೂಪದ ಬರವಣಿಗೆ)

ಪದಾರ್ಥ ಇತಿಹಾಸ ಭಂಜನ




ಲೇಖಕರು :- ಮಾದು ಕ್ಯಾತಘಟ್ಟ



ಎರಡೂವರೆ ವರ್ಷದ ಹಿಂದೆ ಕೊರಟಗೆರೆಯ ಒಂದು ಗ್ರಾಮಕ್ಕೆ ಸ್ನೇಹಿತ (ಪ್ರದೀಪ್ ಬಸಯ್ಯ) ಮನೆಗೆಂದು (ಊರ ಹಬ್ಬಕ್ಕೆ) ನಾನು ಮತ್ತು ನನ್ನ ಸ್ನೇಹಿತರಿಬ್ಬರು ಹೋಗಿದ್ದೆವು.
ಈಗ ಆ ಸ್ನೇಹಿತ ಇಲ್ಲ! ಕಾಲನಾಗಿದ್ದಾನೆ!
ಆ ವಿಷಯ ಪಕ್ಕಕ್ಕಿರಲಿ.
ಆ ಊರಿಗೆ ಹೋಗಿ ಹಬ್ಬ ಮುಗಿದ ಮಾರನೆಯ ದಿನ, ಎಲ್ಲಾ ಬೆಂಗಳೂರಿಗೆ ಹಿಂತಿರುಗಯತಿದ್ದಾಗ, ಮೂರ್ನಾಲ್ಕು ಕಾರುಗಳು ಬಂದು ಊರ ಬಾಗಿಲ ಬಳಿ ಇಳಿದವು.
ಒಂದು ಮೂವರು ಪಾದ್ರಿಗಳು(Christian) ಕಾರಿನಿಂದ ಇಳಿದರು.
ಊರ ಹಿರಿಯರೆಲ್ಲರೂ ಇಡೀ ಆ ಊರಲ್ಲೇ ಚೆನ್ನಾಗಿರುವ ಒಳ್ಳೆ ಸ್ಥಿತಿಯಲ್ಲಿರು ಆ ಊರಿನ ಒಂದು ಭವನಕ್ಕೆ ಹೋಗುವುದ ಕಂಡು, ನನಗೂ ಕುತೂಹಲವಾಗಿ "ಇರ್ರೊ ಇದೇನಾಗತ್ತೆ ನೋಡ್ಕೊಂಡೆ ಹೋಗೋಣ" ಅಂತ ಅಲ್ಲೆ ಉಳಿಸಿದೆ.
ಪಾದ್ರಿಗಳು ಮತ್ತು ಅವರ ಜೊತೆಗಾರರು, ಅದೇ ಭವನದ ಬಳಿ ಬಂದರು!
ನನಗೆ ಆ ಸಮುದಾಯ ಭವನ ನೋಡಿದಾಗಲೆ ತಿಳಿದದ್ದು ನಮ್ಮ ಪ್ರದೀಪ ಮಾದಿಗರ ಮನೆ ಮಗ ಎಂದು! ಅದು ನಗಣ್ಯ! ಸ್ನೇಹಾನ ಏನ್ ಜಾತಿ ನೋಡ್ ಮಾಡಕ್ಕಾತ್ಯೆ! ಅಂತ ಕಿತ್ತೋದ ಮನಸ್ಸು ನಮಗಿಲ್ಲ ಬಿಡಿ! ಮುಂದಿನ ವಿಚಾರಕ್ಕೆ ಬರುವ!
ಊರ ಹಿರಿಯರೆಲ್ಲರೂ ಆ ಪಾದ್ರಿಗಳನ್ನು ಗೌರವದಿಂದಲೇ ಬರಮಾಡಿಕೊಂಡರು. ಎಲ್ಲಾ ಕುಳಿತು ಏನೇನೊ ಮಾತಾಡಲು ಶುರು ಮಾಡಿದರು.

(ಇಡೀ ಮಾದಿಗೇರಿಯ ಜನರನ್ನೇ ಸಾಮೂಹಿಕ ಮತಾಂತರ ಮಾಡವ ಯೋಚನೆಯೊಂದಿಗೆ ಅವರು ಬಂದಿದ್ದರು).
ಓರ್ವ ಪಾದ್ರಿ ಮೆಲ್ಲು ಧನಿಯಲ್ಲೇ ಆರಂಭಿದಿದ "ನೋಡಿ ಜನರೆ ನಾವು ನೀವೆಲ್ಲರೂ ಒಂದೆ. ದೇವಮಾನವ ಕ್ರಿಸ್ತನು ನಮ್ಮೆಲ್ಲರನ್ನು ಸಮನಾಗಿ ಕಾಣುತ್ತಾನೆ. ಹಿಂದೂಗಳಾಗಿ ಹುಟ್ಟಿ ನೀವು ತಪ್ಪು ಮಾಡಿದ್ದೀರಿ. ಆದರೆ ಆ ತಪ್ಪನ್ನು ಹಾಗೆಯೇ ಬಿಡಬಾರದು. ಅದನ್ನು ಸರಿ ಮಾಡಿಕೊಳ್ಳರು ಯೇಸುವು ನಿಮ್ಮೆಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಡುತ್ತಿದ್ದಾನೆ" ಹಾಗೆ ಹೀಗೆ ಎಂದೆಲ್ಲ ಏನೇನೊ ಹೇಳುತ್ತಿದ್ದರು!

ನನಗೆ ಈಗಿನಂತೆ ಆ ವಿಚಾರಗಳಲ್ಲಿಯೆಲ್ಲ ಹೆಚ್ಚಿನ ಆಸಕ್ತಿ ಇಲ್ಲದಿದ್ದರಿಂದ ಅವರು ಹೇಳುತ್ತಿದ್ದ ಉದ್ದುದ್ದ ಭಾಷಣಗಳು ನೆನಪಿಲ್ಲ!
ಆದರೆ ಇದಾದ ನಂತರವು ಬೆಂಗಳೂರು ನಗರದ ಒಂದು Slumನಲ್ಲಿ, ಒಡ್ಡರು(Bhovis) ಅವರನ್ನು ಮತಾಂತರ ಮಾಡುವ ಮುಂಚೆಯೂ ಸಹ, "ಹಿಂದುವಾಗಿ ಹುಟ್ಟುವುದೇ ತಪ್ಪು ಅದೊಂದು ಮಹಾಪಾಪ! ಅದನ್ನು ಸರಿ ಮಾಡಬೇಕು" ಎಂಬ ಅರ್ಥದಲ್ಲೇ ಭಾಷಣ ಮಾಡಿದ್ದನ್ನು ಕೇಳಿದ್ದ ಕಾರಣ ಇಂಥ ಕೆಲವು ವಾಕ್ಯಗಳನ್ನು ಮರೆಯಲಾಗದು!
ತುಂಬ ಸಮಯದ ನಂತರ, ಅದೇನೇನೊ ಮಾತಾಡಿ, ಕಡೆಗೆ ಎಲ್ಲರಿಗೂ ಮಟನ್ ಬಿರಿಯಾನಿ ಮಾಡಿಸಿ ಹಂಚಿ ತಿಂದು ಹೋದರು.
ನಾವು ಸಹ ತಿಂದು, ಬೆಂಗಳೂರಿಗೆ ಹಿಂತಿರುಗಿದವು.
ಬಹಳ ದಿನಗಳ ನಂತರ ಈ ವಿಷಯ ಮರೆತೆವು. ಪ್ರದೀಪ್ Bike - Lorry accidentನಲ್ಲಿ ತೀರಿಕೊಂಡ!
ಆ ಊರಿನ ಕಥೆ ಏನಾಯ್ತೋ ಗೊತ್ತಿಲ್ಲ!
ಅದಾದ ನಂತರ, ನನಗೆ ತಿಳಿದಿರುವ ಗ್ರಾಮವೊಂದರಲ್ಲೆ ಇಂಥದ್ದೇ ಹೋಲುವ ಸನ್ನಿವೇಶವೊಂದಿ ಎದುರಾಯ್ತು.

ನನಗೆ ದೊಡ್ಡಪ್ಪ ಆಗಬೇಕು ಸಂಬಂಧದಲ್ಲಿ. ಅವರ ಊರಿಗೆ ಪಟ್ಲಮ್ಮನ ಹಬ್ಬಕ್ಕೆಂದು ಹೋಗಿದ್ದೆ.
ಹಬ್ಬ ಮುಗಿದ ಮಾರನೆಯ ದಿನ, ಬೌದ್ಧ ಬಿಕ್ಕುಗಳು ಜೊತೆಗೆ ಅವರ ಜೊತೆಗಾರರು ಐಷರಾಮಿ ಕಾರುಗಳಿಂದ ಇಳಿದರು!
ನಮ್ಮ ದೊಡ್ಡಪ್ಪನ ಮನೆ ಬಾಗಿಲಿಗೆ ಯಾರೊ ಒಬ್ಬ ಬಂದು "ಬೋರಣ್ಣ! ಅಂಬೇಡಿಕರ್ ಭವನುದ್ ತಕ್ ಬಣ್ಣ! ದ್ಯಾವಣ್ಣ ಕರಿತಾವ್ನೆ! ಯಾರೋ ಕಾರಲ್ ಸ್ವಾಮಿಗೊಳ್ ಬಂದವ್ರೆ" ಎಂದರು.
ನಮ್ಮ ದೊಡ್ಡಪ್ಪನೂ ಎದ್ದು ಹೋದರು!
ಜೊತೆಗೆ ನಾನೂ ಹೋದೆ!

ಮೇಲಿನ ಸನ್ನಿವೇಶ ಇಲ್ಲಿಯೂ ಸಹ ಆ ಗ್ರಾಮದ ಇಡೀ ಹೊಲಗೇರಿಯನ್ನೆ ಮತಾಂತರ ಮಾಡುವ ಯೋಚನೆ ಅವರದ್ದಾಗಿತ್ತು!
ಅಂಬೇಡ್ಕರ್ ಭವನದಲ್ಲಿ ಕುಳಿತರು ಎಲ್ಲರು. ಅದೇ ಊರಿನ ಬಾಲಕ ಒಬ್ಬ ಭವನದೊಳಗಿದ್ದ ಅಂಬೇಡ್ಕರ, ಮಲೆಮಹದೇಶ್ವರ, ಮಂಟೇಸ್ವಾಮಿ, ರಾಮಾನುಜಚಾರ್ಯ, ಗ್ರಾಮದೇವತೆ ಪಟ್ಲಮ್ಮ, ಬುದ್ಧನ ಚಿತ್ರಪಟಗಳನ್ನು ಒರೆಸಿ, ಹೂ ಮುಡಿಸಿ, ಎರಡು ದೀಪಾಳೆ ಕಂಬಗಳನ್ನು ಹಚ್ಚಿದನು.
ಮಾತು ಶುರುವಾಯಿತು! ಬಿಕ್ಕುಗಳು ಪಾಳಿಯಲ್ಲಿನ ಎರಡು ಸಾಲುಗಳ ಮೂಲಕ ಮಾತನ್ನು ಶುರು ಮಾಡಿ, ಬುದ್ಧಂ ಶರಣಂ ಗಚ್ಛಾಮಿ ಎಂದು ಮಾತು ಮುಗಿಸಿದರು! ಮತಾಂತರದ ಬಗ್ಗೆ ಏನನ್ನು ಮಾತಾಡಲಿಲ್ಲ!
ನಂತರ ಅವರ ಜೊತೆಗಾರರು (ಸಾಮಾನ್ಯರು) ಅವರಲ್ಲೊಬ್ಬ ಅದ್ಭುತ ಮಾತುಗಾರ ಇದರ ಬಗ್ಗೆ ಮಾತು ಶುರು ಮಾಡಿದ! "ಹಿಂದೂ ಧರ್ಮ ಗುಲಾಮಗಿರಿಯ ಸಂಕೇತ! ಹಿಂದೂ ಎಂದರೆ ಗುಲಾಮ, ನಮ್ಮ ಮೂಲ ಧರ್ಮ ಬೌದ್ಧ ಧರ್ಮ! ಈಗ ನಾವೆಲ್ಲರೂ ನಿರ್ಧರಿಸುವ ಸಮಯ ಬಂದಿದೆ!
ಅಂಬೇಡ್ಕರ್ ಹಾದಿಯಲ್ಲಿಯೇ ಮತಾಂತರವಾಗಬೇಕಿದೆ" ಎಂದು ಇನ್ನು ಏನೇನೊ ಹೇಳುತ್ತ ಮಾತು ಮುಗಿಸಿದ!
ಎಲ್ಲರಿಗೂ ParleG Biscuit ಬಾಳೆ ಹಣ್ಣು ಮತ್ತು Rasna ಕೊಟ್ಟರು. ಬಿಕ್ಕುಗಳು ಎಲ್ರಿಗು ವಂದನೆಗಳನ್ನು ಹೇಳಿ ಎದ್ದು ಹೋಗಲು ಮುಂದಾದರು!

ಅದೇ ಸಮಯಕ್ಕೆ ಆ ಬಿಕ್ಕುಗಳ ಜೊತೆಗಾರನೊಬ್ಬ "ಏನ್ ಹೇಳ್ತಿರಣ್ಣ! ಏನ್ ದೇವಣ್ಣ? ಏನ್ ಬೋರಣ್ಣ?" ಎಂದರು!
"ನೋಡುಮ ಆದ್ರಾಯ್ತು! ಸ್ವಾಮಿಗಳು ಎಲ್ಲೊ urgentಅವ್ರೆ ಕಳಿಸ್ಕೊಡಪ್ಪ. ಆಮ್ಯಾಲ್ ಕಂತ್ ಮಾತಾಡುದ್ರಾಯ್ತು" ಅಂದ್ರು ದೇವಣ್ಣ!
"ಅವರಿಗೇನು ಅವಸರ ಇಲ್ಲಣ್ಣ. ನಿಮ್ಮ ಸೇವೆಗೆ ಅವರು ಸದಾ ಸಿದ್ಧ ಏನ್ ಹೇಳಿ ಪರವಾಗಿಲ್ಲ" ಎಂದ!
ಬಿಕ್ಕುವಿನ ಮುಖದಲ್ಲಿ ಸಣ್ಣ ನಗು!
ನಮ್ ದೊಡ್ಡಪ್ಪ ಬೋರಣ್ಣ ಮಾತು ಶುರು ಮಾಡ್ದ " ನೋಡಣ್ಣ ಈಗಾಗ್ಬೇಕಿರ ಗ್ಯಾಮೆಗೊಳೆ ಬೇಕಾದಷ್ಟು ಬಿದ್ದವೆ ಇದೆಲ್ಲ ನಮುಗ್ಯಾಕಪ್ಪ! ನೀರುನ್ tank ಹೊಡ್ದೋಗಿ ೨ ವಾರ ಆಯ್ತಲ್ಲ, ಅದ ಸರಿ ಮಾಡ್ಸಿದ್ಬುಟ್ಬುಟ್ಟು ಇದೇನೋ ಮಾಡ್ತಿದ್ಯಲ್ಲಲ!" ಎಂದ.
ಅದ್ಬುಡಣ್ಣ! ನಾಳೆ ನಾಳಿದ್ರಲ್ ಮಾಡ್ಸಿದ್ರಾಯ್ತು! ಅಂತ ಪ್ರತ್ಯುತ್ತರ ಕೊಟ್ಟ!
ಬ್ಯಾಡ ಕಣಣ್ಣ! ಈ ಮತಾಂತ್ರ ಗಿತಾಂತ್ರ ಎಲ್ಲಾ ಬ್ಯಾಡ ಬುಡು! ಎಲ್ಲಾ ಹಿಂಗೆ ಆದ್ರೆ ನಮ್ ಹೆಸ್ರು ಕುಲ ಜಾತಿ ಉಳ್ಸೋರ್ಯಾರ? ಬೆಳ್ಸೊರ್ಯಾರ???
ಎಲ್ಲಾರು ದುಡ್ದು ದುಡ್ದು ದೊಡ್ಡೋರಾದ್ರೆ ನಾವಿಂಗೆ ಮತಾಂತ್ರ ಅದು ಇದು ಅಂತ ಅಲಿಯುದ?
ನಾಮ್ ಉದ್ದಾರ ಆಗಿ, ನಮ್ಮಂಗೆ ಕಷ್ಟ ಪಡೋರ್ಗ ಒಂದಷ್ಟು ಸಹಾಯ ಮಡಿ, ಮಕ್ಕಳು ಮೊಮ್ಮಕಳ ಓದ್ಸಿ, ಎಲ್ಲರೂ ನಮ್ಮಂಗೆ, ಎಲ್ಲರು ಸಮಾನ್ರು ಅಂತ ಬುದ್ಧಿ ಕಲಿಯೋದು ನಾವು ಅಂಬೇಡ್ಕರ್ಗೆ ಮಾಡೊ ಋಣಸಂಧಾಯ, ಏನ್ ನೀನು ಹೆಳ್ದಂಗ್ ಮಾಡ್ಬುಟ್ರೆ ಏನ್ ಮಹಾ ಉಪ್ಕಾರ ಆದೋದದು ನಮ್ಗೆ? ಈ ಭವನದಲ್ಲಿ ಅಂಬೇಡ್ಕರ್ ಮಂಟೇಸ್ವಾಮಿ ಮಹದೇಶ್ವರ, ರಾಮಾನುಜಚಾರ್ಯ, ಬುದ್ದ ಪಟ್ಲಮ್ಮನ ಪೋಟೊಗಳವೆ! ನೀನೇಳ್ದಂಗ್ ಮಾಡುದ್ರೆ ಬುದ್ದಂದು ಅಂಬೇಡಿಕರ್ದು ಬಿಟ್ಟು ಮಿಕ್ಕವ್ನೆಲ್ಲ ಕಿತ್ತೆಸಿಬೇಕಾಯ್ತದೆ! ಅಂತ ಕರ್ಮ ಯಾಕಪ್ಪ!?
ತಿಳಿಲಿಲ್ಲ ಕಾಣ್ಲಿಲ್ಲ! ಅಂತ ಮತಾಂತ್ರ ಯಾಕೆ?
ಜೀವನ ಹೆಂಗ್ ಮಾಡುದ್ ನಾವು?
ನಮ್ಮ ಸಂಸ್ಕೃತಿ ಆಚಾರ ಪದ್ಧತಿ ಸಂಪ್ರದಾಯ ಬುಟ್ಟು ಅದೇನು ಕಾಣ್ದೆ ಇರು ಬುದ್ಧನಾಗಿ ಅದೇನ್ ಕಿಸಿಮೊ ನಾಮು? ಅಂಬೇಡಿಕರ್ ಅಷ್ಟ ಆ ದರ್ಮುದ್ ಬಗ್ಗೆ ಓದು ತಿಳ್ದು ಆ ಧರ್ಮಕ್ಕೆ ಆಚಾರುಕ್ಕೆ ನಿಷ್ಠೆ ನೇಮದಿಂದ ನಡ್ಕಂಡು ಇರುಕಾದದ ನಾವು? ನಮ್ಮತನ ನಮ್ಮ ಜನ ಅನ್ನು ಮರ್ಯಾದೆ ಬ್ಯಾಡ್ವ? ನಮ್ ಹಿರಿಕ್ರು ಬಿತ್ತಿದ್ನೆ ಬೆಳೆಯಾಕ್ ಹೇಳ್ಕೊಟ್ಟವ್ರೆ! ಅದೇ ನಮ್ ಕುಲ ಧರ್ಮ! ಹಾದಿ ಬೀದಿಲೋಗೆರೆಲ್ಲ ನಮ್ಮ ಕೀಳಂದರಾ? ಅವ್ರು ಕೀಳಂದ್ರು ನಾವು ಅದ ಮನ್ಸುಗ್ ಹಾಕಳವರ್ಗು ನಾವ್ ಕೀಳಾಗೊಲೊ!
ನಮ್ ಹಿರಿಕ್ರು ಎಲ್ಲ ಹುಲಿಗೊಳ್ ಬಾಳ್ದಂಗ್ ಬಾಳವ್ರೆ! ತಾವ ಕೀಳು ಅಂತ ಒಪ್ದೋರಲ್ಲ ಅವ್ರು!
ನೆಲವೇ ಹರ ಹರಿವ ನೀರೆ ಹರಿ ಅಂತ ಹರಿಹರರ ಆರಾಧಿಸವ್ರೆ! ಅಮ್ಮ ತಾಯಿ ನೀನೆ ಗತಿಯವ್ವ ಅಂತ ಊರಮ್ಮನ ಹಬ್ಬ ಮಾಡಿ ನಮಗೂ ಆಚಾರ ಸಂಸ್ಕೃತಿ ಕೊಟ್ಟವ್ರೆ! ಬೆವರ ಹರಿಸಿ ಹೊಲದಾಗ ದುಡುದ್ರೆ ಹೊಲಯನ್ನ ಹೊಲಾನೆ ಸಾಕ್ತದೆ ಅಂದವ್ರೆ! ಯಾಕ? ನಾಮ್ ಚೆನ್ನಾಗಿರುದ್ ನಿಂಗ್ ಇಷ್ಟಿಲ್ವ? ಗುಲಾಮ್ರ್ ಯಾಕದು ನಾಮು? ದುಡುದ್ ತಿಂತಾಯ್ಲಿಲ್ವ? ಎಲ್ರೂ ಗುಲಾಮ್ರೆ! ಈಗ್ ನೀನ್ ನಮ್ಮೂರ್ ಬಾಗ್ಳುಗ್ ಬಂದಿಲ್ವ? ನಾವು ಭೂಮ್ ತಾಯಿಗ್ ಗುಲಾಮ್ರು! ನೀನು ಬಿಕ್ಕುಗೊಳ್ಗೆ ಗುಲಾಮ!
ಇತ್ಲಾಗ್ ಮನೆಗೂ ಅಲ್ಲ ಅತ್ಲಾಗ್ ಸುಡ್ಗಾಡ್ಗು ಅಲ್ಲ ಅನ್ನುವಂಗ್ ಆಯ್ತದೆ ನಮ್ ಕಥೆ! ಕರ್ಕ ಹೋಗಪ್ಪ! ಲೋ ಮೊಗ, ಎರಡು ಗೊನೆ ಬಾಳೆನು, ಒಂದ್ ಇಪ್ಪತ್ ಅಚ್ ಬೆಲ್ಲಾನು ತಕ ಬಾಲ" ಅಂತ ನಮ್ಮ ದೊಡ್ಡಪ್ಪ ಮಳೆ ಊಯ್ದ್ ನಿಂತಂಗೆ, ಆ ಬಿಕ್ಕುಗಳನ್ನು ಗೌರವನ್ವಿತವಾಗಿಯೇ ಮಾತಾಡಿ ಕಳಿಸ್ಕೊಟ್ಬುಟ್ರು!
ಈಗ ಈ ವಿಷಯ ಯಾಕೆ ಅಂತ ಹೇಳೇ ಹೇಳ್ತೀನಿ ಮುಖ್ಯ ವಿಚಾರ ಇರೋದೆ ಇಲ್ಲಿ!



ಅದಕ್ಕು ಮುಂಚೆ ಮೇಲಿನ ವಿಚಾರದ ಬಗ್ಗೆ "So called proud Hindu"ಗಳಿಗೆ ಉಪದೇಶ ಕೊಡಬೇಕಿದೆ!
ವರ್ಣೀಯ ಹಿಂದೂಗಳು ತಮ್ಮ ಹುಸಿ ಮೇಲರೆ ಹೆಚ್ಚಿಸಿಕೊಳ್ಳಲು ಅವರ್ಣೀಯ ಹಿಂದೂಗಳನ್ನು ತುಳಿದದ್ದು ನಿಜವೆ!
ಆದರೆ ಇಂದು ಹಿಂದೂ ಸಮಾಜದ ಸ್ವಾಸ್ಥ್ಯವೇ ಹಾಳಾಗಿ, ಧರ್ಮಕ್ಕೆ ಪೆಟ್ಟು ಬೀಳುವಂತಾದಾಗಲೂ ಹಳೇ ಮೌಢ್ಯಗಳಿಗೇ ತಲೆ ಬಾಗಿ ಒಂದಾಗದೆ ಇರುವುದೇ ಇಷ್ಟಕ್ಕೆಲ್ಲಾ ಕಾರಣ!
ಈ ಮತಾಂತರಿಗಳು ಹಬ್ಬದ ಮಾರನೆಯ ದಿನಕ್ಕೆ ಬರುವುದಕ್ಕೂ ಒಂದು ಕಾರಣ ಇದೆ!

ಸಾಮಾನ್ಯವಾಗಿ ಈ ಊರ ಹಬ್ಬಗಳ ಸಮಯದಲ್ಲಿ ಜಾತಿಯ ವಿಚಾರಕ್ಕೆ, ದೇವಾಲಯದ ಪ್ರವೇಶದ ವಿಚಾರಕ್ಕೆ ಜಗಳ ಮನಸ್ತಾಪಗಳಾಗುತ್ತವೆ!
(ಕೆಲವನ್ನೂ ಈ ಮತಾಂತರಿಗಳು, ಪೂರ್ವ ನಿಯೋಜಿತವಾಗಿಯೇ plan ಮಾಡಿರುತ್ತಾರೆ!)
ಈ ಮನಸ್ತಾಪದ ಬೆನ್ನಲ್ಲೇ ದಲಿತರನ್ನು ಮತಾಂತರಕ್ಕೆ catch ಹಾಕಬಹುದು ಎಂಬ ಯೋಚನೆ ಇವರದು!
ಊರು ಹತ್ತಿಕೊಂಡು ಉರಿಯುವಾಗ ಅನ್ನ ಬೇಯಿಸ್ಕಂಡ್ರು ಅನ್ನೊ ಬುದ್ಧಿ ಅವರದು!

ಇತ್ತೀಚೆಗೆ ನಡೆದ ಸಿರಗನಹಳ್ಳಿ ದಲಿತರ ಪ್ರಕರಣದ ಉದಾಹರಣೆಗೆ ತಗೊಳ್ಳಿ! ಅಲ್ಲಿ ದೇವಾಲಯದ ವಿಷಯದಲ್ಲಿ ಮತ್ತು ದೇವಾಲಯ ಪ್ರವೇಶದ ವಿಷಯವಾಗಿ ಯಾವುದೇ ಸಮಸ್ಯೆಗಳು ಇರುವುದಿಲ್ಲ! ಇಬ್ಬರು ಭಿನ್ನಜಾತಿಯ ಜನರ ನಡುವೆ ವೈಯುಕ್ತಿಕ ವಿಚಾರಕ್ಕೆ ಜಗಳವಾದಾಗ, ಅದೇ ಜಿದ್ದನ್ನು so called ಪ್ರಬಲ ಸಮುದಾಯದವನು ಮನೆಹಾಳನಂತೆ ದೇವಾಲಯ ಪ್ರವೇಶದ ವಿಚಾರವಾಗಿ ಮನಸ್ತಾಪ ಉಂಟು ಮಾಡುತ್ತಾನೆ!
ವೈಯಕ್ತಿಕ ವಿಚಾರ ಸಾಮಾಜಿಕ ಸಮಸ್ಯೆಯಾಗಿ ತಿರುವು ಪಡೆಯತ್ತೆ!
ನಂತರ ಎಲ್ಲಾ ಮುಗಿದು ದಲಿತರಿಗೆ ದೇವಾಲಯ ಪ್ರವೇಶವಾದ ಮೇಲೆ ಏನಾಯ್ತು ಎಂದು ತಿಳಿದೇ ಇದೆ!
ಅಲ್ಲಿಯ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಮುಂದಾದ ಬೌದ್ಧ ಮತಾಂತರಿಗಳು ಕೂಡಲೆ ಅಲ್ಲಿನ ದಲಿತರೆಲ್ಲರನ್ನು ಸಾಮೂಹಿಕ ಬೌದ್ಧ ಮತಾಂತರ ಮಾಡಿಸುತ್ತಾರೆ! (Realityಲಿ ಆ ಸಾಮಾನ್ಯ ಜನರೆಲ್ಲ ಹಿಂದೂಗಳಾಗೆ ಉಳಿದಿದ್ದಾರೆ)
ಹೀಗೆ ಒಂದು ರೀತಿಯಲ್ಲಿ ಹಿಂದೂ ಧರ್ಮಕ್ಕೆ ವರ್ಣೀಯ ಹಿಂದೂಗಳೆ ಮೇಲಸ್ಥರದ ಹಿಂದೂಗಳೆ!
ಇವರ ಮನಸ್ಥಿತಿ ಬದಲಾಗದೆ ಹಿಂದುತ್ವ ಹಿಂದೂ ಧರ್ಮ ಉಳಿಯದು!
ದಲಿತರೊಂದಿಗೆ ಬೆರೆಯಬೇಕು ಅದಲಿತ ಹಿಂದೂಗಳು!

ಮತಾಂತರ ಪೂರ್ವದಲ್ಲಿ meeting ಮಾಡುತ್ತ ಹಿಂದೂ ಧರ್ಮದ ಬಗ್ಗೆ ತುಚ್ಛವಾಗಿ ಮಾತಾಡಿ, ಇಲ್ಲಸಲ್ಲದ್ದನ್ನೆಲ್ಲಾ ಬೊಗಳುವ ಮತಾಂತರಿಗಳಿಗೆ ಅಲ್ಲಿ ಯಾರೂ ಸಹ ನಮ್ಮನ್ನು ಪ್ರಶ್ನಿಸುವವರಿಲ್ಲ, ಹಳ್ಳಿ ಜನರು ಮುಗ್ಧ ಜನರು, ಎಂಬ ಬಂಡ ಧೈರ್ಯದಲ್ಲಿ ಇರುತ್ತಾರೆ!
ಸಮಾಜಗಳು ಒಂದಾದಾಗ ಇಂಥ ಪೊಳ್ಳು ಭಾಷಣಗಳ, ಸುಳ್ಳುಗಳ ವಿರುದ್ಧ ಸಿಡಿದೇಳಬಹುದು!
ವಾರ್ಣೀಯ ಅವರ್ಣೀಯ ಹಿಂದೂಗಳು ಒಗ್ಗೂಡಿದರಷ್ಟೇ ಹಿಂದೂ ಸಮಾಜ ಧರ್ಮ ಉಳಿಯುವುದು! ಏಕೆಂದರೆ ಹಿಂದೂಗಳೆಂದು ಗುರುತಿಸಿಕೊಳ್ಳುವವರಲ್ಲಿ ವರ್ಣೀಯರಿಗಿಂತ ಅವರ್ಣೀಯರೆ ಹೆಚ್ಚು!
ಮೊದಲು ಈ ವರ್ಣೀಯ ಅವರ್ಣೀಯ ಎಂಬ ಬೇದ ಅಳಿಸಿ ಹೋಗಬೇಕು! ಆಗಲೇ ಹಿಂದೂಗಳು ಉಳಿಯುವುದು!

ಹೊಲಯ ಮಾದಿಗರು ಕೀಳಾಗಿದ್ದು ಸರಿಯೇ? ಹೇಗೆ?

ಸದ್ಯಕ್ಕೆ, ಇವತ್ತಿಗೆ ಕನ್ನಡದ ಮೊದಲ ರಾಜಮನೆತನ ಎನಿಸಿಕೊಳ್ಳುವ ಚುಟು-ಕದಂಬರ ಕಾಲಕ್ಕೆ Native Kannada (Dravidian) Brahmans ರ ಉದಯವಾಗುತ್ತದೆ!
ಪ್ರಾರಂಭದಲ್ಲಿ ಪರಯ್ಯ, ಪುಲಯ, ನಾಗ, ಮಾಚಿ, ಮಲ್ಲ, ಇತ್ಯಾದಿ ಸ್ಥಳಿಯ ಮೂಲದ ಜನಾಂಗಗಳನ್ನು ಕಂಚೀ ಮತ್ತು ಇತರೆ ಬ್ರಾಹ್ಮಣ್ಯ ಶಿಕ್ಷಣ ಕೇಂದ್ರಗಳಿಗೆ ಕಳುಹಿಸಿ ಆಗಮ ಶಾಸ್ತ್ರಗಳ ಪರಿಣಿತಿಯೊಂದಿಗೆ ಅವರನ್ನು ಬ್ರಾಹ್ಮಣರನ್ನಾಗಿಸುತ್ತಾರೆ.
(ಮಯೂರ ವರ್ಮನನ್ನು ಉದಾಹರಿಸಬಹುದು)
ಆದರೆ ನಂತರದಲ್ಲಿ, ಉತ್ತರ ಭಾರತದಿಂದಲೇ, ಬ್ರಾಹ್ಮಣರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ! (ವಲಸೆ).
ದ್ರಾವಿಡ ಬ್ರಾಹ್ಮಣರಲ್ಲದವರು.

ಇದು ಕದಂಬರ ಕಾಲದಲ್ಲಿ ತೀವ್ರಗತಿಯನ್ನು ಸಾಗುತ್ತದೆ.
ಕದಂಬರು ಹರಿತಿ ಪುತ್ರರು. ಕಂಬ ಕುಲದವರು. ಮೂಲತಃ ಇವರು ರೈತಾಪ್ಯರೆ. ಈಗಿನ ಹೊಲಯರಲ್ಲೂ ಸಹ ಹರತಿ-ಕಂಬ ಕುಲಗಳಿವೆ.
ಪೊಲಯಾರಸರು ಎನಿಸಿಕೊಂಡ ಚೇರರೊಡನೆ, ನಿರಂತರ ಸಂಪರ್ಕ ಮತ್ತು ವಂಶೀಯ ಮತ್ತು ವೈವಾಹಿಕ ಸಂಬಂಧ ಹೊಂದಿದ ಇವರು, ಅದೇ ಚೇರರೊಡಗಿನ ಮನಸ್ತಾಪಗಳಿಂದಲೇ ಸ್ವತಂತ್ರರಾಗಿ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ಇದು ಪೂರ್ವ ಕದಂಬರ ಹಿನ್ನೆಲೆ.
ಇದಕ್ಕೆ ಹಲವಾರು ಶಾಸನಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಆದರೆ ಕದಂಬರ ಕಾಲದಲ್ಲಿ ದ್ರಾವಿಡ ಕನ್ನಡ ಬ್ರಾಹ್ಮಣರ ಸೃಷ್ಟಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕಾರಣದಿಂದ ("Generating Native Kannada Brahmans") ಕದಂಬರನ್ನು ಬ್ರಾಹ್ಮಣರು ಎಂದೇ ಅಪಾರ್ಥೈಸಲಾಗಿದೆ!

ಇದು ಕೇವಲ ಕದಂಬರೊಬ್ಬರ ಕಥೆಯಲ್ಲ!
ದಕ್ಷಿಣ ಭಾರತದ ಅತಿ ಪ್ರಾಚೀನ ಸಾಮ್ರಾಜ್ಯಗಳು ಎನಿಸಿಕೊಳ್ಳುವ ಪಾಂಡ್ಯ, ಚೇರ, ಚೋಳ, ಕೊಂಗನಾಡು, ಕರುನಾಡು, ಇತ್ಯಾದಿಗಳೆಲ್ಲವೂ ಆದಿದ್ರಾವಿಡ ಆದಿಕರ್ನಾಟಕ ಪರಂಪರೆಯವು!
ಅಲ್ಲೆಲ್ಲ ಈ ಸ್ಥಳೀಯ ಸಮುದಾಯಗಳ ಬಹುಭಾಗ ಹಸ್ತಕ್ಷೇಪವಿದೆ! ಕರ್ನಾಟಕದ ಚಾಲುಕ್ಯರು ಹೊಯ್ಸಳರು ಸಹ ಇದರಿಂದೇನು ಹೊರತಲ್ಲ!

ಕಲಬ್ರರು ಕಲಚೂರಿಗಳಲ್ಲಿ, ಉತ್ತರದ (ಮದ್ಯ) ಬಾರ(ಬಹರ್/ಮಹಾರ್), ಎಂದರೆ ಉತ್ತರ ಮತ್ತು ಮದ್ಯ ಭಾರತದ ಸ್ಥಳೀಯ ಸಮುದಾಯಗಳ, ಹೊಲಯರಿಗೆ ಸಮನಾದ ಆ ಸಮುದಾಯದ ಹಸ್ತಕ್ಷೇಪಗಳಿವೆ. ಈ ಕಲಬ್ರರು ಅಪ್ಪಟ ಬ್ರಾಹ್ಮಣ ವಿರೋಧಿಗಳು!
ದಕ್ಷಿಣ ಭಾರತದ ಮೇಲೆ, ೭-೮ನೇ ಶತಮಾನದಲ್ಲಿ ಇವರಿಂದಾದ ಬದಲಾವಣೆಗಳು ಮತ್ತು ರಾಜಕೀಯ ಮೇಲಾಟಗಳು ಅಷ್ಟಿಷ್ಟಲ್ಲ!
ಶಾಕ್ತ-ಶೈವ-ವೈಷ್ಣವ-ಹಿಂದೂ (ಅವೈದಿಕ), ಜೈನ ಮತ್ತು ಬೌದ್ಧ ಧರ್ಮಗಳ ಪೋಷಕರಾದ ಇವರು, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಬ್ರಾಹ್ಮಣರಿಗೆ ಇದ್ದ ಭೂದಯಾ ಭೂದಾನ ಹಕ್ಕುಗಳನ್ನೆಲ್ಲ ರದ್ದು ಮಾಡಿದರು!

ಇಂಥಹ ಅತ್ಯದ್ಭುತ ಹಿನ್ನೆಲೆ ಇತಿಹಾಸ ಇರುವ ಆದಿದ್ರಾವಿಡ ಆದಿಕರ್ನಾಟಕ ನಾಮಾಂಕಿತ ಹೊಲೆಯ ಮಾದಿಗರು ಮತ್ತು ಆ ಹೆಸರುಗಳು ಹಾಳಾದದ್ದು ಹೇಗೆ?????
ಹಾಳುಗೆಡವಿದ್ದು ಯಾರು?????

೬ನೇ ಶತಮಾನದ ಕನ್ನಡ ಜೈನ ಸಾಹಿತ್ಯದಲ್ಲಿ, ಓರ್ವ ಜೈನಧರ್ಮ ಪ್ರಚಾರಕ್ಕೆ, ಚಾಲುಕ್ಯ ಅರಸರೊಂದಿಗೆ ಜೈನಮತ ಪ್ರಚಾರ ಮತ್ತು ಅದನ್ನು ಸ್ವೀಕರಿಸಿ ಎಂದು ಹೇಳುವ ಸಲುವಾಗಿ ನಡೆದ ಒಂದು ಚರ್ಚೆಯ ತುಣುಕನ್ನು ದಾಖಲಿಸಲಾಗಿದೆ.
ಅದರಲ್ಲಿ, ಆ ಮತ ಪ್ರಚಾರಕ "ನೀವು ಹೊಲಯರಾಗಿ ಹುಟ್ಟಿದ್ದೀರಿ. ಅರಸರಾಗಿ ಕ್ರೋಧಗಳ ಸಹವಾಸದಿಂದ ಕಲುಷಿತಗೊಂಡಿದ್ದೀರಿ. ನಿಮ್ಮ ಈ ಜನ್ಮ ಅಪವಿತ್ರತೆಯಿಂದ ಹೊರಬರಲು ನೀವು ಜಿನ(ಜೈನ)ರಾಗಬೇಕು. ಇಂದ್ರೀಯಗಳನ್ನು ಗೆಲ್ಲಬೇಕು" ಎಂಬ ಉಲ್ಲೇಖವಾಗುತ್ತದೆ!



ಇದೇ ಪರಿಸ್ಥಿತಿ ೧೬-೧೭ನೆ ಶತಮಾನದ ಹೊತ್ತಿಗೆ ಜಾತಿ/ಕುಲ/ಪಂಥಗಳಿಗಿದ್ದ ಪ್ರಾಮುಖ್ಯತೆ ತಗ್ಗಿ, ಹಿಂದೂ ಧರ್ಮ ಸ್ವರೂಪ ಪ್ರಾಧಾನ್ಯತೆ ಪಡೆದಾಗ, "ಹಿಂದೂ" ಎಂಬ ಪದಕ್ಕೂ ಅಂಥದ್ದೇ ಪರಿಸ್ಥಿತಿ ಒದಗಿ, ಹಿಂದೂ ಎಂಬ ಪದದ ಅರ್ಥವೇ ಕೆಡುವ ಹಂತಕ್ಕೆ ತಲುಪುತ್ತದೆ!
ಇದೆಲ್ಲವೂ, ಹಿಂದೂ ಧರ್ಮದ ಮೇಲೆ ಸವಾರಿ ಮಾಡಲು ಯತ್ನಿಸಿ, ತಮ್ಮ ಮತ ಸ್ಥಾಪನೆಗೆ ಪ್ರಯತ್ನ ಪಟ್ಟ ಬೇರೆ ಬೇರೆ ಮತ ಪ್ರಚಾರಕರ ಕೊಡುಗೆಯಾಗಿದೆ!
ಇದನ್ನು ಓದಿದ ಮೇಲೆ "ಹಾಗಾದರೆ ಮನುಸ್ಮೃತಿ ಏನು" ಎಂಬ ಪ್ರಶ್ನೆ ಮೂಡುವುದು ಸಹಜ!
ಒಂದು ರೀತಿಯಲ್ಲಿ ಇದನ್ನು ಸ್ಪಷ್ಟಪಡಿಸದೆ ಮುಂದೆ ಹೋಗಲು ಸಾಧ್ಯವಿಲ್ಲ! ಆದರಿಂದ ಮುಖ್ಯ ವಿಚಾರಕ್ಕೂ ಬರುವ ಮುನ್ನ, ಈ ಮನುಸ್ಮೃತಿಯ ಗೊಂದಲಗಳಿಗೆ full stop ಇಡುವ!

"ಮನುಸ್ಮೃತಿ"! 

ಒಂದು ವಿವಾದಿತ ಕೃತಿ! ಆದರೆ ಇದರ ಬಗೆಗಿನ ಕೆಲವು ಆಶ್ಚರ್ಯಕರ ವಿಷಯಗಳು ಹಲವರಿಗೆ ತಿಳಿದಿಲ್ಲ!
ಮನುಸ್ಮೃತಿ ರಚಿಸಿದ ಎನ್ನಲಾದ "ಮನು"ವೇ ಸ್ವತಃ ಓರ್ವ ಪಾಂಡ್ಯಕುಲ ಯುವ ರಾಜ!
ಅಂಬೇಡ್ಕರರ ವಿಚಾರವನ್ನೇ ಹೇಳುವುದಾದರೆ, ಮನು ಯಾವ ಜಾತಿಯನ್ನು ಜಾತಿ ಪದ್ಧತಿಯನ್ನು, ವರ್ಣಪದ್ಧತಿಯನ್ನು ಹುಟ್ಟುಹಾಕಲಿಲ್ಲ! ಬದಲಿಗೆ ಅದಾಗಲೇ ಇದ್ದ ವ್ಯವಸ್ಥೆಯನ್ನು ದಾಖಲಿಸಿದ.
ಜಾತಿ ಪದ್ಧತಿಯು ಮನುವಿಗಿಂತ ಹಳೆಯದು.
ಮನುಸ್ಮೃತಿಯ ರಚನೆಯ ಕಾಲ ವೈಜ್ಞಾನಿಕವಾಗಿ ಅಸ್ಪಷ್ಟ! ಆಡುಮಾತಿನಲ್ಲೇ ಹೇಳುವುದಾದರೆ, ಸಾವಿರಾರು ವರ್ಷಗಳ ಹಿಂದೆ!
ಆದರೆ ಅಂಬೇಡ್ಕರ್ ವಿಚಾರಳ ಆಧಾರದಲ್ಲೇ ಇತಿಹಾಸದಲ್ಲಿ ಇದರ ಉಲ್ಲೇಖ ಸಿಗುವುದು ಶುಂಗ ರಾಜಮನೆತನದ ಕಾಲದಲ್ಲಿ!
ಆದರೆ ಅಲ್ಲಿಯೂ ಸಹ ಅವರು ಅದನ್ನು ತಿದ್ದಿಸಲಾಯಿತು(?) ಎನ್ನುತ್ತಾರೆ! ಹಾಗದರೆ ಅಲ್ಲಿಯೂ ನಮಗೆ ಮನುಸ್ಮೃತಿಯ ರಚನೆಯ ಕಾಲ ಸ್ಪಷ್ಟವಾಗಿ ತಿಳಿಯಲಾಗದು!

ಆದರೆ ಇಲ್ಲೆಲ್ಲರೂ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿಯಬೇಕಿದೆ!
ಜಾತಿ ಅಥವ ಕುಲ ಪದ್ಧತಿಗಳು ವರ್ಣ ಪದ್ಧತಿಗೂ ಅತಿ ಪುರಾತನವಾದುದು! ಹಾಗು ಅದು ಪ್ರಕೃತಿಯ ಸಹಜ ಗುಣ!
(ಆದರೆ ಮೇಲು ಕೀಳು ಎಂಬ ತಾರತಮ್ಯವಲ್ಲ)
ಪ್ರಯತ್ನ ಪಟ್ಟರೆ ಮೇಲು ಕೀಳು ಎಂಬ ಮನೋಭಾವಗಳು ನಾಶವಾಗಬಹುದೇ ಹೊರತು, ಜಾತಿ ಕುಲಗಳಲ್ಲ! ಏಕೆಂದರೆ ಪ್ರಕೃತಿಯ ಸೃಷ್ಟಿಯನ್ನು ನಾಶ ಮಾಡಲು ಮುಂದಾಗುವುದು ಗಾಳಿಯೊಡನೆ ಗುದ್ದಾಡಿದಂತೆಯೇ ಸರಿ!
ಇನ್ನು ಕುಲ/ಜಾತಿ ಪದ್ಧತಿಗೂ ವರ್ಣ ಪದ್ಧತಿಗೂ ಬಹಳವೇ ವ್ಯತ್ಯಾಸವಿದೆ.
ಕುಲ / ಜಾತಿ ಎಂಬ ಹೆಸರೇ ಹೇಳುವಂತೆ ಅದು 'ಜಾತ' ಹುಟ್ಟಿನಿಂದಲೇ, ತಂದೆ ತಾಯಿಯಿಂದ, ಮನೆಯ ಹಿರಿಯರಿಂದ, ಪೂರ್ವಜರಿಂದ ಬರುವಂತದ್ದು.

ಆದರೆ ವರ್ಣ ಅದಕ್ಕಿಂತ ಭಿನ್ನವಾದದು.
ಗುಣ, ಆಸಕ್ತಿ ಮತ್ತು ಅರ್ಹತೆಯ ಮೇಲೆ ನಿರ್ಧಾರವಾಗುವಂತದ್ದು.
In simple words, ಈಗಿನ labour divisionಗೆ ಹೋಲಿಸಬಹುದು! A & B -Grade Officials, C Grade Helpers, D Grade Labours & E Grade Workers ಎನ್ನುವ ಹಾಗೆ!
ಅಂಬೇಡ್ಕರರ ದೃಷ್ಟಿಯಲ್ಲಿಯೇ ವರ್ಣ ಪದ್ಧತಿಯನ್ನು ವಿಶ್ಲೇಷಿಸುವುದಾದರೆ, ಆರಂಭದಲ್ಲಿ ಇದ್ದದ್ದು ತ್ರಿಗುಣ ವರ್ಣ ಪದ್ಧತಿ.
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು.
ಬ್ರಾಹ್ಮಣರ ಅತಿಯಾದ ಪೌರೋಹಿತ್ಯ ಮತ್ತು ರಾಜಾಡಳಿತದ ಮೇಲಿನ ಹಿಡಿತವನ್ನು ಒಪ್ಪದ ಸೂರ್ಯವಂಶಿ ಕ್ಷತ್ರಿಯರು, ಬ್ರಾಹ್ಮಣರನ್ನು ತಮ್ಮಿಂದ ದೂರವಿಡುವುದಕ್ಕೆ ಶುರು ಮಾಡುತ್ತಾರೆ. ಸರಿಯಾದ ಪ್ರಾತಿನಿಧ್ಯ ನೀಡಲು ಹಿಂದೇಟಾಕುತ್ತಾರೆ.
ಇದರಿಂದ ರೊಚ್ಚಿಗೆದ್ದ ಬ್ರಾಹ್ಮಣರು, ಆ ಕ್ಷತ್ರಿಯರಿಗೆ ಉಪನಯನ ಮಾಡುವುದನ್ನೇ ಬಹಿಷ್ಕರಿಸುತ್ತಾರೆ.
ಇದೇ ಕಾರಣದಿಂದ ಶೂದ್ರ ಎಂಬ ಹೊಸ ವರ್ಣ, ನಾಲ್ಕನೆ ವರ್ಣ ಉದಯಿಸುತ್ತದೆ.
ಹೀಗೇಳುತ್ತಾರೆ ಅಂಬೇಡ್ಕರ್!

ಇನ್ನು ದಕ್ಷಿಣ ಭಾರತದ ಪ್ರಸಂಗದಲ್ಲಿ ಕೊಂಚ ಭಿನ್ನತೆಯಿದೆ!
ಮೇಲಿನದ್ದಯ ಆರ್ಯವರ್ತ (ಸಿಂಧೂ - ವಿಂಧ್ಯ ಪರ್ವತಗಳ ನಡುವಣ ಪ್ರದೇಶ) ಪೌರಾಣಿಕ ಪ್ರಸಂಗ!
ದಕ್ಷಿಣ ಭಾರತದಲ್ಲಿರುವುದು ಮತ್ತು ಇದ್ದದ್ದು ಎರಡೇ ವರ್ಣ! ಅದುವೇ ಬ್ರಾಹ್ಮಣ ಮತ್ತು ಶೂದ್ರ!
ಇದು ಐತಿಹಾಸಿಕ ಪ್ರಸಂಗ!

ಮೊದಲೇ ತಿಳಿಸಿದಂತೆ ವರ್ಣಕ್ಕು ಜಾತಿಗೂ ಯಾವುದೇ ಸಂಬಂಧವಿಲ್ಲ!
(ವಾಸ್ತವದಲ್ಲಿ ಬ್ರಾಹ್ಮಣ ಎಂಬ ವರ್ಣವೇ ಜಾತಿಯಾಗಿ ಬದಲಾಗಿದೆ, ಅದು ಬೇರೆ ವಿಷಯ)
ಪುಲಯ ಕುಲ/ಜಾತಿಯಲ್ಲಿ ಹುಟ್ಟಿದ ಪುಲಸ್ತ್ಯ, ಬ್ರಾಹ್ಮಣ ವರ್ಣದಲ್ಲಿ ಗುರುತಿಸಿಕೊಳ್ಳುತ್ತಾನೆ.
ಭಾಹ್ರ ಕುಲ/ಜಾತಿಯಲ್ಲಿ ಹುಟ್ಟಿದ ದಶರಥ ಕ್ಷತ್ರಿಯ ವರ್ಣದಲ್ಲಿ ಗುರುತಿಸಿಕೊಳ್ಳತ್ತಾನೆ.
ವಲ್ಲುವ-ಸಾಂಭವ ಕುಲ/ಜಾತಿಯಲ್ಲಿ ಹುಟ್ಟಿದ ಅಗಸ್ತ್ಯರು ಸಹ ಬ್ರಾಹ್ಮಣ ವರ್ಣದಲ್ಲಿ ಗುರುತಿಸಿಕೊಳ್ಳುತ್ತಾರೆ.
ಮಾತಂಗ ಕುಲ/ಜಾತಿಯ ಮಾತಂಗ ಮಹರ್ಷಿಯು ಸಹ ಬ್ರಾಹ್ಮಣ ವರ್ಣ ಅಲಂಕರಿಸಿದವರು.
ಬೇಡ ಕುಲ/ಜಾತಿಯಲ್ಲಿ ಹುಟ್ಟಿದ ವಾಲ್ಮೀಕಿ ಬ್ರಾಹ್ಮಣ ವರ್ಣ ಅಲಂಕರಿಸಿದ್ದಾರೆ!
ಹೀಗೆ ಹಲವಾರು ಉದಾಹರಣೆ ಕೊಡಬಹುದು!
ದುರಂತದ ಸಂಗತಿ ಎಂದರೆ ಮೇಲೆ ಉಲ್ಲೇಖಿಸಿರುವ ಜಾತಿ/ಕುಲಗಳು ಎಲ್ಲವು ಇಂದು ಅಸ್ಪೃಶ್ಯ ಜಾತಿಗಳಾಗಿವೆ! ಅದು ಪಕ್ಕಕ್ಕಿರಲಿ.

ದಕ್ಷಿಣ ಭಾರತದ ಸಾಮ್ರಾಜ್ಯಗಳಲ್ಲಿ ಉಪನಯನ ಮಾಡಿಸಿ ಸಿಂಹಾಸನವೇರುವ ಪದ್ಧತಿ ಇದ್ದದ್ದು ತೀರಾ ವಿರಳ!
ಸ್ಥಳೀಯ (ದ್ರಾವಿಡ) ಸಂಪ್ರದಾಯ ಆಚಾರ ವಿಚಾರಗಳನ್ನು ಅನುಸರಿಸಿದ್ದೇ ಹೆಚ್ಚು.
ಉಪನಯನ ಪದ್ಧತಿ ಪ್ರಾರಂಭವಾದದು ಪ್ರಾಚೀನ ದಕ್ಷಿಣ ಭಾರತದ ಇತಿಹಾಸದ ಕಡೆಯ ಭಾಗದಲ್ಲಿ!
ಇಲ್ಲಿನ ಸಾಮ್ರಾಜ್ಯಗಳು ಉತ್ತರ ಭಾರತದೆಡೆಗೆ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿದ ಪರಿಣಾಮದಿಂದ, ಅಲ್ಲಿನ ಸ್ಥಳೀಯ ಅರಸರೊಂದಿಗೆ ವೈವಾಹಿಕ ಸಂಬಂಧಗಳು ಆರಂಭವಾಗುತ್ತವೆ.
ಇದೇ ಸಾಂಸ್ಕೃತಿಕ ಕೂಡುಕೊಳ್ಳುವಿಕೆಯ ಮೊದಲ ಹಂತ!
ಹೀಗೆ ಆರಂಭಗೊಂಡ ಸಂಸ್ಕೃತಿ ವಿನಿಮಯವು ದಕ್ಷಿಣದಲ್ಲೂ ಚತುರ್ವೇದಗಳ ಅಧ್ಯಯನ ಶಿಕ್ಷಣ ಕೇಂದ್ರಗಳು ಆರಂಭವಾಗುತ್ತದೆ.
ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಇತರೇ ಸ್ಥಳೀಯ ಆದಿಮ ಜನಾಂಗಗಳಿಗೆ ಅಲ್ಲಿ ಅವಕಾಶ ಕಲ್ಪಿಸಿ ಅವರನ್ನು ಬ್ರಾಹ್ಮಣರನ್ನಾಗಿ
ಸಲಾಗುತ್ತದೆ. ಅವರೇ Native Dravidian Brahmins of South India.

ನಂತರ ಇಲ್ಲಿಯೂ ಸಹ ಉಪನಯನ ಆರಂಭವಾಗುತ್ತದೆ.
ಆದರೆ ಇವೆಲ್ಲವುದರ ನಡುವೆ, ಕದಂಬರ ಮಯೂರ ವರ್ಮ ಉತ್ತರ ಭಾರತದಿಂದ ಬ್ರಾಹ್ಮಣರನ್ನು ವಲಸೆಗೆ ಆಹ್ವಾನಿಸುತ್ತಾನೆ. ಇದಕ್ಕೆ ಕಾರಣ ಅಸ್ಪಷ್ಟ! ಆತನೂ ಸಹ ಆದಿ ಕರ್ನಾಟಕ ಪರಂಪರೆಯ ಹರಿತಿ-ಕಂಬ ಕುಲದವನು.
ಹೀಗೆ ಚಾತುರ್ವರ್ಣ್ಯದ ಇತಿಹಾಸ ಭಾರತದ ಎಲ್ಲಾ ಭಾಗದಲ್ಲು ಒಂದೆ ರೀತಿಯಲ್ಲಿಲ್ಲ. ಇತಿಹಾಸವೇ ತಿಳಿಸುವಂತೆ, ನಾವು ಮನುಸ್ಮೃತಿ ಎಂದುಕೊಂಡಿರುವ ಸ್ಮೃತಿ ಮನುಸ್ಮೃತಿಯೇ ಅಲ್ಲ! ಅದು ಬಹಳ ಸಲ ತಿದ್ದುಪಡಿಗೊಂಡು ತನ್ನ ಮೂಲ ರೂಪವನ್ನೆ ಕಳೆದುಕೊಂಡಿದೆ. ಶುಂಗರ ಕಾಲದಲ್ಲಿ ಅದು ಬಹಳಷ್ಟು ಬದಲಾವಣೆ ಹೊಂದಿ ಆ ಸಾಮ್ರಾಜ್ಯದ ಕಾನೂನು ಆಗಿತ್ತು.
ಬೇರೆ ಬೇರೆ ಸಾಮ್ರಾಜ್ಯಗಳಿಗೆ ಬೇರೆಯದೇ ಕಾನೂನುಗಳಿದ್ದವು.
ದಕ್ಷಿಣ ಭಾರತದಲ್ಲಿ ಅದು ಪಸರಿಸಿದ್ದು ವಿಜಯನಗರ ಸಾಮ್ರಾಜ್ಯ ಕಾಲದ ಅಂತಿಮ ಕಾಲದಲ್ಲಿ! (ಆಕ್ರಮಣಕಾರಿ ಸುಲ್ತಾನರು ಖಿಲ್ಜಿಗಳು ಶುಂಗರ ಕಾನೂನೆ ಭಾರತ ಸಾಮ್ರಾಜ್ಯಗಳ ಕಾನನು ಎಂದು ಅಪಾರ್ಥ ಮಾಡಿಕೊಳ್ಳುತ್ತಾರೆ)
ಚಾತುರ್ವರ್ಣ್ಯದ ನಂತರ ಪಂಚಮ ವರ್ಣವೊಂದು ಉದಯಿಸುತ್ತದೆ. ನೆನಪಿರಲಿ ಇದು ಜಾತಿಯಲ್ಲ! ಕುಲವಲ್ಲ! ವರ್ಣ!
ಮೊದಲೇ ತಿಳಿಸಿದಂತೆ ಯಾವುದೇ ಕುಲ ಜಾತಿಯಲ್ಲಿ ಹುಟ್ಟಿದವರು, ತಮ್ಮ ಗುಣ, ಆಸಕ್ತಿ ಮತ್ತು ಅರ್ಹತೆಗಳ ಅನುಗುಣವಾಗಿ ಯಾವುದೇ ವರ್ಣದಲ್ಲಿ ಬೇಕಾದರು ಗುರುತಿಸಿಕೊಳ್ಳಬಹುದು!
ಕೇವಲ ಹೊಲಮಾದಿಗ ಬೇಡ ಕುಲಗಳನ್ನು ಪಂಚಮ/ಚಾಂಡಾಲ ವರ್ಣಕ್ಕೆ ಅಂಟಿಸುವುದು ಪಿತೂರಿಯೇ ಸರಿ!
ಮನುಕುಲಕ್ಕೆ ಆರಂಭ ಬರೆದ ಹೊಲಯ ಮಾದಿಗ ಕುಲಗಳೆ, ಎಲ್ಲಾ ಜಾತಿ ಕುಲಗಳಿಗು ಮೂಲ. ಇದು ಕೇವಲ ಮಾತಲ್ಲ!
ವೈಜ್ಞಾನಿಕ ಸತ್ಯ!
ಮಣ್ಣು ಮತ್ತು ಕೃಷಿಯಾಧಾರಿತ ಜಾತಿ ಕುಲಗಳಿಗೆಲ್ಲ ಹೊಲಯರು, ಕೃಷಿಯೇತರ ಪಶುಸಂಗೋಪಾನೆ ಜಾತಿ ಕುಲಗಳಿಗೆಲ್ಲ ಮಾದಿಗರೆ ಮೂಲರಾಗಿದ್ದಾರೆ.
ಹಾಗೆಯೇ ಈ ಎರಡು ಆದಿಮ ಜನಾಂಗಗಳು ಒಂದೇ ಮೂಲವನ್ನು ಪರಸ್ಪರ ಹಂಚಿಕೊಂಡಿವೆ.
ಮುಂದಿನ ಭಾಗದಲ್ಲಿ ಖಂಡಿತವಾಗಿ, ಹೊಲೆಮಾದಿಗ ಪದದ ಅರ್ಥಗಳು ಹಾಳಾದುದರ ಬಗ್ಗೆ, ಹೊಲೆಮಾದಿಗ ಹೆಸರುಗಳು ಕೀಳು ಸೂಚಕ ಪದವಾದುದರ ಸಂಚು ವಂಚನೆಗಳ ಬಗ್ಗೆ ಬರೆಯಲಿದ್ದೇನ್ನೆ.
ಈಗ ನೇರವಾಗಿ ವಿಷಯಕ್ಕೆ ಬರುವ!

ಇಂಥಹ ಅದ್ಭುತ ಇತಿಹಾಸವಿರುವ, ಮಹಾನ್ ಪೌರಾಣಿಕ - ಐತಿಹಾಸಿಕ ವ್ಯಕ್ತಿತ್ವಗಳು ಇರುವ, ಸಾವಿರಾರು ವರ್ಷಗಳ ಭವ್ಯ ಪರಂಪರೆ ಇರುವ ಹೊಲಯರು, ಅವರ ಹೆಸರು, ಅದರ ಅರ್ಥ ಅದೇಗೆ ಕೀಳಾಯಿತು? ಎಂಬ ಗೊಂದಲ ಮೂಡುವುದು ಸಹಜ!

ವಿಜಯನಗರ ಸಾಮ್ರಾಜ್ಯ ಪಥನವಾಗಲು ಕಾರಣವಾದ ಪ್ರಮುಖ ಅಂಶಗಳೇ ಹೊಲಯ ಮಾದಿಗರ ಹಿರಿಮೆ ಗರಿಮೆಗಳ ಮಣ್ಣು ಮಾಡಿವೆ!
ಪಾಳು ಬಿದ್ದ ಹಂಪೆ, ಹಾಳಾದ ಹೊಲಯ ಮಾದಿಗರ ಬಿಂಬವಾಗಿದೆ!
೧.) ಶೈವ ವೈಷ್ಣವ ಬ್ರಾಹ್ಮಣರ ಕಿತ್ತಾಟ
೨.) ಮಹಮದ್ದೀಯರ ಒಳನುಸುಳುವಿಕೆ ಮತ್ತು ಆಕ್ರಮಣ
೩.) ವಿಜಯನಗರ ಸಾಮ್ರಾಜ್ಯದಲ್ಲಿ ವೃತ್ತಿಗೆ ಅನುಗುಣವಾಗಿ ಕಲ್ಪಿಸಿಕೊಟ್ಟ ಪ್ರಾಮುಖ್ಯತೆಗಳ ಪಲವಾಗಿ ಹಲವಾರು ನವ ಜಾತಿಗಳು ಉದಯಿಸಿದವು, ಮತ್ತು ಜಾತಿ ಜಾತಿಗಳ ನಡುವಿನ ಕಿತ್ತಾಟಗಳು ಹೆಚ್ಚಾದವು.
೪.) ಪಾಳೆಗಾರ ಬಂಡಾಯ. ವಿಜಯನಗರ ಸಾಮ್ರಾಜ್ಯದಿಂದ ಸ್ವತಂತ್ರರಾಗಲು ಕಾಯುತ್ತಿದ್ದ ಪಾಳೆಗಾರರು, ಸಾಮ್ರಾಜ್ಯ ಪಥನಕ್ಕೆ ಪರೋಕ್ಷವಾಗಿಯೇ ಕಾರಣರಾದರು!

ಇದೇ ಅಂಶಗಳು ಹೊಲಯ ಮಾದಿಗರ ಇತಿಹಾಸವನ್ನೂ ನೆಲಸಮ ಮಾಡಿವೆ! ತದನಂತರ, ಬಹುಸಂಖ್ಯಾತ ಸಮಾಜವನ್ನು ಮತಸ್ಥಾಪಕರು ಸೆಳೆಯುವ ನಿಟ್ಟಿನಲ್ಲಾದಂತಹ ಲೋಪಗಳು ಮತ್ತು ಇತರೇ ಸಾಹಿತ್ಯಿಕ ಲೋಪಗಳು ಇದರಲ್ಲಿ ಕಾಣಬಹುದು!

"ಹೊಲಸು ತಿಂಬವನೆ ಹೊಲಯ" ಎಂಬ ಮಾತನ್ನು ಕೇವಲ ಸಾಹಿತ್ಯಿಕ ರೂಪದಲ್ಲಿ ನೋಡುವುದಾದರೆ, ಅಲ್ಲಿ ಹೊಲಸು ಎಂಬ ಪದದ ಅರ್ಥವೇ ಬದಲಾಗುವ ಸಂಭವವಿದೆ!
"ಹೊಲಸು" ಎಂಬುದಕ್ಕೆ "ಫಲ/ಪಲ" ಎಂಬ ಅರ್ಥವಿದೆ. 
(ಹೊಲದಲ್ಲಿ ಬಿತ್ತಿದರ ಪಲ ಹೊಲಸು- ಹೊಲದಲ್ಲಿ ಬೆಳೆದದ್ದೆಲ್ಲಾ ಹೊಲಸು ಎಂಬಂತೆ) ಇದೇ ಪದದ ರೂಪವಾದ "ಹುಲುಸು" ಎಂಬ ಪದಕ್ಕೆ "ಸಮೃದ್ಧವಾದ" ಎಂಬ ಅರ್ಥವಿದೆ. 
ಸಂಸ್ಕೃತದಲ್ಲಿ 'ಪುಲ್' ಎಂದರೆ 'ಮಹಾ'/'ಮಹಾನ್' ಎಂದರ್ಥ!
So, ಇಲ್ಲಿಗೆ 'ಹೊಲಸು' ಎಂಬ ಪದದ ಅರ್ಥ ರೂಪವು ಫಲ ಎಂದು ಅರ್ಥೈಸುತ್ತದೆ. ಇದರ ಇನ್ನೊಂದು ಅಯಾಮದ ವಿಚಾರ ಹೀಗೆದೆ. ಬೆವರನ್ನು 'ಹೊಲಸು' (ಕೊಳಕು ಎಂಬ ಅರ್ಥದಲ್ಲಿ) ಸೂಚಿಸಲಾಗುತ್ತದೆ.

ಬ್ರಾಹ್ಮಣರು ಅಥವ ದ್ವಿಜರು ಬೆವರು ಸುರಿದಬಾರದು. ಅವರ ಬೆವರು ನೆಲಕ್ಕೆ ತಾಗಬಾರದು. ಅವರು ತಮ್ಮ ಶಿರ(ಬುದ್ಧಿ) ಯನ್ನು ಮಾತ್ರ ಬಳಸಿ ದುಡಿಯಬೇಕು. ಜೀವನ ಸಾಗಿಸಬೇಕು ಎಂಬುದು ಸ್ಮೃತಿಯ ಉಕ್ತಿ ಎನ್ನಲಾಗಿದೆ.
ಮಿಕ್ಕವರು ದೇಹ ಉಪಯೋಗಿಸಿ, ಬೆವರು ಸುರಿಸಿ ದುಡಿಯಬೇಕು ಎಂಬ ಮಾತಿದೆ.

ಅಲ್ಲಿಗೆ, 'ಹೊಲಸು' ಎಂಬ ಪದ ದುಡಿದು ತಿನ್ನುವ ಅಥವ ದೇಹ ದಂಡಿಸಿ ದುಡಿದು ತಿನ್ನುವವರ 'ಪಲ' ಸೂಚಕವಾಗುತ್ತದೆ. ಶ್ರಮಿಕ ವರ್ಗದ ಜನರು 'ದುಡಿಮೆ ಮತ್ತು ಫಲ'ಕ್ಕೆ ಹೊಲಸು ಎಂಬ ಪದ ಸಮಾನಾರ್ಥಕವಾಗಿದೆ.

ಇವನ್ನು ಹೊರತುಪಡಿಸಿ, 'ಹೊಲಸು' ಎಂಬ ಪದವನ್ನು "ಮಾಂಸ" ಎಂಬರ್ಥದ ರೂಪಕ ಎಂಬುದನ್ನು ಒಪ್ಪಲಾಗದು. ಆದರೆ ಅದನ್ನು ಹಾಗೆಯೇ ಬಳಸಲಾಗಿದೆ. ಸಂಸ್ಕೃತದಲ್ಲಿ ಹೊಲಯ ಎಂಬ ಪದಕ್ಕೆ ವಲ್ಲಭ (ತಮಿಳಿನ ವಲ್ಲುವ) ಎಂಬ ಸಮಾನಾರ್ಥಕ ರೂಪಾಂತರ ಪದವಿದೆ. ಆದರೆ ವಲ್ಲುವ ಅಥವ ವಲ್ಲವ ಎಂಬ ಪದದ ಅರ್ಥ ಕೆಟ್ಟಿಲ್ಲ! ತಮಿಳು-ಮಲಯಾಳಂನಲ್ಲಿ ಪರಯ್ಯ ಮತ್ತು ಪುಲಯ ಎಂಬ ಪದ ಬಳಕೆಯಿದ್ದರೂ ಸಹ ಅವೂ ಸಹ ಕೀಳಾರ್ಥವನ್ನು ಹೊಂದಿಲ್ಲ, ಅಥವ ಅದರ ಅರ್ಥವನ್ನು ತುಚ್ಛೀಕರಿಸಿಲ್ಲ! ಆದರೆ, ಜನಾಂಗೀಯವಾಗಿ ಆ ಸಮುದಾಯದವರನ್ನು ಕೆಳವರ್ಗದವರು ಎಂದು ಸೂಚಿಸಲಾಗಿದೆ ಅಷ್ಟೆ!

ತೆಲುಗಿನಲ್ಲೂ ಸಹ ಮಾಲ, ಮಳ, ಮಲ್ಲ, ಮಲೆಯ ಎಂಬ ಪದಗಳಿದ್ದೂ, ಅಲ್ಲಿಯೂ ಯಾವುದರ ಅರ್ಥವೂ ಕೆಟ್ಟಿಲ್ಲ! ಸಾಹಿತ್ಯಿಕವಾಗಿಯೂ ಅವು ಕೆಟ್ಟ ಪದಗಳಂತೆ ಬಳಕೆಯಾಗಿಲ್ಲ!
ಆದರೆ ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೊಲಯ ಎಂಬ ಪದವನ್ನು ಬೈಗುಳದ ಪದವಾಗಿರುವುದು ನಿಜಕ್ಕೂ ದುರಂತ!

ಇದರ ಹಿಂದೆ ಅದೆಂತಾ ಪಿತೂರಿ, ಅದೆಂತಾ ವಿದ್ವಂಸಕರು ಇದನ್ನು ಹುಟ್ಟಿಹಾಕಿರಬಹುದು ಎಂಬ ಅನುಮಾನ ಮೂಡದೆ ಇರದು!
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೇರೆ ಪ್ರಾಂತ್ಯಗಳಲ್ಲಿ, ಭಾಷೆಗಳಲ್ಲಿ ಅರ್ಥ ಕೆಡದ 'ಹೊಲಯ' ಎಂಬುದರ ಮತ್ತು ಅದರ ಸಮಾನಾರ್ಥಕ ಪದಗಳು,
ಕರ್ಣಾಟಕದಲ್ಲಿ ಮಾತ್ರ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮಾತ್ರ ಕೆಡಲು ಕಾರಣವೇನು?

ಮೇಲಿನ ಎರಡು ವಿವರಣೆಗಳು, ಹೊಲಯ ಎಂಬ ಪದದ ಸಾಹಿತ್ಯಕ ಆಯಾಮದಲ್ಲಿ ಉಚ್ಛಾರ್ಥವನ್ನು ಸಮರ್ಥಿಸುತ್ತದೆ.
ಈಗ ರಾಜತಾಂತ್ರಿಕ ರಾಜಕೀಯ ಆಯಾಮದ ವಿಚಾರ ನೋಡುವ.
ಭಾರತದ ಇತಿಹಾಸದ ರಾಜತಂತ್ರದಲ್ಲಿ ಮತ ಧರ್ಮಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿವೆ.

ನೆಲಮೂಲ ಧರ್ಮಗಳಾದ ಆದಿಮರ ಶಕ್ತಿ, ಶೈವ ವೈಷ್ಣವ, ಅಜೀವಿಕ, ಜೈನ ಹಾಗು ಬೌದ್ಧ ಧರ್ಮಗಳು, ಮತ್ತು ವೈದಿಕ ಆಚರಣೆಗಳು, ನವಮತಗಳಾಗಿ ಉದಯಿಸಿದ ಸಿಖ್ಖ- ಲಿಂಗಾಯತ ಮತಗಳು, ಇತ್ಯಾದಿಗಳ ಪ್ರಭಾವದಿಂದಾಗಿ ಭಾರತೀಯ ರಾಜತಂತ್ರದ ಇತಿಹಾಸವು ಬಹಳಷ್ಟು ವೈವಿಧ್ಯತೆಯನ್ನು ಹೊಂದಿವೆ.
ಒಂದು ಮತ ಸ್ಥಾಪಿಸಿ, ಅದನ್ನು ಬೆಳೆಸಿ, ಬಳಸಲು ಅಲ್ಲಿಗೆ ಜನಾಕರ್ಷಿಸುವುದು ಎಂದರೇನು ಸಾಮಾನ್ಯ ಕಾರ್ಯವಲ್ಲ!
ಮತ ಸ್ಥಾಪನೆ ಅಥವ ಪಂಥ ಸ್ಥಾಪನೆಯ ನಂತರ ಅದನ್ನು ಅನುಸರಿಸಲು ಬಹುಸಂಖ್ಯಾತ ಸಮುದಾಯವೊಂದನ್ನು ಅಲ್ಲಿಗೆ ಆಕರ್ಷಿಸಲು ನಾನಾ ಪ್ರಯತ್ನಗಳು ನಡೆಯುತ್ತವೆ.

ಕೆಲವರನ್ನು ತಮ್ಮ ಭವ್ಯ, ಸದ್ಗುಣ, ಸುಲಕ್ಷ್ಯ, ಸಂಪನ್ನತೆಯ ತತ್ವ ಸಿದ್ಧಾಂತಗಳಿಂದ ಆಕರ್ಷಿಸಿಕೊಂಡ ಮತಧರ್ಮಗಳು, ಅದಕ್ಕೆ ಆಕರ್ಷಣೆಗೆ ಒಳಗಾಗದೆ ಹಾಗೆ ಉಳಿಯುವವರನ್ನು ಅಲಕ್ಷಿಸಿ 'ನೀಚ' ಸ್ಥಾನಕ್ಕೆ ದೂಡುವುದು ಸಹಜ!
ಆದರೆ ಕೆಲವರು ಎಲ್ಲೇ ಹೋದರೂ ಸಹ ತಮ್ಮ ಮೂಲ ಮರೆಯದೆ ಆಯಾ ಮತಧರ್ಮಗಳೊಂದಿಗೆ ತಮ್ಮ ಮೂಲಕುಲಗಳ ಹೆಸರನ್ನು, ಗುರುತುಗಳನ್ನೂ ಕರೆದೊಯ್ದಿರುವುದನ್ನೂ ಕಾಣಬಹುದು! ಮಾತಂಗ ಬೌದ್ಧರು, ನಾಗ ಬೌದ್ಧ ಹೊಲಯರು, ಜೀನ-ವಲ್ಲಭರು ಇದಕ್ಕೆ ಸಾಕ್ಷಿ ಎನ್ನಬಹುದು!
ಇಂತಹ ಕಾಲದಲ್ಲೂ ಕರ್ನಾಟಕದ ಮಟ್ಟಿಗೆ 'ಹೊಲಯ' ಎಂಬ ಪದ ಹಾಳಾಗಿರಲು ಸಾಧ್ಯವಿಲ್ಲ.
ಏಕೆಂದರೆ ಹೊಲಯ ಎಂಬುದರ ಪದದ ಕೀಳಾರ್ಥದ ಉಲ್ಲೇಖವಾಗುವುದು ೧೨ನೇ ಶತಮಾನದ ಶರಣರ? ವಚನಗಳಲ್ಲಿ!

ಯಾವುದೇ ಧರ್ಮ ಮತ ಪಂಥ ಅನುಸರಿಸಿದರೂ ತಮ್ಮ ಮೂಲ ಕುಲವನ್ನು ಬಿಟ್ಟುಕೊಡದ ನೆಲಮೂಲವಾಸಿ ಹೊಲಯಮಾದರಸರಿಂದಲೇ ಭಾರತದಲ್ಲಿ ಭಾರತೀಯ ನೆಲಧರ್ಮಗಳಾದ, ಆದಿಮ, ವೈದಿಕ, ಜೈನ, ಬೌದ್ಧ, ಸಿಖ್ಖ ಲಿಂಗಾಯತ ಧರ್ಮಗಳೆಲ್ಲಾ ಪರಸ್ಪರ ಪೂರಕವಾಗಿಯೇ ಬೆಳೆದಿವೆ.
'ಕಲಬ್ರರು' ಮಧ್ಯ ಭಾರತದಿಂದ ದಕ್ಷಿಣದ ಸಾಮ್ರಾಜ್ಯಗಳ ಮೇಲೆಲ್ಲಾ ಪ್ರಭಾವ ಬೀರಿದ್ದ ಅರಸರು. ಆದರೆ ಇವರಿಗೆ ಗಟ್ಟಿನೆಲೆ ಸಿಕ್ಕಿದ್ದು ಮಾತ್ರ ಕರ್ಣಾಟಕದಲ್ಲಿ. ಎಂದರೆ ಉತ್ತರ ಕರ್ನಾಟಕದಲ್ಲಿ!
ತಮಿಳುನಾಡಿನ ಕಲ್ಲರ್ ಜನಾಂಗವನ್ನು ಕಲಬ್ರ ಮೂಲದವರು ಎನ್ನಲಾಗುತ್ತದೆ.

ಇದೇ ಕಲಬ್ರರ ಮೂಲ ಕೆದಕಿದರೆ ಪರಾಮಾರರು ಕಾಣ ಸಿಗುತ್ತಾರೆ. ಈ ಪರಾಮಾರರು ಹೊಲಯ ಮಾದಿಗರ ಕೂಡು ಜಾತಿ.
ದಕ್ಷಿಣ ಭಾರತದಲ್ಲಿ ಎಡಗೈ ಬಲಗೈ ಜಾತಿ ವಿಂಗಡನೆ ಇದ್ದಂತೆ ಉತ್ತರ ಭಾರತದಲ್ಲಿಲ್ಲ. ಅಲ್ಲಿ ಎರಡೂ ಸಹ ಒಂದೇ.
ಅದನ್ನು ಹೆಸರೇ ಸೂಚಿಸುತ್ತದೆ. ಪರಯ್ಯ+ಮಹಾರ್ = ಪರಾಮಾರ್ ಎಂದು.
ಪರಯ್ಯ ಎಂದರೆ ತಮಿಳುನಾಡಿನ ಹೊಲಯ ಜಾತಿ. ಇದರ ಅರ್ಥ ಆದಿ ಶೈವರು/ಚರ್ಮವಾದ್ಯ ನುಡಿಸುವವರು ಎಂದು. ಈ 'ಪರಯ್ಯ' ಎಂಬುದು ದಕ್ಷಿಣಕ್ಕೆ ಬಲಗೈ ಪಂಗಡದ ಸೂಚಕವಾದರೆ, ಉತ್ತರ ಭಾರತಕ್ಕೆ ಎಡಗೈ ಸೂಚಕ ಪದ. ಇದೇ ಕಾರಣಕ್ಕೆ ಪರಯ್ಯ ಎಂಬುದನ್ನು ಉತ್ತರ ಭಾರತದ ಭಾಷೆಗಳಿಗೆ, ಅಥವ ಆಂಗ್ಲಕ್ಕೆ ಭಾಷಾಂತರಿಸಿದಾಗ 'ಮಾದಿಗ' ಎಂದು ಬರೆಯಲಾಗುತ್ತದೆ. ಮಹಾರ್ ಎಂದರೆ ಮಹಾರಾಷ್ಟ್ರ ಮತ್ತು ಇತರೇ ಉತ್ತರ ಭಾರತದ ರಾಜ್ಯಗಳ ಹೊಲಯ ಎಂಬುದರ ಸೂಚಕ ಪದ. ಎಂದರೆ ಬಲಗೈ ಪಂಗಡ. ಪರಾಮಾರರು ಮಾದಿಗರಂತೆ ಪಶುಪಾಲಕರೂ ಹೌದು, ಹೊಲಯರಂತೆ ಬೇಸಾಯಗಾರರೂ ಹೌದು.

ಇದೇ ಕಾರಣಕ್ಕೆ ಈ ಎಡಗೈ ಬಲಗೈ ವಿಂಗಡಣೆಯ ಭಿನ್ನವು ಉತ್ತರ ಭಾರತದಲ್ಲಿ ಕಾಣಸಿಗದು.
ಕಲಬ್ರರು ಕರ್ನಾಟಕದಲ್ಲಿ ಕಲಚೂರಿಗಳು ಎನಿಸಿಕೊಳ್ಳುತ್ತಾರೆ. ಭಾರತದ ಇತಿಹಾಸದಲ್ಲೇ ಕಲಬ್ರರು ವಿಭಿನ್ನ ಸ್ಥಾನ ಹೊಂದಿದ್ದಾರೆ! ಕಾರಣ ಅವರ ಹೊಸ ಸಮಾನ ನೀತಿ! ಈ ಅರಸರು ಬ್ರಾಹ್ಮಣರಿಗೆ ಹಿಂದಿನ ಅರಸು ಮನೆತನಗಳು ನೀಡಿದ ಭೂದಾನ, ಭೂದಯಾ, ಗೋದಾನ ಇತ್ಯಾದಿ ಹಕ್ಕು ಅಧಿಕಾರಗಳನ್ನು ರದ್ದು ಮಾಡಿದ್ದರು! ಕರ್ನಾಟಕದಲ್ಲಿ ಹೊಲಯಾರಸರಾದ ಚಾಲುಕ್ಯರೊಡನೆ ಮತ್ತು ಚೋಳರೊಡನೆ ವೈವಾಹಿಕ ಸಂಬಂಧಗಳನ್ನು ಮಾಡಿ, ಕ್ರಮೇಣ ೧೦-೧೨ನೆ ಶತಮಾನದ ಹೊತ್ತಿಗೆ ಅದೇ ಚಾಲುಕ್ಯರ ಮೂಲನೆಲೆಯ ಮೇಲೆಯೇ ತಮ್ಮ ಕಲಚೂರಿ ಸಾಮ್ರಾಜ್ಯ ಸ್ಥಾಪಿಸುತ್ತಾರೆ!
ಆರಂಭದಲ್ಲಿ ಬ್ರಾಹ್ಮಣರನ್ನು ವಿಶೇಷ ಸ್ಥಾನದಿಂದ ಕೆಳಗಿಳಿಸಿದ ಕಾರಣ ಕಲಬ್ರರ ಮೂಲವಾದ 'ಹೊಲಯ ಮಾದಿಗ' ಕುಲಗಳನ್ನು ತುಚ್ಛೀಕರಿಸುವ ಸಾಧ್ಯತೆಗಳು ಹೆಚ್ಚಿವೆ! ಭೂದಾನ (ನೆಲ ಹಂಚುವ ಕಾರ್ಯ), ಭೂದಯಾ(ನೆಲದ ಮೇಲಿನ ಹಕ್ಕು), ಗೋದಾನ (ಪಶುಗಳ ದಾನ) ಇವೆಲ್ಲವನ್ನು ರದ್ದು ಪಡಿಸಿದ ಕಲಬ್ರರ ಮೂಲವನ್ನು ಬ್ರಾಹ್ಮಣರು ಜಾನಪದೀಯವಾದಿ (ಸಾಹಿತ್ಯಕವಾಗಿ) "ಕೊಲ್ಲುವವನೆ ಮಾದಿಗ ಹೊಲಸು ತಿಂಬವನೆ ಹೊಲಯ" ಎಂದು ಕೀಳಾರ್ಥಕ್ಕೆ ದೂಡಿದ ಮೊದಲ ಹಂತವಿದು ಎನ್ನಬಹುದು!
ಆದರೆ ಇದೇ ಕಲಚೂರಿಗಳು ಬಸವಣ್ಣನ ಕಾಲದ ಹೊತ್ತಿಗೆ ಪುರೋಹಿತಶಾಹಿಗಳ ಕೈವಶವಾಗಿದ್ದು ದುರಂತ!
ಇದು ಬಸವಣ್ಣನಿಗಿಂತಲೂ ಹಿಂದಿನ ವಿಚಾರ ಎನ್ನಬಹುದು!
ಏಕೆಂದರೆ ಬಸವಣ್ಣ ತಮ್ಮ ಪ್ರೌಢಾವಸ್ಥೆಯಲ್ಲಿ ಹೊಲಯ ಮಾದಿಗರ ಸ್ನೇಹ ಮಾಡಿದ್ದನ್ನು ಕಂಡ ಬ್ರಾಹ್ಮಣರು, ಬಸವಣ್ಣನನ್ನು ಜರಿದಿದ್ದರ ಬಗ್ಗೆ ಕಥಾ ಹಿನ್ನೆಲೆಗಳಿವೆ.

ಬಸವಣ್ಣ ಮುಂದೆ, ಹೊಲೆಮಾದಿಗರನ್ನು ಜರಿದ ಬ್ರಾಹ್ಮಣರನ್ನು ಮರುಪ್ರಶ್ನಿಸುತ್ತಾರೆ! ಯಾರು ಮಾದಿಗ? ಯಾರು ಹೊಲಯ? ಎಂದು!
ಆಗ ಬ್ರಾಹ್ಮಣನೊಬ್ಬ ಕೊಲುವವನೆ ಮಾದಿಗ ಹೊಲಸು ತಿಂಬವನೆ ಹೊಲಯ ಎನ್ನುತ್ತಾನೆ.
ಬಸವಣ್ಣ, ಇದನ್ನು ಕೇಳಿ ಹೊಲಯ ಮಾದಿಗರ ಪರವಾಗಿ ಮಾತನಾಡುವ ಬರದಲ್ಲಿ ಹೊಲಯ ಮಾದಿಗ ಪದಗಳ ಅರ್ಥವನ್ನೇ ಸಂಪೂರ್ಣವಾಗಿ ಕೊಂದು ಹಾಕುತ್ತಾರೆ!
ಬಸವಣ್ಣ ಹೀಗೆ ಪ್ರತ್ಯುತ್ತರಿಸುತ್ತಾರೆ.

"ಸಣ್ಣ ಪ್ರಾಣಿಯನ್ನು ದೊಡ್ಡ ಪ್ರಾಣಿ ತಿಂದು ಬದುಕುವುದು ಪ್ರಕೃತಿಯ ಸಹಜತೆ! ಕೊಲ್ಲುವವನು ಹೇಗೆ ಮಾದಿಗನಾಗುತ್ತಾನೆ? ಕೊಲ್ಲುವವನಲ್ಲ ಮಾದಿಗ!
ತನ್ನಂತೆ ಇರುವ ಮತ್ತೊರ್ವ ಮನುಷ್ಯನನ್ನು ಮನುಷ್ಯ ಎಂದೂ ಪರಿಗಣಿಸದೇ ಶೋಷಿಸುವನು ಮಾದಿಗ! ಹೊಲಸು (ಮಾಂಸ) ತಿಂದವನಲ್ಲ ಹೊಲಯ!
ದೇವರು ದಿಂಡಿರು ಎಂದು ಹೇಳಿ ಮೌಡ್ಯದ ವೈಪರಿತ್ಯಕ್ಕೆ ತಲುಪಿ, ಜನರಿಂದ ದುಡ್ಡು ಕೀಳುವ, ಶ್ರಮವಿಲ್ಲದೆ ಸಂಪಾದಿಸುವ ಹಣವೆ ಹೊಲಸು!
ಆ ಹೊಲಸು ತಿನ್ನುವವರೆ ಹೊಲಯ" ಎಂದರು!

ಇದನ್ನು ಸೂಕ್ಷ್ಮವಾಗಿ ಅಧ್ಯಯಿಸಿದರೆ ಈ ವಿವರಣೆಯ ಮೂಲಕ ಹೀಗಳೆದದ್ದು ಬ್ರಾಹ್ಮಣರನ್ನು ಪುರೋಹಿತರನ್ನು ಎಂದು ಸ್ಪಷ್ಟವಾಗಿ ತಿಳಿಯುತ್ತದೆ!
ಆದರೆ, ಆ ನಿಟ್ಟಿನಲ್ಲಿ ಹೊಲಯ ಮಾದಿಗರ ಹೆಸರನ್ನು ಹಾಳುಮಾಡಿದ್ದಂತು ನಿಜ!
ಹೊಲಯ ಮಾದಿಗರ ಹೆಸರನ್ನು ಹಾಳು ಮಾಡಲು ಬ್ರಾಹ್ಮಣರು ಪ್ರಾರಂಭಿಸಿದರೆ, ಅದನ್ನು ಈ so called ಜಾತಿವಿನಾಶ ಮಾಡಲು ಹುಟ್ಟಿಕೊಂಡ ಶರಣರು & ಭಕ್ತಿ ಪಂಥದ ಕೆಲವು ದಾಸರುಗಳು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ!
ಜಾತಿ ನಿಂದನೆ ಕೇಸಿನ A1 ಆ ಬ್ರಾಹ್ಮಣರ ಜೊತೆಗೆ ಬಸವಣ್ಣ & team ಅನ್ನು ಪರಿಗಣಿಸಬೇಕಾದೀತು! ಜೊತೆಗೆ ಇದನ್ನೇ ಇವರ ಮಾತನ್ನೇ ಅನುಸರಿಸಿದ ಶೂದ್ರರು & ನವ ಕ್ಷತ್ರಿಯರೂ ಅಪರಾಧಿಗಳೆ!
ಇದೇ ವಿಚಾರವಾಗಿ ಕೆಲವರ ಅಭಿಪ್ರಾಯ ಹೀಗೂ ಇದೆ!
"ಶರಣರೇನು ಸಾಚಾಗಳೆ? ಇಂದಿನ ಮಿಷನರಿಗಳೇ ಪರವಾಗಿಲ್ಲ!
ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಿ ಜನರಿಗೆ ಮಂಕುಬೂದಿ ಎರಚಿ ಮತಾಂತರ ಮಾಡುತ್ತಾರೆ,
ಆದರೆ ಆಗಿನ ಕೆಲ ಲಿಂಗವಂತ ಶರಣರು ಒಂದು ಹೆಜ್ಜೆ ಮುಂದೆ ಹೋಗಿ, ಹೊಲಯ ಮಾದಿಗರ ಹೆಸರನ್ನೇ ಕೆಡೆಸಿ ಲಿಂಗದೀಕ್ಷೆ ಕೊಡಲು ಮುಂದಾಗಿದ್ದಾರೆ!" ಎಂದು!
ಇದಕ್ಕೆ ಪೂರಕವೆಂಬತೆ ಮತ್ತೊಂದು ಅಂಶವನ್ನು ನಾವು ಪರಿಗಣಿಸಲೇ ಬೇಕು.

ಅದುವೇ ದಕ್ಷಿಣ ಕರ್ನಾಟಕದಲ್ಲಿ ಅದಾಗಲೇ ಹೊಲಯರಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದ್ದ ಶ್ರೀ ವೈಷ್ಣವ ಧರ್ಮದ ಅನುಸರಣೆ.
ರಾಮಾನುಜಾಚಾರ್ಯರು ಈ ಹೊಲಯರ ಹೆಸರು ಕೆಡಿಸದೆ ಅವರನ್ನು ತಿರುಕುಲ ಹೊಲಯರೆಂದು ಕರೆದು ಅವರಿಗೆ ಪ್ರಾಮುಖ್ಯತೆ ದೊರಕಿಸಿಕೊಡುತ್ತಾರೆ.
ಈ ಹೊಲಯರು ಮೊದಲಿನಿಂದಲೂ ಸಾಳುವ ರಾಯ (ಚಲುವರಾಯ), ತಿಮ್ಮಪ್ಪ (ತಿರುಪತಿಯ ವೆಂಕಟೇಶ್ವರ/ಮಲಯಪ್ಪ), ಅಯ್ಯನಗುಡಿ ಆಂಜನೇಯ (ಕೆಂಗಲ್ ಹನುಮಂತ), ಮುತ್ತಯ್ಯ (ಮುತ್ತತ್ತಿ ಹನುಮ), ಚನ್ನಯ್ಯ (ಬೇಲೂರು ಚನ್ನಕೇಶವ) ಇತ್ಯಾದಿ ಆದಿ ವೈಷ್ಣವ ದೈವಗಳನ್ನು ಆರಾಧಿಸುತ್ತಿದ್ದ "ಆದಿ ವೈಷ್ಣವ"ರೇ ಆಗಿದ್ದಾರೆ. 
ಇವರನ್ನು ಸಂಘಟಿಸಿದ್ದು ಮಾತ್ರ ರಾಮಾನುಜಾಚಾರ್ಯರೆ.
ಮದರಾಸಿಗೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಅಂಬೇಡ್ಕರರು ಬುದ್ಧನ ಜೊತೆ ರಾಮಾನುಜರನ್ನು ಸಮೀಕರಿಸಿ ಮಾತನಾಡುತ್ತಾರೆ.
ಇದರಂತೆ, ಅಂಬೇಡ್ಕರ್, ಬುದ್ಧನಿಗೆ ಹಾಗು ರಾಮಾನುಜರಿಗೆ ಎಷ್ಟು ಗೌರವ ಭಾವ ಹೊಂದಿದ್ದರು ಎಂದು ತಿಳಿಯುತ್ತದೆ.
ಲಿಂಗದೀಕ್ಷೆಯ ಮೂಲಕ ಉತ್ತರ ಕರ್ನಾಟಕದ ಹೊಲಯರನ್ನು ಲಿಂಗದೀಕ್ಷೆ ಕೊಟ್ಟು ತಮ್ಮೆಡೆ ಸೆಳೆಯಲು ಇಂಥಹ ಪ್ರಯತ್ನಗಳು ನಡೆದಿವೆ ಎನ್ನಬಹುದು!

ಬಸವಣ್ಣನವರ ಮೇಲಿನ ವಿವರಣೆಯನ್ನು ಕಂಡರೆ ಎಂಥವರಿಗೂ ಒಂದು ಕ್ಷಣ ಬೆರಗಾಗುವುದಂತು ನಿಜ!
ಮಾದಿಗರೇನು ಶೋಷಣೆ ಮಾಡುತ್ತಿದ್ದಾರೆಯೆ? ಅಥವ ಶೋಷಣೆ ಮಾಡುತ್ತಿರುವವರಿಗೆಲ್ಲಾ ಮಾದಿಗರು ಎಂದು certificate ಕೊಡುತ್ತಿದ್ದಾರೆಯೆ?
ಹೊಲಯರೆಲ್ಲಾ ದುಡಿಯದೆ ದೇವರೆಂಬುದನ್ನು ಅತಿರೇಖಕ್ಕೆ ಕೊಂಡೊಯ್ದು ಶ್ರಮವಿಲ್ಲದೆ ಗಳಿಸುತ್ತಾರೆಯೆ? ಅಥವ ಆ ರೀತಿ ಗಳಿಸುತ್ತಿರುವ ಪುರೋಹಿತರೊಗೆಲ್ಲ ಹೊಲಯ ಅಂತ certificate ಕೊಡಲಾಗುತ್ತಿದೆಯೇ?

"ಬುದ್ಧ - ಬಸವ - ಅಂಬೇಡ್ಕರ್" ಎಂದು ಉದ್ದುದ್ದ ಸಿದ್ಧಾಂತಗಳನ್ನು ಗೀಚಿದವರಿಗೆ ತಿಳಿದಿಲ್ಲವೆ?
ಗೌತಮ ಬುದ್ಧ ಸಂಪೂರ್ಣವಾಗಿ ಜಾತಿ ಎಂಬುದನ್ನು ನಿರಾಕರಿಸೊದ ಏಕೈಕ ವ್ಯಕ್ತಿ. ಅದನ್ನು ಜಗತ್ತೇ ಒಪ್ಪಿದೆ.
ಆದರೆ ಬಸವಣ್ಣ???

ಹೊಲಯ ಮಾದಿಗರ ಹೆಸರು ಹಾಳು ಮಾಡಿದ ವಚನಕಾರರು ಅದು ಹೇಗೆ ತಾನೆ ಸಮಾನತೆಯ ಹರಿಕಾರರಾಗುತ್ತಾರೆ?
ಅದು ಹೇಗೆ ಜಾತಿ ವ್ಯವಸ್ಥೆಯ ವಿರೋಧಿಗಳಾಗುತ್ತಾರೆ?

ಇಷ್ಟೆಲ್ಲಾ ನಡೆದರೂ ಆ ಪ್ರಾಂತ್ಯದ ಹೊಲಯರು ಸುಮ್ಮನಿದ್ದರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅದಕ್ಕೂ ಉತ್ತರವಿದೆ.
ಯಾವಾಗ ಹೊಲಯ ಎಂಬ ಪದದ ಅರ್ಥ ಕೆಡುತ್ತಾ ಸಾಗುತ್ತದೋ, ಕ್ರಮೇಣ ಆ ಪ್ರಾಂತ್ಯದ ಹೊಲಯರೆಲ್ಲಾ ಆ ಗುರುತಿನಿಂದ ಹೊರಬಂದು ಕೆಲವರು ಲಿಂಗವಂತರಾಗಿ ಬಸವಣ್ಣನ ಅನುಯಾಯಿಗಳಾದರೆ, ಇನ್ನು ಹಲವರು ಹೊಲಯ ಎಂಬ ಗುರುತಿನಿಂದ ಹೊರ ಬಂದು ತಮ್ಮ ಚಾಲುಕ್ಯ ಅರಸುಕುಲದ ಗುರುತಾಗಿ ಅವರು ವಾಸಿಸುತ್ತಿದ್ದ ಚಾಲುಕ್ಯರ ಕೇರಿ- ಚಾಲುಕ್ಯ ವಾಡೆ ಎಂಬ ಅರ್ಥವೆಂಬತೆ, ಚಾಲುಕ್ಯರ ವಾಡೆ ಎನಿಸಿಕೊಳ್ಳುತ್ತಾರೆ.
ಇದೇ ಕಾಲಾನಂತರದಲ್ಲಿ ರೂಪಾಂತರಗೊಂಡು ಚಲುವಾದಿ/
ಛಲವಾದಿಯಾಗುತ್ತದೆ.

ಉತ್ತರ ಕರ್ನಾಟಕದ ಚಲವಾದಿಗಳು ಆದಿ ಶೈವರು. ಇಲ್ಲಿ ಆದಿ ವೈಷ್ಣವರ ಸಂಖ್ಯೆ ಕಮ್ಮಿ. ರಾಯಚೂರು ಭಾಗದ ಚಲವಾದಿ ಹೊಲಯ ದಾಸರಲ್ಲಿ ಮಾತ್ರ ಶ್ರೀ ವೈಷ್ಣವ ಪಂಥದ ಅನುಸರಣೆ ಇದೆ.

ಸೂಕ್ಷ್ಮವಾಗಿ ಗಮನಿಸಿ! ಉತ್ತರ ಕರ್ನಾಟಕದಲ್ಲಿ ಹೊಲಯಮಾದಿಗರ ಹೆಸರುಗಳು ಹಾಳಾದಂತೆ, ದಕ್ಷಿಣ ಕರ್ಣಾಟಕದಲ್ಲಿ ಹಾಳಾಗಿರುವುದಿಲ್ಲ.
ಅಷ್ಟೇ ಏಕೆ ಭಾರತದ ಯಾವ ಭಾಗದಲ್ಲು ಇದರ ಸಮಾನಾಂತರ ಪದಗಳ ಅರ್ಥ ಹಾಳಾಗಿರುವುದಿಲ್ಲ!
ಅಥವ ಪೂರ್ವ ಸಾಹಿತ್ಯದಲ್ಲಿ ಅದು ಕೀಳಾರ್ಥದಲ್ಲಿ ಬಳಕೆಯಾಗಿರುವುದಿಲ್ಲ!

ದಕ್ಷಿಣ ಕರ್ನಾಟಕದಲ್ಲಿ ಹೊಲಯರು ತಮ್ಮನ್ನು ಹೊಲಯರೆಂದೇ ಗುರುತಿಸಿಕೊಳ್ಳುತ್ತಾರೆ.
ಸ್ಥಳೀಯ ಜಾನಪದದಲ್ಲಿ ಹೊಲಯರು-ದೊಡ್ಡ ಹೊಲಯರು ಎಂಬುದು ಘನತೆ ಮತ್ತು ಗೌರವ ಸೂಚಕ ಪದವಾಗಿದೆ.
ದೊಡ್ಡ ಹೊಲಗೇರಿ ಚಿಕ್ಕ ಹೊಲಗೇರಿಗಳು ಬೆಳದು ದೊಡ್ಡ ದೊಡ್ಡ ಪಟ್ಡಣಗಳಾದದ್ದು ಈಗ ಇತಿಹಾಸ.
ಒಂದು ಕಾಲಕ್ಕೆ ಉತ್ತರದಲ್ಲೂ ಇಂಥದೇ ಉದಾಹರಣೆಗಳು ಸಿಗುತ್ತವೆ.
ಚಾಲುಕ್ಯರ ಮೂಲ ಎನ್ನಲಾದ ಲಕ್ಷೀಶ್ವರಕ್ಕೆ ಪೂರ್ವದಲ್ಲಿ ಪುಲಗೇರಿ ಎಂಬ ಹೆಸರಿತ್ತು. ಅದು ಪುಲಯರ ಕೇರಿ.
ಬಸವಣ್ಣನವರ ನಿಲುವು ತಮ್ಮ ಜೀವನದ ಕಡೆಯ ದಿನಗಳಲ್ಲಿ ಬದಲಾದಂತಿದೆ! ಏಕೆಂದರೆ, ಆರಂಭದಲ್ಲಿ ಹೊಲಯ ಮಾದಿಗರ ಹೆಸರುಗಳ ಅರ್ಥಗಳನ್ನೇ ಹಾಳುಗೆಡವಿದ್ದ ಇವರು ಕಡೆಯಲ್ಲಿ, ಮಾದಿಗರ ಮನೆಯ ಶಿಶು ನಾನು ದಾಸರ ಮನೆಯ ದಾಸ, ಲಿಂಗಾಯತ ಪಂಥ ಬೆಳೆದದ್ದೇ ಹೊಲಯ ಮಾದಿಗರಿಂದ, ಹೊಲಯರ ಮನೆಯಿಂದ ನಾಯಿ ಬಂದರೂ ಸಹ ಲಿಂಗದೀಕ್ಷೆ ಕೊಡುತ್ತೇನೆ ಎಂದು ಹೊಲಯ ಮಾದಿಗರನ್ನು ಅದೇ ಹೆಸರಿನಲ್ಲಿ ಹಾಡಿ ಹೊಗಳುತ್ತಾರೆ.

ಹೀಗೆ ಉತ್ತರ ಕರ್ನಾಟಕದಲ್ಲಾದ ಬದಲಾವಣೆಯ ಪ್ರಭಾವ ಇಲ್ಲಿ (ದಕ್ಷಿಣ ಕರ್ನಾಟಕ) ಹೆಚ್ಚು ಬದಲಾವಣೆ ತರಲಿಲ್ಲ.
ಇದಕ್ಕೆ ಕಾರಣ ಒಂದು ಕಡೆ ರಾಮಾನುಜಾಚಾರ್ಯರಾದರೆ, ಮತ್ತೊಂದು ಕಡೆ ಲಿಂಗಾಯತಕ್ಕೆ ಪ್ರತಿಕ್ರಾಂತಿಯಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಹುಟ್ಟಿಕೊಂಡ ಮಂಟೇಸ್ವಾಮಿ ಹಾಗು ಮಲೆಮಹದೇಶ್ವರರ ಪರಂಪರೆ.
ಇವರು ಇಷ್ಟಲಿಂಗಗಳನ್ನು ಕಿತ್ತುಹಾಕಿಸಿದ ನಿಜ ಶರಣರು!
"ಲಿಂಗಾಯತಕ್ಕೆ ಪ್ರತಿಕ್ರಾಂತಿ" ಎಂದರೆ ಸರಿಯಾಗದು!
ಬಸವಣ್ಣರ ಕಾಲದಲ್ಲೇ ಅವರ ಲಿಂಗಾಯತ ತತ್ವ ಪಟ್ಟಬದ್ರ ಹಿತಾಸಕ್ತರ ಕೈಲಿ ಸಿಲುಕಿ ಮಲಿನಗೊಳ್ಳಲು ಆರಂಭಿಸಿದಾಗ ಈ ಮಂಟೇಸ್ವಾಮಿ ಹಾಗು ಮಲೆಮಹದೇಶ್ವರರ ಪರಂಪರೆ ತಲೆ ಎತ್ತುತ್ತವೆ.

ಬಸವಣ್ಣ ಬದಲಾದರು!
ಆದರೆ ಉಳಿದ ವಚನಕಾರರು ಬದಲಾದರೆ?
ಊಹು! ಇಲ್ಲ!
ಮಳೆ ಬಿಟ್ಟರು ಮರದ ಹನಿ ಬಿಡದು ಅನ್ನೊ ಹಾಗೆ, ಬಸವಣ್ಣನಿಗೆ ತನ್ನ ತಪ್ಪಿನ ಅರಿವಾಗಿ ಹೊಲಯ ಮಾದಿಗ ಹೆಸರುಗಳನ್ನು ಕೀಳಾರ್ಥದಲ್ಲಿ ಬಳಸುವುದನ್ನು ನಿಲ್ಲಿಸಿದರೂ ಬೇರೆ ವಚನಕಾರರು ನಿಲ್ಲಿಸಲಿಲ್ಲ!
ಹೆಸರು ಹೇಳುವುದು ಬೇಡ!
ಕೆಲ ವಚನಕಾರರು,
ತಾಯ ಬಯ್ಯುವವನು ಹೊಲಯ!
ಹೆಂಡತಿ ಮಕ್ಕಳ ಸಾಕಲಾಗದವನು ಹೊಲಯ!
ತಂದೆಯ ಹೊಡೆಯುವವನು ಹೊಲಯ! ಹಿಂಗೆಲ್ಲಾ ಗೀಚಿದ್ದಾರೆ!
ಕೆಲ ನಿರ್ಧಿಷ್ಟ ಜಾತಿಗಳ ನಿಂದನೆ ಮಾಡುವವರು ಯಾವ ಸೀಮೆಯ ಶಿವಶರಣರು?
ಇವರು ಯಾವ angle ನಿಂದ ಜಾತಿಮುಕ್ತ ಸಮಸಮಾಜ ಸೃಷ್ಟಿಸುವವರಂತೆ ಕಾಣುತ್ತಾರೆ?!?!?
ಇದೇ ಮಾದರಿಯನ್ನು ಮುಂದುವರೆದ ಕೀರ್ತಿ ಉತ್ತರ ಕರ್ನಾಟಕದ ದಾಸರಿಗೆ ಸಲ್ಲುತ್ತದೆ! ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಇದು ಕೆಲವು ಕಡೆ ಕೀಳಾರ್ಥದಲ್ಲಿ ಬಳಕೆಯಾಗಿರುವುದಂತೂ ಸಾಹಿತ್ಯ ಲೋಕದ ದುರಂತವೇ ಸರಿ!
ಇತಿಹಾಸ ಪ್ರಜ್ಞೆ ಇದಕ್ಕೆಲ್ಲಾ ಕಾರಣವೆಂಬುದಂತು ನಿಜ!
ಭಾರತದ ಯಾವ ಭಾಷೆಯಲ್ಲೂ, ಪ್ರಾಂತ್ಯದಲ್ಲೂ, ಸಾಹಿತ್ಯದಲ್ಲೂ ಇರದ ಇಂತಹ ಒಂದು ಕೀಳು ಕೃತ್ಯವು ಕನ್ನಡ ಸಾಹಿತ್ಯಕ್ಕೆ ೧೨ನೇ ಶತಮಾನದಲ್ಲಿ ನಡೆದು ಹೋಗಿದೆ!
೧೨ನೇ ಶತಮಾನದ ವಚನ ಸಾಹಿತ್ಯ ಕನ್ನಡಕ್ಕೆ ಕಿರೀಟವಾದರೆ, ಅದರಲ್ಲಿ ಆಗಿರುವ ಹೊಲಯ ಮಾದಿಗರ (ಹೆಸರುಗಳ) ನಿಂದನೆ ಅದೇ ಕನ್ನಡದ ಪಿತೃಗಳಾದ ಆದಿ ಕನ್ನಡಿಗರಿಗೆ (ಹೊಲಯ ಮಾದಿಗರಿಗೆ) ಶಾಪವಾಗಿದೆ. ಕನ್ನಡನಾಡಿನ ಮೂಲನಿವಾಸಿಗಳಿಗೆ ಬಗೆದಿರುವ ದ್ರೋಹವಾಗಿದೆ ಎಂದರೆ ತಪ್ಪಾಗಲಾರದು!
ಒಂದು ಪಕ್ಷ ಹೊಲಯ ಮಾದಿಗರು ಬಸವಣ್ಣನನ್ನು ಕ್ಷಮಿಸಿ ಬಿಡಬಹುದು! ಪ್ರಾರಂಭದಲ್ಲಿ ಹೊಲಯ ಮಾದಿಗ ಎಂಬ ಪದಗಳ ಅರ್ಥಗಳೇ ಕೆಡುವಂತೆ ಆಗಲು ಪರೋಕ್ಷ ಕಾರಣವಾದ ಬಸವಣ್ಣ, ತಮ್ಮ ಕಡೇ ದಿನಗಳಲ್ಲಿ ತಮ್ಮ ನಿಲುವು ಬದಲಿಸಿ ಹೊಲಯ ಮಾದಿಗರನ್ನು ಹೊಗಳುತ್ತಾರೆ!

ಆದರೆ ಮಿಕ್ಕ ವಚನಕಾರರು ಮಾಡಿದ್ದೇನು?
ಬಸವಣ್ಣ ಬದಲಾದ ಕೂಡಲೆ ಮಿಕ್ಕವರೂ ಬದಲಾದ ಬೇಕೆಂದೇನಿಲ್ಲವಲ್ಲ? ವಚನ ಸಾಹಿತ್ಯದಲ್ಲಿ ಹೊಲಯ ಮಾದಿಗರ ಕೃತಿಗಳು ಸಿಗುವುದು ಬಹಳ ವಿರಳ! ಸಿಕ್ಕಿದರೂ ಸಹ ಅವು ಬೆರಳೆಣಿಕೆಯಷ್ಟು! ಅಲ್ಲೆಲ್ಲಾ, "ಕುರಿಕೋಳಿ ಕಿರುಮೀನು ತಿಂದವರನ್ನೆಲ್ಲಾ ಕುಲಜರೆನ್ನುವಿರಿ, ಶಿವಗೆ ಪಂಚಾಮೃತವರೆವ ಗೋವ ತಿಂದರೆ ಮಾದಿಗನೆನ್ನುವಿರಿ' ಎಂದು ಹೊಲಯ ಮಾದಿಗರ ಪರವೇ ಮಾತಾಡಿದರೂ ಸಹ, ಬೇರೆ ವಚನಕಾರರು ಹೊಲಯ ಮಾದಿಗ ಎಂಬ ಪದಾರ್ಥಗಳ ಭಂಜನವನ್ನೇ ನಿರಂತರವಾಗಿ ಮಾಡಿದ್ದಾರೆ!

ಒಮ್ಮೊಮ್ಮೆ ಈ ನಿದರ್ಶನ " "ಹೊಲಯ ಮಾದಿಗರ ಹೆಸರುಗಳ ಹಾಳುಗೆಡವಿ ತುಳಿದವರು ವೈದಿಕರ ಅಥವ ವಚನಕಾರರ, ವಚನಕಾರರ ಮತವಾ?" ಎಂಬ ದೊಡ್ಡ ಅನುಮಾನವನ್ನೇ ಮೂಡಿಸತ್ತೆ!
ವೈದಿಕರದ್ದು ಎನ್ನಲಾಗುವ ಚಾತುರ್ವರ್ಣವು ವೃತ್ತಿಯಾಧಾರಿತ (Labour Division) ವಿಭಾಗೀಕರಣ. ಅಲ್ಲಿ ಪಂಚಮರು ಅಥವ ಚಾಂಡಾಲರು ಅಥವ ಇನ್ಯಾವುದೇ ವರ್ಣ ಕುಲಾಧಾರಿತವಾದುದಲ್ಲ. ಹಿಂದಿನ postನಲ್ಲಿ ತಿಳಿಸಿರುವಂತೆ ವರ್ಣಪದ್ಧತಿಯಲ್ಲಿ ಆಯಾ ಸ್ಥಿತಿ ಮತ್ತು ಆಸಕ್ತಿಯ ಅನುಗುಣವಾಗಿ ಕುಲ ನಿರಪೇಕ್ಷವಾಗಿ ಯಾರು ಬೇಕಾದರು ಯಾವ ವರ್ಣದಲ್ಲಿಯಾದರು ಯೋಗ್ಯಾರ್ಹವೆಂಬನುಸಾರವಾಗಿ ವರ್ಣ ದರ್ಜೆಗಳಲ್ಲಿ ಗುರುತಿಸಲಾಗಿತಿತ್ತು. ಪಂಚಮ ವರ್ಣಕ್ಕೆ ಬಿದ್ದವರೆಲ್ಲ ತುಚ್ಛೀಕರಣಕ್ಕೆ ಒಳಗಾಗುತಿದ್ದರು! ಆದರೆ ಅದು ನೇರವಾಗಿ ಕುಲಗಳ ಮೇಲೆ ಪ್ರಭಾವ ಬೀರುತ್ತಿರಲಿಲ್ಲ.
ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ಆದಿರಾಜರ ಕುಲಗಳಾದ ಹೊಲಯ ಮಾದಿಗ ಕುಲಗಳು ಶರಣರ ಕಾಲಕ್ಕೇ ಕೀಳು ಕುಲಗಳಾಗಿದ್ದವು ಎಂಬುದು ಸತ್ಯಕ್ಕೆ ದೂರವಾದ ಮಾತು!
ಕುಲ ಜಾತಿ ಸೂಚಕ ಪದಗಳಾದ ಹೊಲಯ ಮಾದಿಗ ಹೆಸರುಗಳನ್ನು ನೇರವಾಗಿ ಕೆಡಿಸೊ ಸಾಹಸವನ್ನು ಹಲವು ವಚನಕಾರರು ಮಾಡಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ!
ಹೊಲಯ (ನಾಗ/ವಲ್ಲಭ/ಭೈರ), ಮಾದಿಗ (ಮಾದ/ಯಾದ/ಮಾದಿಗ) ಎಂಬುದು ಸನಾತನ ಮತ್ತು ವೈದಿಕ ಮತ್ತು ಅವೈದಿಕ ಸಾಹಿತ್ಯದಲ್ಲಿ ಎಲ್ಲೂ ತುಚ್ಛೀಕರಣಗೊಳಿಸಿರುವ ಉದಾಹರಣೆಗಳು ಸಿಗುವುದಿಲ್ಲ!

ಕೆಲವರು ಲಿಂಗಾಯತ ಮತ ಹುಟ್ಟಿದ್ದೇ ದಮನಿತರ ಹೊಲಯ ಮಾದಿಗರ ಉದ್ಧಾರಕ್ಕೆ ಎಂಬ ಬಹು ಉತ್ಪ್ರೇಕ್ಷೆಯ ಮಾತುಗಳು ಕೇಳುತ್ತೇವೆ!
ಆದರೆ ಅದು ಎಷ್ಟು ಸತ್ಯ ಎಂಬುದೇ ಯಕ್ಷ ಪ್ರಶ್ನೆ!
ಲಿಂಗಾಯತರಲ್ಲಿ ಅತಿ ದೊಡ್ಡ ವರ್ಗವಾದ ಪಂಚಮಸಾಲಿಗಳು ಹೊಲಯ ಮಾದಿಗ ಮೂಲದವರೆ ಎಂದು ಹಲವರು ಅಭಿಪ್ರಾಯ ಪಡುತ್ತಾರೆ! ಅವರನ್ನು ಹೊರತು ಪಡಿಸಿಯೂ ಕರ್ನಾಟಕದಲ್ಲಿ ಇಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊಲಯ ಮಾದಿಗರಿದ್ದಾರೆ!
ಕನ್ನಡಿಗರು ಕಟ್ಟಿದ ಮೊದಲ ಧರ್ಮ ಲಿಂಗಾಯತ ಧರ್ಮ, ಅದು ಹೊಲಯ ಮಾದಿಗರಿಂದ ಹೊಲಯ ಮಾದಿಗರಿಗಾಗಿ ಬೆಳೆದ ಮೊದಲ ಕನ್ನಡದ ಧರ್ಮ ಎಂದು ಅತಿ ದೊಡ್ಡ ಸುಳ್ಳು!
ಕನ್ನಡಿಗರು ಕಟ್ಟಿ ಬೆಳೆಸಿದ ಧರ್ಮ ಆದಿ ಕರ್ನಾಟಕ ಧರ್ಮ! ಆದಿ ಕನ್ನಡಿಗರದ್ದು ಆದಿ ಕರ್ಣಾಟ ಪರಂಪರೆ. ಅದೇ ಕನ್ನಡಿಗರ ಮೂಲ ಹಾಗು ಮೊದಲ ಸಂಸ್ಕೃತಿ. ಧರ್ಮ.

ಇನ್ನು ಲಿಂಗಾಯತ ಮತ ಹುಟ್ಟಿದ್ದು ಹೊಲಯ ಮಾದಿಗರ ಉದ್ಧಾರಕ್ಕೆ ಎನ್ನುವುದಕ್ಕಿಂತ ಆ ಕಾಲದ ದಮನಿತರಿಗಾಗಿ ಎಂದು ಹೇಳುವುದು ಸರಿಯಾದ ವಾಕ್ಯ. ಹೊಲಯ ಮಾದಿಗರ ಕುಲಸಿರಿ ಅಥವ ಹಿರಿಮೆ ಗರಿಮೆಗಳ ಪಥನ ಆರಂಭವಾದದ್ದೇ ೧೨-೧೩ನೇ ಶತಮಾನದಿಂದ! ಇದು ಕೇವಲ ಆರಂಭವಾಗಿತ್ತು! ಲಿಂಗಾಯತ ಮತ ಹುಟ್ಟಿಕೊಂಡಿದ್ದು ಇದೇ ಕಾಲಘಟ್ಟದಲ್ಲಿ!

ಬಹುಶಃ ಲಿಂಗಾಯತ ಮತ ನಿರ್ಮಾಣವು ಬಹುಸಂಖ್ಯಾತರಾಗಿದ್ದ ಹೊಲಯ ಮಾದಿಗರನ್ನು ಕೇವಲ ಮತ ನಿರ್ಮಾಣಕ್ಕೆ ಜನಸಂಖ್ಯೆಯ ಸರಕಾಗಿಸಿಕೊಂಡಿದ್ದಂತೆ ಕಾಣುತ್ತದೆ! ಏಕೆಂದರೆ ೧೨-೧೩ನೇ ಶತಮಾನಕ್ಕೆ ದಕ್ಷಿಣ ಭಾರತವು ಪೊಲನಾಡು ಪೊಲಭೂಮಿ ತೆಂಗಣರ ಭೂಮಿ ಎಂದರೆ ಹೊಲಯ ಮಾದಿಗರ (ತೆಂಗಣರ) ಭೂಮಿ ಎಂದೇ ಕರೆಯಲಾಗುತ್ತತ್ತು, ಮತ್ತು ಈಗಿನಂತೆ ನೂರಾರು ಜಾತಿಗಳ ಅಸ್ತಿತ್ವ ಅಂದು ಇರುವುದಿಲ್ಲ! ಇದ್ದರೂ ಸಹ ಅವೆಲ್ಲ ಕುಲಾಧಾರಿತವಾಗಿದ್ದು, ಅವರಲ್ಲಿಯೂ ಸಹ ಹೊಲಯ ಮಾದಿಗರ ಕುಲದವರೇ ಬಹುಸಂಖ್ಯಾತರು.
ಬಹುಶಃ ಇದೇ ಕಾರಣಕ್ಕೆ ಹೊಲಯ ಮಾದಿಗರನ್ನು ಸೆಳೆಯಲು ಎಲ್ಲಾ ರೀತಿಯ ಮಾರ್ಗಗಳನ್ನು ಬಳಸಿರುವಂತೆ ಲಿಂಗಾಯತ ಮತ ನಿರ್ಮಾಣದ ಹಾದಿ ಕಾಣುತ್ತದೆ!
ಇಂದು ಇದೇ ಹೊಲಯ ಮಾದಿಗರ ಯುವಕರು ರಾಮಾನುಜಾಚಾರ್ಯರು, ಮಂಟೇಸ್ವಾಮಿ, ಮಲೆಮಹದೇಶ್ವರರನ್ನು ಅರ್ಥಾತ್ ಕಡೆಗಣಿಸಿ, ತಮ್ಮ ಕುಲದ ಹೆಸರುಗಳ ಅರ್ಥಗಳನ್ನು ಕೆಡಿಸಿದವರಲ್ಲೊಬ್ಬರಾದ ಶರಣರನ್ನೇ ಹಾಡಿ ಹೊಗಳುವುದನ್ನು ಕಂಡರೆ, ಇವರ ಇತಿಹಾಸ ಪ್ರಜ್ಞೆ ಯಾವ ಮಟ್ಟದಲ್ಲಿದೆ ಎಂದು ಮನಸ್ಸು ಮರುಗುತ್ತದೆ!

ಆದರೆ ಇತ್ತೀಚೆಗೆ ಹೊರಬರುತ್ತಿರುವ ಹಲವು ಸಂಶೋಧನಾತ್ಮಕ ರೋಚಕ ಸತ್ಯಗಳು ಹೊಲಯ ಮಾದಿಗರ ಹಿರಿಮೆ ಗರಿಮೆಗಳನ್ನು ಸಾರುತ್ತಿವೆ.
ಸಂಶೋಧನಾತ್ಮಕ ಲೇಖನಗಳು, ಲೇಖಕರು ಇದರ ಬಗ್ಗೆ ಹೆಚ್ಚೆಚ್ಚು ಬರೆದು ಹೊಲಯರು ಮಾದಿಗರು ಎಂಬ ಹೆಸರು ಬಳಕೆಯಾಗಿ ಉಳಿಯುವಂತೆ ಮಾಡಿವೆ.
ಈ ಪದಗಳ ಬಳಕೆ ಉಪನಾಮದಂತೆ ಪುನರ್ಬಳಕೆಯಾಗುತ್ತಿರುವುದು ಖುಷಿಯ ಸಂಗತಿ.
ಇತಿಹಾಸದ ಅರಿವು ಮೂಡುತ್ತದೆ. ಕೀಳರಿಮೆ ಕ್ರಮೇಣ ಕಮ್ಮಿಯಾಗುತ್ತಿದೆ. ಸಾಹಿತ್ಯಿಕವಾಗಿ ಹಾಗು ಜನಮಾನಸದ ಬಳಕೆಯಲ್ಲಿ ಈ ಲೋಪ ಸರಿಯಾದರೆ ಎಲ್ಲವೂ ಸರಿಯಾದಂತೆಯೆ!
ಜನಸಂಘ, ಸಂಘಟನೆ, ಜಾತಿ ದಾಖಲೆ, ಇತ್ಯಾದಿಗಳಲ್ಲಿ ಇವು ಹೆಚ್ಚೆಚ್ಚು ಬಳಕೆಯಾಗಬೇಕು.
ಪೂರ್ವಾಗ್ರಹ ಪೀಡಿಕೆ ಮತ್ತು ಕೀಳರಿಮೆ ಅಳಿಯಬೇಕು.
ಸಮುದಾಯದ ಮುಖಂಡರು ಇಂಥಹ ಇತಿಹಾಸದ ಅರಿವನ್ನು ಸಾಮಾನ್ಯರಲ್ಲಿ ತುಂಬ ಬೇಕು.

ಹೊಲಯ ಅಥವ ಮಾದಿಗ ಎಂಬುದು ಕೀಳು ಅಲ್ಲ!
ಬೈಗುಳವೂ ಅಲ್ಲ!
ಹೊಲಯರು ಆದಿ ಬೇಸಾಯಗಾರರು! ಮಾದಿಗರು ಆದಿ ಪಶುಪಾಲರು!
ಹೊಲಯರನ್ನು ಹೊಲಯರು ಎಂದು ಕರೆಯುವುದು ಅಪರಾಧವೂ ಅಲ್ಲ!
ಆದರೆ ಯಾವಭಾವದಲ್ಲಿ ಯಾವ ಅರ್ಥದಲ್ಲಿ ಆ ಪದ ಬಳಕೆಯಾಗುತ್ತದೆ ಎಂಬುದು ಮುಖ್ಯ!

"ಲೇಯ್ ಬೊಮ್ಮನ್, ಲೇಯ್ ಪುಳಚಾರ್, ಗೌಡ್ನಂತೆ *ಡ" ಎಂದು ಬಳಸುವುದಕ್ಕೂ, "ಶಾಸ್ತ್ರಿಗಳೇ..., ಶೆಟ್ಟರೇ...., ಗೌಡರೇ...., ಎಂದು ಬಳಸುವುದಕ್ಕೂ ವ್ಯತ್ಯಾಸವಿದೆ!
ಈ ವಿಚಾರದಲ್ಲಿ ನಮ್ಮವರೇ ಬದಲಾಗಬೇಕಿದೆ. ಮನಸ್ಥಿತಿಯೂ ಬದಲಾಗಬೇಕಿದೆ.
ಕೀಳರಿಮೆ ಬಿಟ್ಟು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ತಮ್ಮನ್ನು ತಾವೇ ಗೌರವಿಸಿಕೊಳ್ಳಲಿಲ್ಲ, ನಮ್ಮತನದ ಮೇಲೆ ನಮಗೇ ಹೆಮ್ಮೆ ಇಲ್ಲ ಎಂದರೆ, ಅದನ್ನು ಬೇರೆಯವರಿಂದ ನಿರೀಕ್ಷಿಸುವು ದಡ್ಡತನವಾಗತ್ತೆ.
ಮೊದಲು ನಮ್ಮೊಳಗೆ ನಮ್ಮ ಬಗ್ಗೆ ಹೆಮ್ಮೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಗಳಯ ಮೂಡಬೇಕು. ಅದು ಬಾಹ್ಯದಲ್ಲಿ ಪ್ರತಿಬಿಂಬವಾಗುತ್ತದೆ. ಜಗತ್ತು ಕನ್ನಡಿಯಂತೆಯೇ ಇದೇ ಅಲ್ಲವೇ?