ಭಾನುವಾರ, ಆಗಸ್ಟ್ 21, 2016

ಬೆಟ್ಟದ ಮಾರಿ ಚಾಮುಂಡಿ. ಆದಿ ಕರ್ನಾಟರ ಶಾಕ್ತ ಪರಂಪರೆಯ ಮಾತೃ ದೈವ. ಮಹಿಷ ಆಕೆಯ ಬಂಟನೆ ಹೊರತು ಎದುರಾಳಿಯಲ್ಲ!



ಮಾರಿ ಬ್ರಾಹ್ಮಣನಲ್ಲ! ಕೋಣ ಮಾದಿಗನಲ್ಲ! ಮಹಿಷ ಖಳನಾಯಕನಲ್ಲ!

ಲೇಖಕರು:- ಇಮ್ಮಡಿ ಪುಲಕೇಶಿ 




ಭಾರತದ ಪ್ರಾಚೀನ ಸಂಸ್ಕೃತಿ ಪರಂಪರೆಯನ್ನು ಬೆನ್ನಟ್ಟಿದರೆ, ನಮಗೆ ಸಿಗುವುದು ವೈದಿಕ ಪೂರ್ವ ಅವೈದಿಕ ಸನಾತನ ಪರಂಪರೆ. ಇದನ್ನು 'Ancient Indian Paganism' (ಭಾರತೀಯ ಪುರಾತನ ವಿಗ್ರಹಾರಾಧನೆ) ಅಥವ "Ancient Indian Primitive Culture" ಎನ್ನಬಹುದು. ಇದರ ಜೀವಾಳ "ಸತ್ತ ಹಿರಿಯರ/ಪೂರ್ವಜರ ಆರಾಧನೆ" (Ancestral Worship/Dead Ancestral Worship".
ಇದನ್ನು ಜಾನಪದೀಯವಾಗಿ 'ಹೊಲಯ ಜೀವನ ಶೈಲಿ' ಎನ್ನಲಾಗುತ್ತದೆ.
ಈಗಲೂ ಈ ಪದ್ಧತಿಯನ್ನು 'ಹೊಲಯ' (Ho-la-ya) ಎಂದೇ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗು ಐರೋಪ್ಯ ದೇಶದ ಮೂಲನಿವಾಸಿಗಳು ಕರೆಯುತ್ತಾರೆ. ಭಾರತದಲ್ಲಿ ಹೊಲಯ ಎಂಬ ಸಮುದಾಯದ ಸಂಸ್ಕೃತಿಯಲ್ಲಿಯೂ ಸಹ ನಿರಾಕಾರ-ಆಕಾರ ವಿಗ್ರಹಾರಾಧನೆ ನಡೆಯುತ್ತದೆ, ಹಾಗು ಅದರ ಜೀವಾಳವು ಸತ್ತ ಹಿರಿಯರ ಆರಾಧನೆಯಲ್ಲಿಯೇ ಅಡಗಿದೆ.



ಎಡೆ ಬಡಿಸಿ ಸತ್ತ ಹಿರಿಯರನ್ನು ಆರಾಧಿಸುವ ಕ್ರಮಕ್ಕೆ ಇಲ್ಲಿಯ ಕೆಲ ಜಾನಪದರಲ್ಲಿಯೂ ಹಾಗು, ಇತರೇ ವಿದೇಸಿ ದೇಶಗಳ ಅಲ್ಲಿನ ಮೂಲನಿವಾಸಿಗಳಲ್ಲೂ 'ಹೊಲಯ' ಎಂಬ ಪದವೇ ಬಳಕೆಯಲ್ಲಿರುವುದು ಸೂಜಿಗದ ಸಂಗತಿ.
ಇದೇ ಪದ್ಧತಿಯು ದ್ರಾವಿಡ ಭಾರತದಲ್ಲಿ 'ಅಸೀವಗಂ' ಎನಿಸಿಕೊಳ್ಳುತ್ತದೆ. ಸಂಸ್ಕೃತ ರೂಪದಲ್ಲಿ ಇದು 'ಅಜೀವಿಕ' ಎಂದಾಗುತ್ತದೆ.
ಆದಿಮ (ಶಾಕ್ತ), ಶೈವ, ವೈಷ್ಣವ, ಜೈನ, ಬೌದ್ಧ, ವೈದಿಕ ಧರ್ಮಗಳೆಲ್ಲಾ ಅಜೀವಿಕ (ಆಚರಣಾ/ಜೀವನ ಶೈಲಿ) ವ್ಯಾಪ್ತಿಯಲ್ಲೇ ಇವೆ.
ಈ ವಿಷಯವಾಗಿ ಮತ್ತೊಂದು Articleನಲ್ಲಿ ವಿವರವಾಗಿ ಬರೆಯುತ್ತೇನೆ.

ಸದ್ಯಕ್ಕೆ, ಪ್ರಸ್ತುತ Topicಗೆ ಬರುವ.
ಮೃಗ - ಪೂರ್ಣವಾನರ - ಅರೆವಾನರ - ನರವಾನರ - ಆದಿ ಮಾನವನ ವಿಕಾಸನದ ಹಂತದಲ್ಲಿಯೇ ಆಧ್ಯಾತ್ಮ ಮತ್ತು ದೈವೀಕ ನೆಲೆಯಲ್ಲಾದ ಬೆಳವಣಿಗೆಗಳ ಪಲವಾಗಿ ಮೃಗ, ಪೂರ್ಣವಾನರ, ಅರೆವಾನರ, ಮತ್ತು ಆದಿ ಮಾನವರನ್ನು ಸೂಚಿಸುವ (ಹೋಲುವ) ಕೆಲ ದೈವಗಳನ್ನು ಇಂದಿಗೂ ಈಗಿನ ಭಾರತೀಯ ಪರಂಪರೆಯಲ್ಲಿ ಕಾಣಬಹುದಾಗಿದೆ.
ಮತ್ಸ್ಯ, ವರಾಹ, ನರಸಿಂಹ, ಹನುಮ, ಜಾಂಭವ, ಭೈರವ (ಶಿವ), ಪರಶುರಾಮ, ಇತ್ಯಾದಿ ಅವತಾರಿ ದೈವಗಳೇ ಇದಕ್ಕೆ ಸಾಕ್ಷಿ.










ಇವೆಲ್ಲದಕ್ಕೂ ಒಂದೇ ಮೂಲವೆಂಬಂತೆ, ಭರತ ಭೂಮಿಯ ಎಲ್ಲಾ ಸಂಸ್ಕೃತಿ ಮತ್ತು ಪರಂಪರೆಗೂ ಮೂಲ ಮತ್ತು ಅತ್ಯಂತ ಪ್ರಾಚೀನವೇ 'ಶಕ್ತಿ'! ಅರ್ಥಾತ್ ಮಾತೃ ಪರಂಪರೆಯ ಮಾತೃ ದೈವಗಳು.
ಭಾರತೀಯ ಪ್ರಾಚೀನ ಧಾರ್ಮಿಕ ಇತಿಹಾಸದಲ್ಲಿ ಈ ಶಾಕ್ತ ಪರಂಪರೆಯ ಪಾತ್ರ ಅಗ್ರಗಣ್ಯ!
ಭಾರತದ ಎಲ್ಲಾ ಧರ್ಮದಲ್ಲೂ ಶಕ್ತಿಯರು (ಶಾಕ್ತ ಧರ್ಮದ) ಹಸ್ತಕ್ಷೇಪವಿದೆ. ಆದಿಮರಲ್ಲಿ (ಶಾಕ್ತರಲ್ಲಿ) ಆದಿಶಕ್ತಿ, ಮಾರಿ, ಚೌಡಿ, ಊರ ಅಮ್ಮ, ಗ್ರಾಮದೇವತೆಯಾಗಿ, ಶೈವದಲ್ಲಿ ಭಾಗಶಃ ಆದಿಮರಲ್ಲಿದ್ದಂತೆಯೇ ಇದ್ದು, ವೈಷ್ಣವದಲ್ಲಿ ಸಿರಿದೇವಿ ಭೂದೇವಿಯರಾಗಿ, ಬೌದ್ಧ ಹಾಗು ಜೈನರಲ್ಲಿ ಯಕ್ಷಿಣಿಯರಾಗಿ ತನ್ನ ಅಸ್ತಿತ್ವವನ್ನು ಎಲ್ಲೆಡೆ ಮೆರೆದಿದೆ.

ಭಾರತದ ಈ ಶಕ್ತಿ (ಶಾಕ್ತ) ಧರ್ಮವು ಪ್ರಾಚೀನ ಭಾರತದ ಮೂಲನಿವಾಸಿಗಳು ಎನಿಸಿಕೊಳ್ಳುವ ಆದಿ ದ್ರಾವಿಡರು, ಆದಿ ಕರ್ಣಾಟರು, ನಾಗರು, ಜಾಂಭವರು, ಮಾತಂಗರು, ಒಟ್ಟಾರೆ ಆದಿಮ ಸಂಸ್ಕೃತಿಯ ಮೂಲವಾಗಿದೆ.

ಮೇಲೆ ತಿಳಿಸಿರುವ ಎಲ್ಲಾ ಪ್ರಾಚೀನ ಜನಾಂಗಗಳು ಹಿಂದೆ ಭಾರತದ ತುಂಬೆಲ್ಲಾ ಹರಡಿದ ಪ್ರಾಚೀನ ಜನಸಮುದಾಯದಗಳಾಗಿವೆ. ಇವರದ್ದು ಮಾತೃ ಪ್ರಧಾನ ಸಮಾಜವಾಗಿದ್ದು, ಭಾರತದಲ್ಲಿ ರಾಜರಾಗಿ ಆಳಿದ್ದ ರಾಜರ ಅಥವ ರಾಜಮನೆತನಗಳ ಹೆಸರುಗಳಲ್ಲಿ ಮಾತೃ ಸೂಚಕ ಪದಗಳ ಬಳಕೆಯೇ ಸಾಕ್ಷಿಯಾಗಿದೆ.

ಸತಿಯ ಪುತ್ರರು, ಗೌತಮಿ ಪುತ್ರರು, ಹರತಿ ಪುತ್ರರು, ಮಾತಂಗಿ ಪುತ್ರರು, ಮೋರಿಯ ಪುತ್ರರು, ಇತ್ಯಾದಿ ನಾಮಧೇಯದ ಅರಸರು ಮತ್ತು ಅರಸುಕುಲಗಳೇ ಇದಕ್ಕೆ ಸಾಕ್ಷಿ.


'ಮಾರಿ' ಕೆಡುಕಿನವಳಲ್ಲ! ಈ ನೆಲದ ದೈವ! ಭಾರತದ ಆದಿಮ ಪರಂಪರೆಯೂ ಮಾತೃ ದೈವ! ಮೂಲ ಶಕ್ತಿ! ಆದಿ ಶಕ್ತಿ ಸ್ವರೂಪಳು!

ಮಾನವ ತನ್ನ ವಿಕಾಸನದ ಆದಿಯಿಂದಲೂ ಎಲ್ಲದಕ್ಕೂ ಪ್ರಕೃತಿಯ ಮೇಲೆ ಅವಲಂಬಿತ. ಇದು ಲೌಕಿಕ ಮತ್ತು ಬೌದ್ಧಿಕ ಸತ್ಯ! ಆಗಲೇ ಆತ ಪ್ರಕೃತಿಯನ್ನು ದೈವೀಕರಿಸಿ, ದೈವ, ದೇವರುಗಳ ಲೌಕಿಕ ಸೃಷ್ಟಿಗೆ ಕಾರಣನಾದ!
ತನೆಗೆ ಒಳಿತು ಮಾಡಿದ್ದನ್ನು, ಮಾಡಬಲ್ಲದ್ದನ್ನು ಒಳಿತುಂಟು ಮಾಡುವ ವಸ್ತು ವ್ಯಕ್ತಿ ಮತ್ತು ಪ್ರಕೃತಿಯನ್ನು ದೈವೀಕರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ.

ಹಾಗೆಯೇ ಆಹಾರ ಪದ್ದತಿಯೂ ಕೂಡ!
ಆದಿ ಮಾನವನು ಮೊದಲಿಗೆ ಗೆಡ್ಡೆ ಗೆಣಸು, ಹಣ್ಣು, ತರಕಾರಿ ತಿಂದನು. ನಂತರ ಆತನಿಗೆ ಮೊದಲು, ಮಾಂಸದ ರುಚಿ ಕಂಡದ್ದು ಸತ್ತ ಪ್ರಾಣಿಯ ಮಾಂಸವನ್ನು ತಿಂದಾಗ.
ನಂತರ ಮೀನುಗಾರಿಕೆ, ಬೇಟೆ, ವ್ಯವಸಾಯ, ಪಶುಸಾಕಾಣಿಕೆ,  ಆರಂಭವಾಯಿತು.

ಗಡ್ಡೆ ಗೆಣಸು ತಿಂದು, ನಂತರ ಮಾಂಸದ ರುಚಿಯನ್ನೂ ಕಂಡು ನಾಗರೀಕತೆ ಸಾಕ್ಷಿಯಾದ ಆದಿ ಮಾನವ ಕುಲವು, ನಾಕರೀಕ ಬಾಳ್ವೆಯ ಆಹಾರ ಪದ್ದತಿಯಲ್ಲಿಯು ಸಹ ಆಯಾ ಪ್ರಾದೇಶಿಕ ಪ್ರಕೃತಿಯ ಮೇಲೆ ಅವಲಂಬಿತನಾಗಿರುತ್ತಾನೆ. ಪ್ರಾದೇಶಿಕವಾಗಿ ಯಾವ ಆಹಾರ ಪದಾರ್ಥಗಳು (ಹಣ್ಣು ಹಂಪಲು ಮಾಂಸ) ಯಥೇಚ್ಛವಾಗಿ ದೊರೆಯುತ್ತವೋ ಅವು ಅಲ್ಲಿನ ಸಂಸ್ಕೃತಿ, ದೈವ, ಆಚರಣೆಗಳೊಂದಿಗೆ ಬೆರೆತುಕೊಂಡಿರುತ್ತವೆ. ಮೂಲ ಸಂಸ್ಕೃತಿ, ಸತ್ತ ಹಿರಿಯರು, ಪೂರ್ವಜರನ್ನು, ದೈವೀಕರಿಸಿ, ಗೌರವಿಸುವ, ಆರಾಧಿಸುವ ಸಂಸ್ಕೃತಿಯ ಪ್ರಾಚೀನ ಜನಸಮುದಾಯಗಳು ತಾವು ತಿನ್ನುವ ಆಹಾರವನ್ನು ಮೊದಲು ಸಾಂಕೇತಿಕವಾಗಿ ದೈವಿಕ ಅರ್ಪಿಸುವ ಪದ್ದತಿಯು ಸಹ ಒಂದು ಪುರಾತನ ಆಚರಣೆಯೇ ಆಗಿದೆ.
ಇದೇ ಪದ್ದತಿ ಮೂಲತಃ ಜಾನಪದೀಯವಾಗಿ "ಹೊಲಯ ಪದ್ದತಿ ~ ಜೀವನ ಶೈಲಿ ~ ಆಚರಣೆ" ಎನಿಸಿಕೊಂಡರೆ, ಭಾರತೀಯ ದ್ರಾವಿಡ ರಾಜ ಪರಂಪರೆಯಲ್ಲಿ 'ಅಸೀವಗಂ' ಎನಿಸಿಕೊಂಡು, ಶಿಷ್ಟ ಸಂಸ್ಕೃತ ರೂಪದಲ್ಲಿ 'ಅಜೀವಿಕ' ಎಂದಾಗುತ್ತದೆ.



ಆಫ್ರಿಕಾ, ಅಮೇರಿಕ, ಆಷ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ, ಇನ್ನೂ Primitive Cultureಗಳನ್ನು (ಅಲ್ಲಿನ ಪುರಾತನ ಪ್ರಾದೇಶಿಕ ಪದ್ಧತಿಯನುಸಾರ ಆಚರಿಸಲ್ಪಡುವ ಆಚರಣೆಗಳು) ಅನುಸರಿಸುವ ಮೂಲ‌ ಆಫ್ರಿಕನ್ನರು, ಅಮೇರಿಕಾದ ದ್ರಾವಿಡ ನಾಗ ಮೂಲದ ರುದ್ರಗಣ ಭಾರತೀಯರು (Red Indians), ಮತ್ತು ಇನ್ನೀತರೆ ಪ್ರದೇಶಗಳ ಮೂಲನಿವಾಸಿಗಳಲ್ಲಿ ಈಗಲೂ ಸಹ, ಅವರ ಪ್ರಾಚೀನ ವಿಗ್ರಹಾರಾಧನೆ, ಎಡೆ ಬಡಿದಿ ಸತ್ತ ಹಿರಿಯರನ್ನು ಪೂಜಿಸುವ, ಆರಾಧಿಸುವ ಪದ್ಧತಿಗೆ 'ಹೊಲಯ', ಮತ್ತು ಅದರ ಸಮಾನಾಂತರವಾದ, ಹೋಲಿಕೆಯುಳ್ಳ ಪದಗಳೇ ಬಳಕೆಯಾಗುವುದುಂಟು.
ಈ ಆಹಾರ ಪದ್ದತಿಯ ವಿಚಾರಕ್ಕೆ ಬಂದಾಗ, ಆಹಾರವನ್ನು ಆಹಾರ ಪದಾರ್ಥವನ್ನು ದೈವದೊಡನೆ ಹಂಚಿ ತಿನ್ನುವ ವಿಷಯದಲ್ಲಿ ಪ್ರಾದೇಶಿಕ ಭಿನ್ನತೆಗಳು ಕಾಣಬಹುದು. ನಿತ್ಯ ಯಥೇಚ್ಛವಾಗಿ ಸಿಗುವ ಸಸ್ಯಹಾರ ಆಹಾರ ಪದಾರ್ಥಗಳು, ಮಾಂಸಾಹಾರ ಆಹಾರ ಪದಾರ್ಥಗಳು ಸಾಮಾನ್ಯ ಆಹಸರಗಳು/ಬಲಿಗಳು ಆದರೆ ಇನ್ನು ಕೆಲವು ಆಹಾರ ಪದಾರ್ಥ, ಪ್ರಾಣಿ ಬಲಿಗಳು ಅಪರೂಪದ್ದಾಗಿರುತ್ತವೆ.
ಒಂದೆಡೆ ನೆಲೆ ನಿಂತು ಜೀವನ ಸಾಗಿಸಲು ಆರಂಭಿಸಿದಾಗ ಪಶುಪಾಲನೆ, ವ್ಯವಸಾಯಕ್ಕೆ ಅಂಟಿಕೊಳ್ಳುತ್ತಾನೆ.

ಆಗ ತನ್ನ ಕಾರ್ಯ ಕಸುಬುಗಳಿಗೆ ಅಡ್ಡಿಯಾಗುವ ಇತರೆ ಪ್ರಾಣಿಗಳನ್ನು ಸಂಹರಿಸಿ, ಅದನ್ನೂ ಸಹ ದೈವೀಕರಿಸುವ ಕೆಲಸವೂ ನಡೆದಿದೆ.
ಉದಾಹರಣೆಗೆ, ವ್ಯವಸಾಯಕ್ಕೆ ಅಡ್ಡಿಪಡಿಸುವ ಕಾಡು ಹಂದಿ, ಕಾಡು ಎಮ್ಮೆಗಳನ್ನು ಮೊದಲಿಗೆ ಬೇಟೆಯಾಡಿ ಕೊಂದು ತಿನ್ನಲು ಆರಂಭಿಸಿದರೆ, ನಂತರ ಅದು ದೈವೀಕರಣಕ್ಕೆ ಒಳಗಾಗಿ ದೈವದ ಮುಂದೆ ಬಲಿ ಕೊಡುವ ಪದ್ಧತಿ ಆರಂಭವಾಗುತ್ತದೆ.
ಪ್ರಾಚೀನ ಭಾರತೀಯರು ದೈವ ಮತ್ತು ದೈವತ್ವದೊಡನೆ ತೀರಾ ಹತ್ತಿರದ ಮತ್ತು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ತಾವು ತಿನ್ನುವ ಆಹಾರ ಮೊದಲು ತಮ್ಮ ದೈವ ದೇವರಿಗೆ ಸಮರ್ಪಣೆಯಾಗಬೇಕು ಎಂಬ ಭಾವನೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಪ್ರಾಣಿಬಲಿಗಳು ದೇವರ ಮುಂದೆ ನಡೆಯುವುದು.

ಇದು ಯಾವುದೇ ರೀತಿ ಹೀನವಾಗಲಿ, ದುರಾಚಾರವಾಗಲಿ, ಮೂಡನಂಭಿಕೆಯಾಗಲಿ ಅಲ್ಲ!

ಇದರ ಹಿಂದೆ "ಎಲ್ಲವೂ ಒಂದೇ ಅಥವ ಎಲ್ಲವೂ ಶೂನ್ಯ" ಅಥವ, ಪ್ರಕೃತಿ (ಶಕ್ತಿ) ಕೊಟ್ಟದ್ದನ್ನು ಪ್ರಕೃತಿಗೇ (ಶಕ್ತಿ) ಅರ್ಪಿಸಿ, ಪ್ರಕೃತಿಯೊಡನೆ ಹಂಚಿ ತಿನ್ನು ಸೂಕ್ಷ್ಮವಾದ ಬ್ರಹ್ಮವಾದ ಇದೆ.
ಹಾಗೆಯೇ ಹಿಂದೂಗಳು ಮಾಡುವ ಪ್ರಾಣಿಬಲಿ ಅಹಿಂಸಾ ರೂಪದ್ದು ಎಂದೇ ಹೇಳಬಹುದು!
ಮುಸ್ಲಿಂರಂತೆ, ಪ್ರಾಣಿಯ ಕುತ್ತಿಗೆಗೆ ಚೂರಿ ಹಾಕಿ ನರಳಿ ಸಾಯುವಂತೆ ಮಾಡಿ, ಹಲಾಲ್ ಮಾಂಸವನ್ನು ಸೇವಿಸುವ ಪದ್ದತಿ ಹಿಂದೂಗಳಲ್ಲಿಲ್ಲ.
ಒಮ್ಮೆಲೆಗೆ ಪ್ರಾಣಿಯ ಕುತ್ತಿಗೆಯನ್ನೇ ಕತ್ತರಿಸುವದರಿಂದ ದೇಹ ಮತ್ತು ಮೆದುಳಿನ ನಡುವಿನ ನರಮಂಡಲದ ಸಂಪರ್ಕವೇ ಕಡಿತಗೊಳ್ಳುವುದರಿಂದ, ಬಲಿಯಾಗುವ ಪ್ರಾಣಿಗೆ ಅನುಭವವಾಗುವ ನೋವು ತೀರಾ ಕನಿಷ್ಠ ಪ್ರಮಾಣದ್ದು.
ಹೋಲಿಕೆಯಲ್ಲಿ, ಒಂದು ಬಾಳೆ ಕಂದು ಅಥವ ಒಂದು ಸೌತೆಕಾಯಿ ಕತ್ತರಿಸಿದಾಗ ಆ ಸಸ್ಯ ಜೀವಕ್ಕೆ ಆಗುವ ನೋವಿನಷ್ಟು ಎಂದನ್ನಬಹುದು.

ಕರ್ನಾಟಕದ ಪ್ರಾಚೀನ ಇತಿಹಾಸದಲ್ಲೂ ಸಹ ಇಂಥದ್ದೇ ಹಸ್ತಕ್ಷೇಪಗಳಿದ್ದು, ಅವು ಸಹ ಇಲ್ಲಿನ ಮೂಲನಿವಾಸಿಗಳಾದ ಆದಿ ಕರ್ಣಾಟರ ಪರಂಪರೆಯ ಹಿನ್ನೆಲೆಯವಾಗಿವೆ.
'ಕರುಮಾರಿ' ಕರ್ನಾಟಕ ನೆಲದ ದೈವ. ಮಾತೃ ಸಂಸ್ಕೃತಿಯಾಧಾರಿತ ಶಾಕ್ತರಾದ ಆದಿ ಕನ್ನಡಿಗರ, ಆದಿ ಕರ್ನಾಟರ ಪರಂಪರೆಯ ದೈವ. ಈಕೆ ಕೇವಲ ಕರ್ನಾಟಕದಲ್ಲಲ್ಲ, ಇಡೀ ಭಾರತದಲ್ಲಿ ಆಯಾ ಪ್ರದೇಶದ ಆದಿಮರ ಮೂಲನಿವಾಸಿಗಳೊಡನೆಯೇ ಬೆಸೆದುಕೊಂಡು, ಊರಮ್ಮರಾಗಿ, ಗ್ರಾಮದೇವತೆಗಳಾಗಿ ತಮ್ಮ ಅಸ್ತಿತ್ವವನ್ನು ಹೊಂದಿದ್ದಾರೆ.

ತಮಿಳುನಾಡು, ಕೇರಳ, ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಮಾರಿ, ಮಾರಮ್ಮ, ಮಾರಿ ಅಮ್ಮ, ಇತ್ಯಾದಿಯರಾಗಿ ಅಸ್ತಿತ್ವದಲ್ಲಿದ್ದರೆ, ಆಂಧ್ರ ಪ್ರಾಂತ್ಯದಲ್ಲಿ ಗಂಗಮ್ಮಳಾಗಿದ್ದಾಳೆ. ಹಾಗೆಯೇ ಮಿಕ್ಕ ಪ್ರದೇಶಗಳಲ್ಲಿ ಕಾಳಿ, ದುರ್ಗಾ, ಶಿವೇ ವೈಷ್ಣವಿಯಾಗಿ ಅಸ್ತಿತ್ವವನ್ನು ಹೊಂದಿದ್ದಾಳೆ.
ಭಾರತದಲ್ಲಿರುವ ಶಕ್ತಿ ಪೀಠಗಳು, ಮತ್ತು ಪ್ರಮುಖ ಸ್ತ್ರೀ ದೈವಗಳ ಮೂಲ ರೂಪವೇ ಮಾರಿಗುಡಿಗಳು. ಶಾಕ್ತ ಪಂಥದ ಮೂಲ ನೆಲೆ.
ಹಾಸನದ ಹಾಸನಾಂಬೆ, ಶಿರಸಿ ಮಾರಿಕಾಂಬೆ, ಮಧುಗಿರಿ ದಂಡಿನ ಮಾರಮ್ಮ, ಇತ್ಯಾದಿ ಕರ್ನಾಟಕದ ಪ್ರಖ್ಯಾತ ಮಾರಿಗುಡಿಗಳು ಇದ್ದು, ಇವಲ್ಲಿ ಹಲವು ಕಡೆ ಪ್ರಾಣಿ ಬಲಿ ನಿಷೇಧವಾಗಿದೆ. ಅದರಲ್ಲೂ ಕೋಣಬಲಿ ನಿಂತಿದೆ. ಇನ್ನು ಕೆಲವು ಕಡೆ ಯಾವುದೇ ಅಡ್ಡಿ ಇಲ್ಲದೆ ಮುಂದುವರೆದಿದೆ.


ಈ ವಿಚಾರಕ್ಕೆ ಅನುಗುಣವಾಗಿ ಹಾಸನಾಂಬೆಯ ನಿದರ್ಶನವನ್ನು ಆಯ್ದು ಮುಂದಿನ ವಿಷಯಕ್ಕೆ ಸಾಗುವ.



ಹಾಸನಾಂಬೆ ದೇವಿಯ ದೇವಾಲಯ ವರ್ಷದ ಕೆಲವೇ ದಿನಗಳ ಕಾಲ ತೆರೆದಿರುತ್ತದೆ. ಅದು ಅಶ್ವಯುಜ ಮಾಸದ ಜಾತ್ರೆಯ ಸಮಯದಲ್ಲಿ ಮಾತ್ರ! ಇನ್ನುಳಿದ ದಿನಗಳಲ್ಲಿ ಅದು ಸದಾ ಮುಚ್ಚಿರುತ್ತದೆ. ಆಶ್ಚರ್ಯದ ವಿಷಯವೆಂದರೆ ಈ ಮುಚ್ಚಲ್ಪಟ್ಟ ದೇವಾಲಯದಲ್ಲಿ ವರ್ಷ ಪೂರ್ತಿ, ಜಾತ್ರೆಯ ಕಡೆಯ ದಿನ ಹಚ್ಚಲ್ಲಟ್ಡ ಒಂದೇ ದೀಪ ವರ್ಷ ಪೂರ್ತಿ ಉರಿಯುತ್ತಿರುತ್ತದೆ. ಹಾಗೆಯೇ ಹೊಲಯ ಪದ್ದತಿಯಂತೆಯೆ ಜಾತ್ರೆಯ ಕಡೆಯ ದಿನ ದೇವರ ಮುಂದೆ ಬಡಿಸಲ್ಪಟ್ಟ ಎಡೆಯೂ ವರ್ಷ ಪೂರ್ತಿ ಕೆಡದಿರುವುದು!



ವರ್ಷದಲ್ಲಿ ಕೆಲವೇ ದಿನ ಜಾತ್ರೆಯಲ್ಲಿ ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ಹಬ್ಬದ ಕಡೆಯ ದಿನ ಎಡೆ ಬಡಿಸಿ ಪೂಜಿಸಿ, ಒಂದು  ದೀಪವನ್ನು ಹಚ್ಚಿ, ದೇವಾಲಯವನ್ನು ಮುಚ್ಚಲಾಗುತ್ತದೆ. ಮುಂದಿನ ವರ್ಷದವರೆಗು ತೆರೆಯುವುದಿಲ್ಲ!
ಇನ್ನೂ ಆ ದೇವಾಲಯ ತೆಗೆಯುವುದು ಮುಂದಿನ ವರ್ಷದ ಜಾತ್ರೆಗೆಯೆ.
ಹೀಗಿರುವಾಗ ದೀಪವು ಹಾರದೆ, ಎಡೆಯು ಕೆಡದಿರುವುದು ನಿಜಕ್ಕೂ ರೋಚಕ ಸಂಗತಿಯೇ ಸರಿ!
ಈ ವಿಚಾರಗಳನ್ನು ಹೊರತುಪಡಿಸಿ ಇನ್ನಷ್ಟು ರೋಚಕ ಸಂಗತಿಗಳಿವೆ.





ಜಾತ್ರೆಯ ಸಮಯದಲ್ಲಿ ಶ್ರೀ ರಾವಣೇಶ್ವರರಿಗೆ ಮೊದಲ ಹಾಗು ಕಡೆಯ ಪೂಜೆ ಸಲ್ಲುತ್ತದೆ.
ಬಹುಶಃ ರಾವಣನು ಈ ಪ್ರದೇಶವನ್ನೂ ಆಳಿದವನಿದ್ದಿರಬಹುದು ಎನಿಸುತ್ತದೆ.
ಇಲ್ಲಿ ಹಿಂದೆ ಬಹಳಷ್ಟು ಪ್ರಾಣಿಬಲಿ ನಡೆಯುತ್ತಿತ್ತು. ಈಗ ಹೇಗೊ ತಿಳಿದಿಲ್ಲ. ಕೋಣ, ಹೋತ, ಟಗರು, ಹುಂಜಗಳ ಬಲಿ ಸರ್ವೇ ಸಾಮಾನ್ಯವಾಗಿತ್ತು. ಬಹುಶಃ ಈಗ ಸ್ವಲ್ಪ ಕಟ್ಟುನಿಟ್ಟಾಗಿ ಕೆಲವನ್ನು ನಿಷೇಧ ಮಾಡಿರಬಹುದು! ಇದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ.

ಈ ಪ್ರಾಣಿಬಲಿ ಪದ್ಧತಿಯು, ಮೇಲೆ ತಿಳುಸಿರುವಂತೆ, ಆಯಾ ಪ್ರದೇಶಗಳಲ್ಲಿ ಯಥೇಚ್ಛವಾಗಿ ಸಿಗುವ ಆಹಾರವಾಗಿ ಸೇವಿಸಲು ಯೋಗ್ಯವಾದ ಸೊಪ್ಪು ತರಕಾರಿ ಮಾಂಸ ಇತ್ಯಾದಿ ಆಹಾರ ಪದಾರ್ಥಗಳ ಮೇಲೆ ಅವಲಂಭಿತವಾಗಿರುತ್ತವೆ.
ನೇಪಾಳದಿಂದಿಡಿದು, ನರ್ಮದಾ ಕೊಳ್ಳದ ಮಹಿಷ್ಮತಿ, ಕಾವೇರಿ ಕೊಳ್ಳದ ಮಹಿಷಮಂಡಲ, ತಮಿಳಕಂ, ಮತ್ತು ಪುಲಸ್ಥೀನಗರ (ಲಂಕಾ) ಪ್ರಾಂತ್ಯಗಳಲ್ಲಿ ಕೋಣಗಳು ಯಥೇಚ್ಛವಾಗಿ ಕಾಣಸಿಗುವ ರಾಸುಗಳಾಗಿವೆ.
ಎತ್ತು ದನಗಳಿಗೆ ಹೋಲಿಸಿದರೆ ಇವುಗಳ ಸಂಸತಿ ನಾಲ್ಕೈದು ಪಟ್ಟು ಹೆಚ್ಚೇ ಇವೆ. ಒಂದು ಕಾಲದಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕೋಣಗಳನ್ನು ಉಳುಮೆ ಮಾಡಲಿಕ್ಕೂ ಬಳಸುತ್ತಿದ್ದರು.
ಕರಾವಳಿ ಭಾಗದಲ್ಲಿ ಈಗಲು ಸಹ ಕೋಣಗಳ ಬಳಸಿ ಉಳುಮೆ ಮಾಡುವುದನ್ನ ಕಾಣಬಹುದು.

ಬೇಸಾಯಗಾರರು ಕಾಡು ಎಮ್ಮೆಗಳ ಉಪಟಳವನ್ನು ತಡೆಯುವ ಸಲುವಾಗಿ, ಅವನ್ನು ಬೇಟೆಯಾಡಿ ಮಾಂಸವಾಗಿ ಸೇವಿಸಿದ್ದು, ನಂತರದ ದಿನಗಳಲ್ಲಿ ತಮ್ಮ ದೈವದೊಂದಿಗೆ ಅದೂ ಬೆಸೆದುಕೊಂಡು ದೈವೀಕರಣಗೊಂಡು, ತಮ್ಮ ತಮ್ಮ ಮಾತೃ ದೈವಗಳ ಮುಂದೆ ಬಲಿ‌ ಕೊಡುವ ಪದ್ಧತಿ ಬಂದಿರುವುದನ್ನು ಮನಗಾಣಬಹುದು!
ತುಳುನಾಡು ಪ್ರಾಂತ್ಯದಲ್ಲಿ ಕಾಡು ಎಮ್ಮೆಗಿಂತ, ಕಾಡುಹಂದಿಗಳ ಉಪಟಳ ಹೆಚ್ಚು! ಕಾಡುಹಂದಿಯ ಬೇಟೆಗಳು ಹೆಚ್ಚು. ಇದು ಸಹ ಅಲ್ಲಿ  ದೈವೀಕರಣಗೊಂಡು, ದೈವಾರಾಧನೆಯ ರೂಪ ಪಡೆದು ಪಂಜುರ್ಲಿಯಾಗಿದೆ.

ಆದಿಮರ ಸಂಸ್ಕೃತಿಯಲ್ಲಿ ದೇವರಿಗರೆ ಬಲಿ ಕೊಡುವ ಪ್ರಾಣಿಗಳು ಕೇವಲ ಗಂಡು ಜಾತಿಯದ್ದಾಗಿರಬೇಕು ಎಂಬ ಕಟ್ಟಳೆ ಇದೆ. ಫಲವತಿಯಾದ ಸ್ತ್ರೀ ಜಾತಿಯ ಪ್ರಾಣಿಗಳಾದ ಎಮ್ಮೆ, ಹಸು, ಕುರಿ, ಆಡು, ಕೋಳಿಗಳನ್ನು ಬಲಿ ಕೊಡುವುದರಿಂದ ನಿಷೇಧವಿದೆ.

ಎತ್ತು, ಹೋರಿ, ಹೋತ, ಟಗರು, ಹುಂಜಗಳು ಇತ್ಯಾದಿ ಗಂಡು ಜಾತಿಯ ಪ್ರಾಣಿಗಳನ್ನು ಮಾತ್ರ ದೇವರಿಗೆ ಸಲ್ಲುವುದು ಎಂಬ ನಂಬಿಕೆ ಇದೆ.

ಇದಕ್ಕೆ ಕಾರಣ ಹೀಗಿರಬಹುದು:-

ಸ್ತ್ರೀ ಜಾತಿಯ ಪ್ರಾಣಿಗಳು ಬಹುಪಯೋಗಿ. ಮತ್ತು ಫಲವಂತಿಕೆಯ ಸಂಕೇತವಾಗಿದೆ.

ಕೋಣ, ಎತ್ತು ಅಥವ ಹೋರಿಗಳು ಒಂದು (ಸಂತಾನೋತ್ಪತ್ತಿಗೆ) ಅಥವ ಎರಡು (ನೇಗಿಲು/ಎತ್ತಿನ ಬಂಡಿಗೆ) ಇದ್ದರೆ ಸಾಕು ಎಂದಿರಬಹುದು.

ಹೀಗೆ ಆದಿಮ ಸಂಸ್ಕೃತಿಯಲ್ಲಿ ಗ್ರಾಮದೇವತೆಗಳಿಗೆ ಕೋಣ, ಹೋರಿ ಎತ್ತುಗಳನ್ನು ಬಲಿ ಕೊಡುವುದನ್ನು ನಡೆಸಲಾಗುತ್ತಿತ್ತು. ಆದರೆ ಯಾವಾಗ, ಎತ್ತು ಹೋರಿಗಳು ಸಾಗಟ ಮತ್ತು ಪ್ರಯಾಣದ ಬಳಕೆಗೆ ಬಂಡಿಗೆ ಕಟ್ಟಲು ಹೆಚ್ಚು ಬಳಸಲು ಆರಂಭವಾಯಿತೋ, ಅಂದು ಹೋರಿ ಮತ್ತು ಎತ್ತುಗಳ ಬಲಿಯೂ ಸಹ ನಿಷೇಧಕ್ಕೆ ಒಳಗಾಗಿ, ಕೋಣ ಬಲಿ ಒಂದೇ ಮುಂದುವರಿಯುವಂತಾಗುತ್ತದೆ.



ಕೆಲವು ಕಡೆ ಮಾರಿಯರು ಸಸ್ಯ-ಶಾಕಾಹಾರಿಗಳು. ಅದು ಆಯಾ ಊರಿನ ಮಾರಿಯರ ಹಿನ್ನೆಲೆ ಅನುಗುಣವಾಗಿ, ಅವರ ಇಷ್ಟ ಹಿನ್ನೆಲೆಗಳಿಗೆ ತಕ್ಕಂತೆ ಆಚರಣೆ ಮತ್ತು ಆಹಾರ ಪದ್ದತಿ ನಡೆಯುವುದುಂಟು.

ಇಷ್ಟೆಲ್ಲಾ ಇತಿಹಾಸ ಹಿನ್ನೆಲೆ ಇದ್ದ ಮೇಲೆ ಇದಕ್ಕೊಂದು ಪ್ರಚಲಿತ ಕಥೆ ಕಟ್ಟು ಕಥೆ ಉಪಕಥೆ ಇರಬೇಕಲ್ಲವೆ? ನಿಜ! ಅದೂ ಇದೆ!
ಒಂದು ಕಟ್ಟು ಕಥೆಯೇ ಇದೆ!

ಅದು ಪಟ್ಟಬದ್ರ ಹಿತಾಸಕ್ತರು, ಬ್ರಹ್ಮವಾದವನ್ನು ಮೆಟ್ಟಿ ನಿಂತ ಬ್ರಾಹ್ಮಣವಾದಿ ಬ್ರಾಹ್ಮಣಶಾಹಿಗಳು ಈ ನೆಲದ ಆದಿಮ ಮೂಲನಿವಾಸಿಗಳ ತೇಜೋವಧೆ ಮಾಡಲೆಂದೇ, ಸಾಂಸ್ಕೃತಿಕವಾಗಿ ತುಚ್ಚೀಕರಿಸಲೆಂದೇ ಸೃಷ್ಟಿಸಲಾದ ಕಟ್ಟು ಕಥೆ ಹೀಗಿದೆ!

ಬಹಳ ಹಿಂದೆ, ಒಬ್ಬ ಕೆಳಜಾತಿಯ (ಹೊಲಯ ಅಥವ ಮಾದಿಗ) ಹುಡುಗ ಊರಿಂದ ಊರಿಗೆ ಬಂದು, ಬ್ರಾಹ್ಮಣರ ಅಗ್ರಹಾರದಲ್ಲಿ ತಾನೂ ಬ್ರಾಹ್ಮಣನೆಂದು ಸುಳ್ಳು ಹೇಳಿ ಜನಿವಾರ ಧರಿಸಿ, ಆಲ್ಲಿಯೇ ಆಶ್ರಯ ಪಡೆಯುತ್ತಾನೆ‌. ಸುಮಾರು ತಿಂಗಳುಗಳ ನಂತರ ಆ ಮನೆಯ ಹಿರಿಯ ಬ್ರಾಹ್ಮಣ ಈತನನ್ನು ಬ್ರಾಹ್ಮಣನೆಂದೇ ನಂಬಿ ತನ್ನ ಮಗಳನ್ನು ಈತನಿಗೆ ಮದುವೆ ಮಾಡಿಕೊಡುತ್ತಾನೆ. ನಂತರ ಮೂರು ಮಕ್ಕಳೂ ಸಹ ಆದವು. ಇದೆಲ್ಲಾ ನಡೆದ ಮೇಲೆ ಒಂದು ದಿನ ಆ ಹೆಣ್ಣಿಗೆ, ತನ್ನ ಗಂಡ ಬ್ರಾಹ್ಮಣನಲ್ಲ ಎಂಬ ಸತ್ಯ ತಿಳಿದು ಕೋಪಗೊಂಡಳು! ಕ್ರೋದವು ಮುಗಿಲು ಮುಟ್ಟಿತು! ಸುತ್ತಮುತ್ತಲಿದ್ದ ತನ್ನ ಬಳಗದವರನ್ನು ಕರೆದು ತನ್ನ ಗಂಡ ಹಾಗು ಮೂವರು ಮಕ್ಕಳನ್ನು ಎಳೆದು ತಂದು ನನಗೆ ಬಲಿ ಕೊಡಿ ಎಂದು ಕೇಳಿಕೊಂಡಳು. ಇದರಿಂದ ಭಯಗೊಂಡ ಗಂಡ ಮತ್ತು ಮೂವರು ಮಕ್ಕಳು ಹೆದರಿ ಓಡಿ ಹೋಗಲು ಆರಂಭಿಸಿದರಂತೆ! ಗಂಡನು ಕೋಣದೊಳಗೆ, ಮೂವರು ಮಕ್ಕಳು ಟಗರು-ಹೋತ-ಹುಂಜದೊಳಗೆ ಅವಿತುಕೊಂಡರು.
ಆಗ ಅವುಗಳನ್ನೆಲ್ಲಾ ಬಲಿ ಕೊಡಲಾಯಿತು, ಎಂಬುದೆ ಇಲ್ಲಿ ಸದ್ಯಕ್ಕೆ ಅಲ್ಲಿನ ‌ಸ್ಥಳಿಯರಲ್ಲಿ ಪ್ರಚಲಿತದಲ್ಲಿರುವ ಒಂದು ಕಟ್ಟು ಕಥೆ!

ಆದರೆ ಇವುಗಳು ಸುಳ್ಳು ಎಂಬುದು ತುಂಬ ಸ್ಪಷ್ಟವಾಗಿಯೇ ಕಾಣುತ್ತದೆ.

ಇದು ಸುಳ್ಳು ಎನ್ನಲು ಬಹಳಷ್ಟು ಸಾಕ್ಷ್ಯಗಳಿವೆ :-

೧.) 'ಮಾರಿ' ಎಂಬುದು 'ಮಹಾರ' (ಮಾರ) ಎಂಬುದರ ಸ್ತ್ರೀ ರೂಪವಾಗಿದ್ದು, ಇದು ವೈದಿಕ ಪೂರ್ವ, ಹಾಗು ಅಬ್ರಾಹ್ಮಣ ಸಂಸ್ಕೃತಿಯ ಆದಿಮರ ದೈವವಾಗಿದೆ. ಮಹಾರ್ ಎಂಬುದು ಮಹಾರಾಷ್ಟ್ರ ಸೀಮೆಯ ಮೂಲನಿವಾಸಿ ಆದಿಮರ ಜಾತಿಯ ಹೆಸರು. ಕರ್ಣಾಟಕ ಸೀಮೆಯಲ್ಲಿ ಮಹಾರ 'ಹೊಲಯ' ಎಂದಾದರೆ, ಮಹಾರಿ (ಮಾರಿ) ಹೊಲತಿ ಎಂಬುದರ ಸಮಾನಾರ್ಥಕ ಪದವಾಗಿದೆ. ಮಹಾರ ಎಂಬ ಪದಕ್ಕೂ "ಮಹಾರಸ" ಎಂಬ ದ್ರಾವಿಡ ಪದದ ಮೂಲವಿದ್ದು, ರಾಷ್ಟ್ರಕೂಟ ಅರಸರಲ್ಲಿ ಇವರೂ ಪ್ರಮುಖರು ಎನ್ನಲಾಗುತ್ತದೆ.

೨.) ಕಥೆಯ ಪ್ರಕಾರ, ಈ ಹಬ್ಬ ಮಾಡಬೇಕಾದದ್ದು ಬ್ರಾಹ್ಮಣರಿಂದ ಬ್ರಾಹ್ಮಣರ ಅಗ್ರಹಾರದಲ್ಲಿರುವ ಮಾರಿಗುಡಿ(?)ಯಲ್ಲಿ!
ಆದರೆ ಸತ್ಯ ಎಂಬುದು ತದ್ವಿರುದ್ಧವಾಗಿದೆ! ಮಾರಿಗುಡಿಗಳು ಇರುವುದು ಹೊಲಗೇರಿ/ಮಾದಿಗೇರಿಗಳಲ್ಲಿಯೆ ಹೊರತು ಬ್ರಾಹ್ಮಣರ ಅಗ್ರಹಾರದಲ್ಲಲ್ಲ! ಈ ಹಬ್ಬ ನಡೆಯುವುದು ಸಹ ಬ್ರಾಹ್ಮಣರಿಂದೇನಲ್ಕ! ಹೊಲಯ ಮಾದಿಗರು, ಅಸಾಧಿ, ದುಸಾಧಿ, ಬೇಡರು ಇತ್ಯಾದಿ ಅಬ್ರಾಹ್ಮಣ ಜಾತಿಯ ಜನರಿಂದ!

೩.) ಇನ್ನೂ ಕಥೆಯ ಸತ್ಯಾನುಸತ್ಯಾತೆ ಪರಿಶೀಲಿಸಿದರೆ, ಒಬ್ಬ ಬ್ರಾಹ್ಮಣನಿಗೆ ಮತ್ತೊಬ್ಬ ವ್ಯಕ್ತಿ ಬ್ರಾಹ್ಮಣನೊ, ಅಥವ ಅಲ್ಲವೊ ಎಂಬುದನ್ನು ತಿಂಗಳಾನುಗಟ್ಟಲೆ ಜೊತೆ ಇದ್ದಾಗಲು ಕಂಡುಹಿಡಿಯಲು ಏನು ಕಷ್ಟದ ಕೆಲಸವಲ್ಲ! ಸಿನಿಮಾದಲ್ಲಿ ಮಾತ್ರ ಹಾಗೆ ತೋರಿಸಬಹುದಷ್ಟೇ!

೪.) ಮೂರು ಮಕ್ಕಳನ್ನು ಹೆರುವವರೆಗೂ ತನ್ನ ಗಂಡ ಬ್ರಾಹ್ಮಣನಲ್ಲ ಎಂದು ತಿಳಿಯದೆ ಇದ್ದ ಬ್ರಾಹ್ಮಣ ಹೆಣ್ಣು ಮಗಳ ಕಥೆಯೇ ಅತೀ ಹಾಸ್ಯಾಸ್ಪದವಾಗಿದೆ! ಅದಾಗಿಯೂ ನಂತರ, ಗಂಡ ಮಕ್ಕಳನ್ನೇ ಬಲಿ ಕೇಳುವ ಹೆಂಗಸು, ಸ್ತ್ರೀ ಕುಲಕ್ಕೇ ಅಪವಾದದಂತೆ ಬಾಸವಾಗುತ್ತಾಳೆ!

೫.) ಆಹಾರ ಪದ್ಧತಿಯ ವಿಷಯದಲ್ಲಿ ಬ್ರಾಹ್ಮಣರು ಸಾತ್ವಿಕರಾದರೆ, ಬ್ರಾಹ್ಮಣರ ಹೆಣ್ಣು ಮಕ್ಕಳು ಅದಕ್ಕಿಂತ ಹತ್ತು ಪಟ್ಟು ಸಾತ್ವಿಕರಾಗಿರುತ್ತಾರೆ! ಹೀಗಿರಿವಾಗ ಕೋಣ, ಟಗರು, ಹೋತ, ಹುಂಜ ಮಾಂಸದಡಿಗೆ, ಈ ಮಾರಿಗೆ ಪ್ರಿಯವಾದುದು ಎಂಬುದು ಇಡೀ ಕಥೆಯ ಅಸಲಿ ಮುಖವನ್ನು ತೋರಿಬಿಡುತ್ತದೆ!


ಇಂಥದ್ದೆ ಹೋಲಿಕೆಗಳನ್ನು ಹೊಂದಿರುವ ಕಥೆಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಿದೆ! ಹೊಲಯ ಮಾದಿಗರ ಮತ್ತು ವಿವಿಧ ಪ್ರದೇಶಗಳಲ್ಲಿ ಅವರ ಸಮಾನಾಂತರ ಜಾತಿಗಳು ಬಲಿಷ್ಠರಾಗಿದ್ದ ಭಾರತದ ಬಹುತೇಕ ಭಾಗಗಳಲ್ಲಿ ಈ ಕಟ್ಟು ಕಥೆ ಚಾಲ್ತಿಯಲ್ಲಿದೆ.

ಇದು ನಿಜಕ್ಕೂ ಒಂದು ಸುಳ್ಳು ಕಥೆಯೆ! ಅರ್ಥಸತ್ ಕೆಲವು ನಿರ್ದಿಷ್ಟ ಜನಾಂಗದ ಹಿರಿಮೆ ಗರಿಮೆಗಳನ್ನು ತುಚ್ಛೀಕರಿಸಲು, ದಾಯಾದಿ ಅಥವ ವಿರೋಧಿ ಜನಾಂಗ ಕಟ್ಟುವ ಕಥೆ! ಇದರಲ್ಲಿ ನವ ಕ್ಷತ್ರಿಯ (ಮೇಲಸ್ತರದ ಶೂದ್ರರು) ಮತ್ತು ಬ್ರಾಹ್ಮಣರ ಕೈವಾಡವಿರುವುದಂತು ನಿಜ!


ಊರ ಮಾರಿ/ಊರ ಅಮ್ಮ/ಗ್ರಾಮದೇವತೆ/ಮೂಲಶಕ್ತಿ/ಆದಿ ಶಕ್ತಿಯರ ಹಿನ್ನೆಲೆ.

ಮೂಲನಿವಾಸಿಗಳಾದ ಆದಿಮ ಪರಂಪರೆಯ ಆದಿ ಕರ್ನಾಟರು, ಆದಿ ದ್ರಾವಿಡರು, ನಾಗರು (ಹೊಲಯರು), ಮಾತಂಗರು (ಮಾದಿಗರು), ಮೂಲತಃ ಶಕ್ತಿ ಆರಾಧಕರು. ಸಾಮಾನ್ಯವಾಗಿ ಈ ಮಾರಮ್ಮ ಅಥವ ಊರಮ್ಮ ದೇವಿಯರು ನಾಗ (ಹೊಲಯ) ಅಥವ ಮಾತಂಗ (ಮಾದಿಗ) ಸ್ತ್ರೀಯರಾಗಿರುತ್ತಾರೆ. ಎಂದರೆ 'ಹೊಲತಿ' ಅಥವ 'ಮಾತಂಗಿ/ಮಾದಿಗಿತ್ತಿ'ಯರಾಗಿರುತ್ತಾರೆ.
'ನಾಗ' ಎಂಬುದರ ಅರ್ಥ 'ಸಿಂಹ' ಅಥವ 'ರಾಜ' ಎಂದು. 'ನಾಗರ ಹಾವು/ನಾಗ ಸರ್ಪ' ಎಂದರೆ ಸರ್ಪಗಳ ರಾಜ ಅಥವ ರಾಜ ಸರ್ಪ ಎಂದು ಅರ್ಥ.

ಮಾತಂಗ ಎಂದರೆ ಮಾದಿಗ, ಕರಿ, ಆನೆ ಎಂದು ಅರ್ಥೈಸುತ್ತದೆ.
ಈ ನಾಗ ಮಾತಂಗರ ಮೂಲರೂಪ 'ಹೊಲಯ ಮಾದಿಗರು' ಪ್ರಾಂತೀಯವಾಗಿ ಇವರ ಹೆಸರುಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಪುಲಯನ್ ಚಕ್ಕಿಲಿಯನ್, ಪರಯ್ಯ‌ ಚಕ್ಕಿಲಿಯಾರ್, ಮಾಲ ಮಾದಿಗ, ಮಹಾರ್ ಮಾಂಗ್, ಹೊಲಾರ್ ಮಾದರ್, ಹಲ್ಸರ್ ಚಮ್ಮಾರ್, ಪಾಸಿ ಮೂಸಿ, ಇತ್ಯಾದಿ ಹೀಗೆ ಜಾನಪದೀಯ ಹೆಸರುಗಳಿಂದ ಗುರುತಿಸಲಾಗುತ್ತದೆ.

ಈ ಎರಡೂ ಜನಾಂಗಗಳ ಮೂಲ ಒಂದೇ ಆಗಿದ್ದು, ಆಧಾರಗಳ ಪ್ರಕಾರ ಕ್ರಿ.ಪೂ ೧೦೦೦ದಲ್ಲೆ ಭಾರತೀಯ ಕ್ಷಾತ್ರ ಪರಂಪರೆಗೆ ಆದಿ ಬರೆದ ಆದಿ ಕ್ಷತ್ರಿಯರು ಎನಿಸಿಕೊಂಡು ರಾಜರಾಗಿ ರಾಜ್ಯಾಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬಲಗೈ ಮತ್ತು ಎಡಗೈ ಎಂದು ವಿಭಾಗಿಕರಣಗೊಂಡು ಕೃಷಿ ಮತ್ತು ರಾಜಪ್ರಭುತ್ವ ನಿರ್ವಹಣೆಗೆ ಬಲಗೈ ವಿಭಾಗ, ಕೃಷಿಯೇತರ ಹಾಗು ಸೈನ್ಯಸಾಮಂತಿಕೆಗೆ ಎಡಗೈ ವಿಭಾಗವೆಂದೂ ನಿರ್ವಹಣೆಗೆ ಒಳಪಟ್ಟಿತ್ತು ಎನ್ನಬಹುದು.
ಹೀಗೆ ಈ ಎರಡೂ ಪ್ರಾಚೀನ ಜನಾಂಗಗಳು ಪರಸ್ಪರ ಒಂದೇ ಮೂಲವನ್ನು ಹೊಂದಿದೆ.

ಪುರಾಣ ದಂತಕಥೆಗಳ ಪ್ರಕಾರ, ಹೊಲಯರು ಶಿವನ ಬಲಭುಜದಿಂದ (ಭುಜ - ಕ್ಷಾತ್ರತ್ವದ ಸಂಕೇತ) ಹುಟ್ಟಿ, ಉಮೆಯ ಬಲಮೊಲೆಯ ಹಾಲು ಕುಡಿದು ಬೆಳೆದರು ಎಂದು, ಮಾದಿಗರು ಶಿವನ ಎಡಭುಜದಿಂದ ಹುಟ್ಟಿ, ಉಮೆಯ ಎಡಮೊಲೆಯ ಹಾಲು ಕುಡಿದು ಬೆಳೆದವರು ಎಂದು ಹಿನ್ನೆಲೆಗಳಿವೆ.
ಇದೇ ಕಾರಣಕ್ಕೆ ಹೊಲಯ ಮಾದಿಗರನ್ನು ಆದಿ ಶಿವಾಚಾರ್ಯರು ಎನ್ನಲಾಗುತ್ತದೆ.


Edgar Thurstonರ South Indian Castes & Tribes ಕೃತಿಯಲ್ಲಿಯೂ ಸಹ ಹೊಲಯ ಮಾದಿಗರ ಮೂಲ ಒಂದೇ ಎನ್ನಲಾಗಿದೆ.
Reverend Ferdinand Kittelರ ಕನ್ನಡ ಶಬ್ದಕೋಶದಲ್ಲಿ 'ಹೊಲತಿ'ಗೆ ಮಾತಂಗಿ, 'ಮಾತಂಗಿ'ಗೆ ಹೊಲತಿ ಸಮಾನಾರ್ಥಕ ಪದವಾಗಿ ಸೂಚಿಸಲಾಗಿದೆ.

ಆದ್ದರಿಂದ ಹೊಲಯರಿಗೂ, ಮಾದಿಗರಿಗೂ 'ಮಾರಿ' ತಮ್ಮವಳು ಎಂದು ಹೇಳಿಕೊಳ್ಳುವ ಸಂಪೂರ್ಣ ಸತ್ಯ ಸ್ವಾತಂತ್ರ್ಯವಿದೆ.

'ಮಾರಿ' (ಮಹಾರಿ/ಭಾರಿ/ಭೈರವಿ) ಎಂಬುದು ಮಾರ (ಮಹಾರ/ಭಾರ/ಭೈರವ) ಎಂಬುದರ ಸ್ತ್ರೀ ರೂಪಕ ಪದ.

ಇದು ಕಾಳಿ, ದುರ್ಗಿ ಎಂದೂ ರೂಪಾಂತರ ಹೊಂದಬಲ್ಲದು!
ಮಹಾರರ ಇತಿಹಾಸ ಕೆದಕಿದರೆ ಇವರು ರಾಷ್ಟ್ರಕೂಟ ಅರಸರ ಮೂಲಜನರು. 'ಮಹಾರಸು' ಎಂಬುದು ಇದರ ಮೂಲ ಹಾಗು ಪೂರ್ಣ ರೂಪದ ಪದ. ಈ ಪದ ಅಪ್ಪಟ ದ್ರಾವಿಡ ಪದವೇ ಆಗಿದೆ. ಇವರು ಸೋತ ಅರಸರಾದಾಗ, ತುಳಿತಕ್ಕೊಳಗಾಗಿ, ತಮ್ಮ ಹೆಸರಿನಲ್ಲಿ '' ಕಾರವನ್ನು ಕಳೆದುಕೊಂಡ ಮಹಾರ'ಸ' > (ಮಹಾರ) ಮಹಾರ ಎಂದಾಗುತ್ತದೆ. ಈಗಲೂ ಸಹ ಮರಾಠರಲ್ಲಿ 'ಸ' ಎಂಬ ಪದ ಗೌರವ ಸೂಚಕ ಪದವಾಗಿಯೇ ಬಳಕೆಯಲ್ಲಿದೆ.

ಪಿತೃ ಪ್ರಧಾನ ರಾಜಾಡಳಿತಕ್ಕೂ ಹಿಂದಿನ ವ್ಯವಸ್ಥೆಯನ್ನು ತಿಳಿಯಬೇಕಾದರೆ, ಮಾತೃ ಪ್ರಧಾನ ನೆಲೆಯಲ್ಲಿ ಹುಡುಕಬೇಕಾಗುತ್ತದೆ.
ಮಹಾರ 'ರಾಜ' ಎಂದು ಅರ್ಥೈಸಿದರೆ, ಮಹಾರಿ 'ರಾಣಿ' ಎಂದಾಗುತ್ತದೆ.
ಸ್ತ್ರೀ ಕ್ಷಾತ್ರ ಪರಂಪರೆಯ ಮೂಲ ಮಾರಿಯರೇ ಆಗಿದ್ದಾರೆ.
ರಾಜ ಸ್ತ್ರೀ ಮಾರಿಯರು, ಊರ ಕಾಯುವ ಕಾಯಕದ ಅಥವ, ಊರ ಆಳುವ ಕಾಯಕದ ಮಾಡುತ್ತಿದ್ದರು ಎನ್ನಬಹುದು.
ಪ್ರಜೆಗಳ ಹಾರೈಕೆ, ವೈರಿಗಳ ಸಂಹಾರ, ಊರ ಆಕ್ರಮಿಸಲು ಬಂದವರ ಬಲಿ, ಹೀಗೆ ನಾಡ ಕಲ್ಯಾಣ ಮಾಡುತ್ತಿದ್ದ ಮಾರಿಯರು, ಮೊದಲ ಮಹಿಳಾ ವೈದ್ಯರು ಹೌದು.
ದೊಡ್ಡಮ್ಮ (Chicken Pox), ಚಿಕ್ಕಮ್ಮ (Small Pox), ಇತ್ಯಾದಿ ಚರ್ಮ ರೋಗಗಳಿಗೆ ಇವರು ಔಷಧಗಳನ್ನು ಕಂಡುಹಿಡಿದಿದ್ದರು ಎಂಬ ಮಾತಿದೆ.

ಆರ್ಯ/ಇಂಡೋ ಆರ್ಯ- ವೈದಿಕ - ಬ್ರಾಹ್ಮಣರ ಸಾಹಿತ್ಯದಲ್ಲಿ ಮಾರಿಯರನ್ನು "ಬೀದೀಲಿ ಹೋಗೊ ಮಾರಮ್ಮನ್ನ ಮನೆಗೆ ಕರಿಯಬಾರದು" ಎಂಬ ಗಾದೆಗಳ ಮೂಲಕ ಮಾರಿಯರನ್ನು ತುಚ್ಛೀಕರಿಸಲಾಗಿದೆ. ಮಾರಿಯರಿಂದ ತೊಂದರೆಗಳನ್ನು ಎದುರಿಸಿದವರಲ್ಲಿ ಇವರೂ ಒಬ್ಬರಿರಬೇಕು!?!?

ಬಹುಶಃ, ಈ ಮಾರಿಯರು ತಮ್ಮ ಜನರ ಹಿತಕ್ಕಾಗಿ, ತಮ್ಮ ಮೇಲೆ, ತಮ್ಮ ನಾಡಿನ ಮೇಲೆ ಆಕ್ರಮಣಕಾರರು ಎರಗಿ ಬಂದಾಗ, ಆ ಪರಕೀಯರನ್ನ ಕೊಂದು, ಅವರ ಪಾಲಿಗೆ ಮಹಾಮಾರಿಯಾಗಿರಬೇಕು! (ಪರಕೀಯರ ಸ್ಥಾನದಲ್ಲಿ ಯಾರನ್ನು ಬೇಕಾದರೂ ಪರಿಗಣಿಸಿ! ಆರ್ಯರನ್ನೂ ಸಹ!)



ಆದರೆ ಬ್ರಾಹ್ಮಣರೇನು ಸುಮ್ಮನಿದ್ದರೆ? ಅನುಕೂಲ ಸಿಂಧು ಧರ್ಮಪಾಲನೆ ಎಂಬಂತೆ, ಇಂದು ಮಾರಿಯರನ್ನೂ ಬ್ರಾಹ್ಮಣೀಕರಿಸಿ/ವೈದಿಕರಿಸಿ ಆದಿಶಕ್ತಿ, ಗಾಯತ್ರಿ, ಲಕ್ಷ್ಮಿ ಸರಸ್ವತಿಯಾಗಿಸಿಕೊಂಡಿರುವ ಸಾಧ್ಯತೆಗಳು ಹೆಚ್ಚಿವೆ. ವಿಗ್ರಹಾರಾಧನೆ ಒಪ್ಪದ ವೈದಿಕ ಧರ್ಮವನ್ನೂ ಮೀರಿ, ವೈದಿಕರು ಅನುಕೂಲ ಸಿಂಧು ಧರ್ಮಪಾಲನೆಯಂತೆ ಮಾರಿ ಸಂಸ್ಕೃತಿಯನ್ನು ಆದಿಮರಿಂದ ದೂರಾಗಿಸಿ ತಮ್ಮದಾಗಿದಿಕೊಳ್ಳುವ ಪ್ರಯತ್ನವಂತೂ ನಡೆದಿದೆ. ಇದಕ್ಕೆ ಹಿಂಬು ಕೊಡುವಂತೆ ಮಾತಂಗಿ ಮತ್ತು ಸರಸ್ವತಿಯ ಚಿತಪಟಗಳ ನಡುವೆ ಬಹಳಷ್ಟು ಹೋಲಿಕೆಗಳಿವೆ.



ಹಾಗೆಯೇ ಬ್ರಹ್ಮನು ಮೂಲ ಪುರುಷ ಎಂದೂ,  ಆದಿ ಎಂದು ಎನ್ನುವ ವೈದಿಕ ಸಾಹಿತ್ಯವು, ಜಾನಪದರು ಆದಿ ಎನ್ನುವ ಆದಿ ಜಾಂಭವನನ್ನು ಹಿಂದಿಕ್ಕಲು "ಬ್ರಹ್ಮನು ಕರಡಿಯೊಂದಿಗೆ ಸಂಭೋಗ ನಡೆಸಿ ಜಾಂಭವಂತನಿಗೆ ಜನ್ಮ ಕೊಟ್ಟ"ಎಂಬ ಕಟ್ಟು ಕಥೆ ಸೃಷ್ಟಿಸಿದ್ದಾರೆ. ಹಾಗೆಯೇ ಹೊಲತಿಯರು, ಎಂದರೆ ಮಾರಿಯರು ಹರತಿ/ಹರಿತಿ (ಹೊಲತಿ) ಹರ-ತಿ = ಪಾರ್ವತಿ/ಗಾಯತ್ರಿ, ಹರಿ-ತಿ = ಸಿರಿದೇವಿ/ಭೂದೇವಿಯಾಗಿ ಮಾರ್ಪಾಡುಗಳಾಗಿರುವಂತೆ ಸ್ಪಷ್ಟವಾದ ದೃಷ್ಟಿಕೋನವನ್ನು ನೀಡುತ್ತದೆ.



ಪ್ರಾಚೀನ ಬೌದ್ಧ ಗ್ರಂಥಗಳು ಮಾರಿಯರ ಉಲ್ಲೇಖಗಳಿವೆ. ಅದು ಯಕ್ಷಿಣಿಯರಾಗಿ. ಹರಿತಿಯನ್ನು‌ ಸಹ ಓರ್ವ ಬೌದ್ಧ ಯಕ್ಷಿಣಿ ಎಂದು ಉಲ್ಲೇಖಿಸುವ ಬೌದ್ಧ ಗ್ರಂಥಗಳು, ಹರಿತಿಯನ್ನು ಸಹ ಮೊದಲಿಗೆ, ತನ್ನ ಐನೂರು ಮಕ್ಕಳನ್ನು ಕಾಪಾಡಿಕೊಳ್ಳಲು ಪರರನ್ನು ಕೊಂದು ಹಾಕುತಿದ್ದಳು ಎಂದು ಅತಿ ಕ್ರೂರವಾಗಿಯೇ ಬಣ್ಣಿಸಲಾಗುತ್ತದೆ.
ನಂತರ ಬುದ್ಧನು ಆಕೆಗೆ ಶಾಂತಿ ಅರಿವು ಮೂಡಿಸಿ, ತನ್ನ ಯಕ್ಷಿಣಿಯಾಗಿಸಿಕೊಂಡ ಎನ್ನಲಾಗುತ್ತದೆ.
ಇದೇ ರೀತಿಯ ಪ್ರಸಂಗ, ಕೊಲ್ಲೂರು ಮೂಕಾಂಬಿಕೆ ಮತ್ತು ಶಂಕರಾಚಾರ್ಯರ ನಡುವೆಯೂ ನಡೆಯುವುದು ಗಮನಾರ್ಹ!

ಇದನ್ನು ಶಾಕ್ತ ಧರ್ಮದ ಮೇಲೆ, ಶೈವ ವೈಷ್ಣವ ಬೌದ್ಧ ಜೈನ ಧರ್ಮಗಳ ಪಾರುಪತ್ಯ ಸಾಧಿಸುವ ಸೂಚಕ ಸನ್ನಿವೇಶಗಳಾಗಿವೆ.
ಹರಿತಿ ಪುತ್ರರು ಎನ್ನಲಾಗುವ ಚಾಲುಕ್ಯರು ಸಹ ಹೊಲಯಾರಸರಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಇಂಥಹ ಹೆಸರಾಂತ ರಾಣಿಯರು (ಮಾರಿಯರು) ಕಾಲರಾದ ಮೇಲೆ, ಅಭಿಮಾನ ಹೊತ್ತ ಪ್ರಜೆಗಳು ಅಥವ ಆಕೆಯ ವಂಶಸ್ಥರು, ಆಕೆಯ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಗದ್ದುಗೆಯನ್ನು ಕಟ್ಟಿ, 'ಕರಿಕಲ್ಲು/ಕರುಕಲ್ಲು/ಗೋರ್ಕಲ್ಲು'ಗಳನ್ನು ನೆಟ್ಟಿ, ಅದನ್ನು ಮಾರಿಗುಡಿಯಾಗಿಸಿ ಹೊಲಯ (ಅಸೀವಗಂ/ಅಜೀವಿಕ) ಪದ್ಧತಿಯಂತೆ ಎಡೆ ಬಡಿಸಿ ಆರಾಧಿಸುತ್ತಾರೆ.
ಕಾಲಾನಂತರ ಇವು ಶಕ್ತಿ ಕೇಂದ್ರಗಳಾಗಿ ಪರಿವರ್ತನೆ ಹೊಂದಿ ಆದಿಶಕ್ತಿಯ ಗುಡಿಗಳಾಗುತ್ತವೆ.
ಕರ್ನಾಟಕಕ್ಕೆ ಕರುನಾಡು ಎಂದು ಹೆಸರು ಬರಲು ಈ 'ಕರುಕಲ್ಲು' ಸಹ ಒಂದು ಕಾರಣವೆಂದು ಹೇಳಲಾಗುತ್ತದೆ. 'ಕರಿಕಲ್ಲು' ಇದ್ದೆಡೆ ದೈವ ನೆಲೆ ಇದೆ ಎಂದು, ಅಥವ ಪೂರ್ವ ಹೊಲಯರು/ಮಾದಿಗರು ಇದ್ದರೆಂದು ಪರಿಗಣಿಸಿ, ಅದು ಮಾನವರು ವಾಸಿಸಲು ಸೂಕ್ತ ಸ್ಥಳವೆಂದು ಗುರುತಿಸಿ ಹೊಲಯರು ಕರುಕಲ್ಲು ನೆಟ್ಟಿ ಕಟ್ಟಿದ ನಾಡು ಕರುನಾಡು ಎಂಬ ವಾದವೂ ಸಹ ಇದೆ. ಹೊಲಯರ ಸಾಮ್ರಾಜ್ಯ ಕರುನಾಡು, ಸಿಂಧೂ ದಕ್ಷಿಣ ಕೊಳ್ಳದಿಂದ ಕಾವೇರಿಯ ಕೊಳ್ಳದ ದಕ್ಷಿಣ ದಡದವರೆಗೂ, ಭಾರತ ಖಂಡದೊಳಗೆ ಪಶ್ಚಿಮಕ್ಕೆ ಇತ್ತು ಎನ್ನಲಾಗಿದೆ.


ಸಂಸ್ಕೃತ ಶ್ಲೋಕಗಳಲ್ಲಿ ಹೊಲತಿ ಮಾತಂಗಿಯರ ಉಲ್ಲೇಖ :-

ಶಕ್ತಿ-ಆದಿಶಕ್ತಿಯನ್ನು ಎಷ್ಟೇ ಆರ್ಯೀಕರಣಕ್ಕೊಳಪಡಿಸಿದರೂ ಸಹ, ಅದು ತನ್ನ ಮೂಲರೂಪವನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಸಂಸ್ಕೃತ ಶ್ಲೋಕಗಳಲ್ಲಿರುವ ಹೊಲತಿ-ಮಾತಂಗಿ ಸೂಚಕ ಪದಗಳೇ ಸಾಕ್ಷಿ!

'ಮಾತಂಗಪ್ರಿಯೆ', 'ಮಾತಂಗಿ' ಎಂಬುದು ಆದಿಶಕ್ತಿ-ದೇವಿಗೆ ಸಂಬಂಧ ಪಟ್ಟ ಸಂಸ್ಕೃತ ಶೋಕಗಳಲ್ಲಿ ಕಂಡು ಬರುವ ಸಾಮಾನ್ಯ ಪದವಾಗಿದ್ದು, ಇದು ಆದಿಶಕ್ತಿ-ದೇವಿಯು ಮಾತಂಗ/ಮಾದಿಗ ಗಣದವಳು ಎಂದು ಸೂಚಿಸುತ್ತದೆ.
.
'ವಲ್ಲಭೆ', 'ಪುಲಮಾಯಿ', 'ಹರಿತಿ', 'ಹರತಿ', 'ಪ್ರತ್ಯಂಗಿರ' ಎಂಬುದು ಆದಿಶಕ್ತಿ-ದೇವಿಗೆ ಸಂಬಂಧ ಪಟ್ಟ ಸಂಸ್ಕೃತ ಶೋಕಗಳಲ್ಲಿ ಕಂಡು ಬರುವ ಸಾಮಾನ್ಯ ಪದವಾಗಿದ್ದು, ಇದು ಆದಿಶಕ್ತಿ-ದೇವಿಯು ನಾಗ/ಹೊಲಯ ಗಣದವಳು ಎಂದು ಸೂಚಿಸುತ್ತದೆ.
.
.
ಈ ಮಾರಿಯರು ಆಯಾ ಊರಿನ ಹೆಸರಿನೊಡನೆಯೂ ಗುರುತಿಸಿಕೊಳ್ಳುವುದು ಸಹಜ.
.
ಸುತ್ತಮುತ್ತಲಿನ ಏಳು ಊರುಗಳಿಗೆ ಒಂದೇ ಮಾರಿಗುಡಿ ಇದ್ದರೆ ಆಕೆ "ಏಳೂರಮ್ಮ"
ಹಾಸನದ ಮಾರಿ "ಹಸನಾಂಭೆ"
ಕಬ್ಬಾಳುವಿನ ಮಾರಿ "ಕಬ್ಬಾಳಮ್ಮ"
ಕೋಲಾರದ ಮಾರಿ "ಕೋಲಾರಮ್ಮ"
ಮದ್ದೂರಿನ ಮಾರಿ "ಮದ್ದೂರಮ್ಮ"
ಮುಳಕಟ್ಟೆಯ ಮಾರಿ "ಮುಳ್ಕಟ್ಟಮ್ಮ"
ಇತ್ಯಾದಿ ಇತ್ಯಾದಿ.........


ಇನ್ನು ಕೆಲವೊಮ್ಮೆ, ಗುಣ ಮತ್ತು ಬಣ್ಣದೊಡನೆಯೂ ಸಹ ಮಾರಿಯರ ಹೆಸರುಗಳು ತಳುಕು ಹಾಕಿಕೊಂಡಿರುತ್ತವೆ.

ಗಾಢ ಬಣ್ಣದವಳು "ಕಾಳಮ್ಮ"
ಕೆಂಪಗಿದ್ದವಳು "ಕೆಂಪಮ್ಮ"
ಕೆಂಚಗಿದ್ದವಳು "ಕೆಂಚಮ್ಮ"
ಕಪ್ಪಗಿದ್ದವಳು "ಕರಿಯಮ್ಮ/ಕಾಳಮ್ಮ"
ಅಗಲ ಕಣ್ಣುಳ್ಳವಳು "ಕಣ್ಣಮ್ಮ"
ಮುದ್ದಾಗಿದ್ದವಳು "ಮುದ್ದಮ್ಮ"
ದಾನ ಮಾಡುತ್ತಿದ್ದವಳು "ದಾನಮ್ಮ"
ಚೆನ್ನಾಗಿದ್ದವಳು "ಚೆನ್ನಮ್ಮ"
ಸಿಂಹದ ಗಾಂಭೀರ್ಯ ಹೊಂದಿದ್ದವಳು "ಸಿಂಗಮ್ಮ"
ಮಾಡಿದ ತಪ್ಪಿಗೆ ಶಿಕ್ಷಿಸಿ ಪಾಪ ಪರಿಹಾರ ಮಾಡುತ್ತಿದ್ದವಳು "ದಂಡಮ್ಮ"
ಜೇನು-ಹೊನ್ನಿನ ಬಣ್ಣದವಳು "ಹೊನ್ನಮ್ಮ"
ಮುತ್ತನ್ನು ಧರಿಸುತ್ತಿದ್ದವಳು "ಮುತ್ತಮ್ಮ"
ನಾಗರ ಕಣ್ಣುಳ್ಳವಳು "ನಾಗಮ್ಮ"
ಕೆಂಡದಂತ ಕೋಪವುಳ್ಳವರು "ಉರಿಮಾರಿ"
ಭೈರರು ಪೂಜಿಸುತ್ತಿದ್ದ ರಾಣಿ (ಮಾರಿ), "ಬೋರಮ್ಮ"
ಚಂಡಾಲರು ಮತ್ತು ಮುಂಡಾಲರು ಪೂಜಿಸುತ್ತಿದ್ದ ರಾಣಿ (ಮಾರಿ) "ಚಾಮುಂಡಿ"
ರಕ್ಷಕರು ಪೂಜಿಸುತ್ತಿದ್ದ ಮಾರಿ "ರಾಕಾಸಮ್ಮ"
ಇತ್ಯಾದಿ ಇತ್ಯಾದಿ...

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಹೀಗೆ ಅಖಂಡ ಭಾರತದ ಉದ್ದಗಲಕ್ಕೂ ಮಾರಿಯರ ಅಸ್ತಿತ್ವವಿದ್ದು ಅವರೆಲ್ಲರೂ ನಾಗಮಾತಂಗರ (ಹೊಲಯ ಮಾದಿಗರ) ಅಥವ ಆದಿಮ ಪರಂಪರೆಯವರೇ ಆಗಿದ್ದಾರೆ.

ಚೋಳ-ಚಾಲುಕ್ಯರ ಉದಯದವರೆಗೂ ಈ ಮಾರಿಗುಡಿಯ ಮಾರಿಯನ್ನು ನಿರಾಕಾರ 'ಕರಿಕಲ್ಲು' ರೂಪದಲ್ಲೇ ಪೂಜಿಸಲಾಗುತ್ತುತ್ತು.
(ಈಗಲೂ ಸಹ ಭಾರತದ ಎಲ್ಲಾ ಶಕ್ತಿಪೀಠ, ದೇವಿಯರ ದೇವಾಲಯಗಳಲ್ಲೂ ಉತ್ಸವ ಮೂರ್ತಿ ಮತ್ತು ಮೂಲಮೂರ್ತಿ ಎಂಬ ಎರಡು ಬಗೆಯ ವಿಗ್ರಹಗಳಿರುತ್ತವೆ.
(ಮೂಲ ಮೂರ್ತಿಗೆ ಯಾವುದೇ ರೀತಿಯ ರೂಪವಿರುವುದಿಲ್ಲ!)
ಆದರೆ ಕಲಾಭಿಮಾನಿಗಳಾಗಿದ್ದ ಚಾಲುಕ್ಯರಿಂದ ನಿರಾಕಾರ ಮೂಲಮೂರ್ತಿಯೊಡನೆಯೇ 'ಉತ್ಸವ ಮೂರ್ತಿ' ಎಂಬ ಹೊಸ ವಿಚಾರ ತಲೆ ಎತ್ತಿತು.
ಚಾಲುಕ್ಯರಿಗಿಂತ ಮೊದಲೇ ದೇವಿಯ ವಿಗ್ರಹಗಳು ಕೆತ್ತಿದ್ದಿರಬಹುದಾದರು, ಅದನ್ನು ನಿರಾಕಾರ ಮೂಲಮೂರ್ತಿಯ ಎದುರು ಉತ್ಸವ ಮೂರ್ತಿಯಾಗಿ ಬಳಸಲಾಗುತ್ತಿರಲಿಲ್ಲ.

ಇನ್ನು ಕೆಲವೊಮ್ಮೆ, ಮೂಲ ಮೂರ್ತಿಯಾದ ನಿರಾಕಾರವಕಲ್ಲುಗಳಿಗೇ ಮೂರ್ತ ರೂಪ ಕೊಟ್ಟಿರುವ ಹಲವು ಉದಾಹರಣೆಗಳನ್ನು ಮೂರ್ತ ರೂಪವಿರುವ ಮಾರಿಯರ ಮಾರಿಗುಡಿಗಳಲ್ಲಿ ಕಾಣಬಹುದು.
ಚೋಳ ಚಾಲುಕ್ಯರಿಗೂ ಮೊದಲೇ ಶಕ್ತಿಯರ ಕೆತ್ತನೆಗಳು ಆಗಿದ್ದರು ಸಹ ಅದು ಕೇವಲ ಅಲಂಕಾರಿಕ ಕೆತ್ತನೆಗಳಾಗಿಯಷ್ಟೆ ಬಳಕೆಯಾಗಿದೆ. ಗೋಡೆಕೆತ್ತನೆ ಶಿಲ್ಪಕಲೆಗೆ ಮಾತ್ರಾ ಸೀಮಿತವಾಗಿರುತ್ತಿತ್ತು.
ಹೀಗೆ ಮಾರಿಗುಡಿಯ ಮಾರಿಯರು ಮೂರ್ತರೂಪ ಪಡೆಯಲು ಆರಂಭಿಸಿದವು.


ಮಾರ ಮಾದರ ಮೇಲೆ (ಮೂಲನಿವಾಸಿ ಸೂರ್ಯಚಂದ್ರಾದಿಕುಲ ನಾಗ ಮಾತಂಗರ ಮೇಲೆ) ಸಾಂಸ್ಕೃತಿಕ ಆಕ್ರಮಣ - ತುಚ್ಛೀಕರಣ :-


ಅಂದಿಗೆ ಮಾರಿಗುಡಿಗಳು ಕೇವಲ ಗುಡಿಗಳಾಗಿ ಉಳಿದಿರಲಿಲ್ಲ. ಅದು ಎಲ್ಲಾ ಆದಿಮರನ್ನು ಮತ್ತು ಇತರೇ ಅವೈದಿಕರನ್ನು ಒಗ್ಗೂಡಿಸುವ ಕೇಂದ್ರವಾಗಿತ್ತು. ಎಲ್ಲಾ ರೀತಿಯ ಶುಭಕಾರ್ಯಗಳು, ಆರೋಗ್ಯ ವಿಚಾರದಲ್ಲಿನ ವಿಷಯಗಳು ಇತ್ಯಾದಿಗಳು, ಎಲ್ಲದಕ್ಕೂ ಮಾರಿಗುಡಿಗಳು ಕೇಂದ್ರವಾಗಿ ಸಾಕ್ಷಿಯಾಗಿದ್ದವು.
ಅಲ್ಲಿ ಹೊಲಯ ಮಾದಿಗರು (ನಾಗಮಾತಂಗರು) ಕ್ಷಾತ್ರತ್ವವನ್ನು ತೊಟ್ಟು ಅರಸರಾಗಿದ್ದರು.
ಮೂರ್ತಿ ಆರಾಧಕರಲ್ಲದ ವೈದಿಕರು ತಮ್ಮ ಪ್ರಭುತ್ವವನ್ನು ಎಲ್ಲಾ ಆದಿಮರ ಮೇಲೆ ಮತ್ತು ಇತರೆ ಅಬ್ರಾಹ್ಮಣರ ಮೇಲೆ ಸಾಧಿಸಲು, ತಮ್ಮ ಕಟ್ಟು ಪಾಡುಗಳನ್ನು ಮೀರಿ ಮೂರ್ತಿ ಆರಾಧಕರಾಗುತ್ತಾರೆ.

ಮೇಲ್ನೋಟಕ್ಕೆ ಅದು ಬಹುಸಂಖ್ಯಾತರಾಗಿದ್ದ ಆದಿಮ-ಅವೈದಿಕರನ್ನು ಓಲೈಕೆಯಂತೆ ಕಂಡರೂ ಸಹ, ಅದು ಷಡ್ಯಂತ್ರವೇ ಆಗಿತ್ತು. ಅದಿಕ್ಷತ್ರೀಯ ಪರಂಪರೆಯ ಆದಿ ನಾಗಮಾತಂಗರ ಕ್ಷಾತ್ರತ್ವದಲ್ಲಿದ್ದ ಭರತ ಭೂಮಿಯಲ್ಲಿ ಸುಭೀಕ್ಷೆಯಂದಿದ್ದ ಎಲ್ಲಾ ಆದಿಮರು ಅವೈದಿಕರ ಮೇಲೆ ಅಂದು ನಡೆದದ್ದು ಅಕ್ಷರ ಸಹ ಒಂದು ಸಾಂಸ್ಕೃತಿಕ ಯುದ್ಧವೇ ಸರಿ!
ಆದಿಮ-ಅವೈದಿಕರ ಮೇಲೆ ಪ್ರಭುತ್ವ ಸಾಧಿಸಲು ಯೋಚಿಸಿದ ವೈದಿಕರು, ಅವರೆಲ್ಲರಿಗೂ ಕೇಂದ್ರವಾಗಿದ್ದ ಮಾರಿಗುಡಿಯ ಮೇಲೆ ಪ್ರಭುತ್ವ ಸಾಧಿಸಿದರೆ ಸುಲಭವಾಗುವುದು ಎಂಬುದು ಅರಿತಿದ್ದಂತಿದೆ! ಮೊದಲಿಗೆ, ಬ್ರಾಹ್ಮಣ/ವೈದಿಕರು ತಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಮಾರಿಗುಡಿಗಳ ಮೂಲಕ ಪರಿಚಯಿಸಲು (ಹೇರಲು) ಮುಂದಾಗುತ್ತಾರೆ.
ಇದನ್ನು ಸಂಸ್ಕೃತಿಯ ಕೂಡುಕೊಳ್ಳುವಿಕೆ ಎಂದು ಭಾವಿಸಿದ ನಾಗಮಾತಂಗರು ಮೊದಲಿಗೆ ಇದನ್ನು ವಿರೋಧಿಸುವುದಿಲ್ಲ. ಆದರೆ ನಂತರ ಇದರ ಒಳಮರ್ಮವನ್ನು ತಿಳಿದು ಪ್ರಬಲವಾಗಿ ವಿರೋಧಿಸಲು ಆರಂಭಿಸುತ್ತಾರೆ.
ಆದಿಮರ ನಡುವೆಯೇ ಒಗ್ಗಟ್ಟನ್ನು ಒಡೆದು, ನಾಗಮಾತಂಗರ ನಡುವೆ ಭಿನ್ನಾಭಿಪ್ರಾಯದ ಕಂದಕವನ್ನು ಸೃಷ್ಟಿಸಿ, ಆದಿಮರು ಮತ್ತು ಇತರೇ ಅಬ್ರಾಹ್ಮಣರನ್ನೂ ಒಗ್ಗೂಡದಂತೆ ಮಾಡಿ ತಮ್ಮ ಕಾರ್ಯ ಸಾಧನೆಗೆ ಮುಂದಾಗುತ್ತಾರೆ. ಇದಕ್ಕೆ ಜೊತೆಯಾಗಿ ವೈದಿಕರೊಡನೆ ಕೈ ಜೋಡಿಸುವವರು ನಮ್ಮವರಲ್ಲದ ನಮ್ಮವರೆ! ಅರ್ಥಾತ್ ಈವತ್ತಿನ ಮೇಲಸ್ಥರದ ಶೂದ್ರರು (ನಿಯೋ-ಕ್ಷತ್ರೀಯಾಸ್)!

ಇಷ್ಟಾದರೂ ಕುಗ್ಗದ ನಾಗಮಾತಂಗರನ್ನು ಸಾಂಸ್ಕೃತಿಕ ಸಾಂಪ್ರದಾಯಿಕವಾಗಿ ತುಚ್ಛೀಕರಿಸಲು ಎಣೆದು ಪ್ರಚಾರ ಮಾಡಿದ ಕಥೆಯೇ "ಬ್ರಾಹ್ಮಣರ ಮಾರಿ-ಕೋಣ ಟಗರು ಹೋತ ಹುಂಜದ ಕಥೆ"!


"ಮಾರಿ ನಮ್ಮವಳಲ್ಲ! ಮಹಿಷ ಮರ್ಧಿನಿ! ಮೂಲನಿವಾಸಿ ಆದಿಮರ ವಿರೋಧಿ" ಎಂಬ ತಪ್ಪು ಕಲ್ಪನೆಯ ಅನರ್ಥಗಳು!


ಮಾರಿಯರು ಅಥವ ಶಕ್ತಿ ಆರಾಧನೆಯು ಆದಿಮರ ಮೂಲ ಪರಂಪರೆ. ಆದಿ ಕರ್ಣಾಟ - ಆದಿ ದ್ರಾವಿಡರ ಪರಂಪರೆ! ಇಂದಿನ ಹೊಲಯರು, ಮಾದಿಗರು, ಪರಯ್ಯರು, ಪುಲಯರು, ಚಕ್ಕಿಲಿಯರು, ಮಾತಂಗರು, ಮಹಾರರು, ಮಾಂಗರು, ಮಾಲರು, ಪಲ್ಲರು, ಈ ಪರಂಪರೆಯ ಮೂಲ ವಾರಸುದಾರರಾಗಿದ್ದಾರೆ.


"ಶೋಷಿತ" ಎಂಬ ನೆಲೆಯಲ್ಲಿ "ದಲಿತ" ಎಂಬ ಹೆಸರಿನ ಬಂಡವಾಳದಲ್ಲಿ ವಾಕರಿಕೆ ಹುಟ್ಟಿಸುವಂತ ರಾಜಕೀಯದಲ್ಲಿ, ಮತಾಂತರವೆಂಬ ಆಧುನಿಕ ವ್ಯಭಿಚಾರದ ವ್ಯಾಪಾರದಲ್ಲಿ ಇಂತಹ ಭವ್ಯ ಆದಿಮ ಪರಂಪರೆ ಮತ್ತು ಸಂಸ್ಕೃತಿ ಕಡೆಗಣನೆಗೆ ಒಳಗಾಗುತ್ತಾ, ಇಂದು ಅಳಿವಿನಂಚಿಗೆ ಸಾಗುತ್ತಿರುವುದು ದುರಂತದ ಸಂಗತಿ!

ಆದಿಮ ಪರಂಪರೆಯೊಳಗೆ ಮೂಡಿರುವ ಶಾಕ್ತ (ಶಕ್ತಿ ಆರಾಧನೆ), ಆದಿ ಶೈವ (ಸಿದ್ಧ/ನಾಥ ಪರಂಪರೆ), ಆದಿ ವೈಷ್ಣವ (ತಿರುಕುಲ ದಾಸಯ್ಯ ಪರಂಪರೆ) ಪರಂಪರೆಗಳು ಇಂದು ತನ್ನ ಜನರಿಂದಲೇ ಕಡೆಗಣಣೆಗೊಳಗಾಗುತ್ತಿರುವುದು ಒಂದು ಧಾರ್ಮಿಕ/ಸಾಂಸ್ಕೃತಿಕ ಆಘಾತಕಾರಿ ಬೆಳವಣಿಗೆಯೇ ಸರಿ!

ಇದು ಮುಂದೆ ನಮ್ಮ ಮೂಲನೆಲೆ, ಭವ್ಯ ಇತಿಹಾಸ ಪರಂಪರೆಗಳನ್ನೇ ಕಳೆದುಕೊಂಡು ಸಾಮುದಾಯಿಕವಾಗಿ ನವ ಸಂಸ್ಕೃತಿಯ ತ್ರಿಶಂಖು ಸ್ಥಿತಿಗೆ ಬೀಳಿಸಿ ಅನಾಥ ಪ್ರಜ್ಞೆಗೆ ನೂಕಬಹುದು!

ದಲಿತರನ್ನು ತಮ್ಮ ಮೂಲ ಸಂಸ್ಕೃತಿಯಿಂದ ಬೇರ್ಪಡಿಸಿ, ಧಾರ್ಮಿಕವಾಗಿ ಹಾಗು ಸಾಂಸ್ಕೃತಿಕವಾಗಿ ಅತಂತ್ರಗೊಳಿಸುವಲ್ಲಿ ಮತಾಂತರಗಳು ಹಾಗು ಮತಾಂತರಿಗಳು ಕಾರ್ಯನಿರತರಾಗಿದ್ದಾರೆ!

ಶಕ್ತಿ (ಶಾಕ್ತ) ಪರಂಪರೆಯ, ಶೈವ, ವೈಷ್ಣವ, ಬೌದ್ಧ, ಜೈನ ಮತ್ತು ವೈದಿಕ ಧರ್ಮಗಳನ್ನೆಲ್ಲಾ ತನ್ನ ಅಜಾನುಬಾಹುಗಳಿಂದ ತಬ್ಬಿ ಹಿಡಿದಿದ್ದರೂ ಸಹ, ಇಂದು ಮತಗಳು ರಾಜಕೀಯ ಸರಕಾಗಿ, ಎಲ್ಲವೂ ಪ್ರತ್ಯೇಕತೆಯ ಅಂತರವನ್ನು ಕಾಯ್ದು ಕೊಂಡಿವೆ!

ಕಾಲ ಉರುಳಿದಂತೆ, ಇಂದು ಹೊಲಯ ಮಾದಿಗರಲ್ಲಿ ಕೊಂಚ ಮಟ್ಟಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚೇತರಿಕೆ ಕಾಣುತ್ತಾ, ಸಾಂಸ್ಕೃತಿಕ ಹಾಗು ಧಾರ್ಮಿಕವಾಗಿಯೂ ತಮ್ಮ ಮೂಲ ಪರಂಪರೆ ಸಂಸ್ಕೃತಿಯನ್ನು ಆಚರಿಸುತ್ತಾ, ಅನುಸರಿಸುತ್ತಾ, ಇಂದು ಸಮಾಜದ ಮುಖ್ಯವಾಹಿನಿಗೆ, ಮತ್ತು ತನ್ನ ಸಹೋದರ ಜಾತಿ ಸಮುದಾಯಗಳೊಡನೆ ಬೆರೆಯಲು ಆರಂಭಿಸುತ್ತಿರುವ ಈ ಸಮಯದಲ್ಲೇ, ಈ ಹೊಲಯಮಾದಿಗರನ್ನು ತಮ್ಮ ಮೂಲ, ಶಾಕ್ತ ಮತ್ತು ಶಾಕ್ತ ಪರಂಪರೆಯೊಂದಿಗೆ ಗುರುತಿಸಿಕೊಳ್ಳುವ ಆದಿ ಶೈವ (ಸಿದ್ಧ, ನಾಥ ಪಂಥ), ಆದಿ ವೈಷ್ಣವ (ತಿರುಕುಲ ದಾಸಯ್ಯ ಪರಂಪರೆ) ಸಂಸ್ಕೃತಿಗಳಿಂದ ದೂರ ಮಾಡಲು ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿಯೇ ತಿಳಿದಿರುವ ಮತಾಂತರಿಗಳು, ಇಂದು ಅದೇ ಶಾಕ್ತ ಪರಂಪರೆಯು ಹೊಲಯ ಮಾದಿಗರ ಪರಂಪರೆಯೇ ಅಲ್ಲ, ಮಾರಿಯರು ಕಾಳಿಯರು ಚಾಮುಂಡಿಯರು ಮೂಲನಿವಾಸಿಗಳ ವಿರೋಧಿಗಳು ಎಂದೆಲ್ಲಾ ಇಲ್ಲಸಲ್ಲದ ಕಟ್ಟು ಕಥೆಗಳನ್ನು ಸೃಷ್ಟಿಸಿ, ಬೊಗಳೆ ಬಿಡಿತ್ತಾ, ಮುಗ್ಧ ಹೊಲಯ ಮಾದಿಗರ ಪ್ರಜ್ಞೆಯೊಂದಿಗೆ ಆಟವಾಡುತ್ತಾ ನಮ್ಮ ಬೆರಳಿನಿಂದ ನಮ್ಮ ಕಣ್ಣನ್ನೇ ಚುಚ್ಚುವ ತಂತ್ರ ಉಪಯೋಗಿಸುತ್ತಿದ್ದಾರೆ!


ಹೊಲಯ (ನಾಗ) ಮಾದಿಗರ (ಮಾತಂಗ) ಸಂತತಿಯ ವ್ಯಾಪ್ತಿಯು ಬಹಳ ದೊಡ್ಡದಿದೆ.
ಪ್ರಾಂತೀಯವಾಗಿ, ತಾವು ನುಡಿವ ನುಡಿಯ ಅನುಸಾರ, ತಮ್ಮ ಪ್ರಾದೇಶಿಕತೆಗೆ ಅನುಸಾರ ಭಿನ್ನ ಹೆಸರುಗಳಿಂದ ಗುರುತಿಸಿಕೊಂಡರು ಸಹ ಇವರೆಲ್ಲರೂ ಒಂದೇ ಮೂಲವನ್ನು ಪರಸ್ಪರ ಹಂಚಿಕೊಂಡಿದ್ದಾರೆ.
ಹೊಲಯ ಸಂಸ್ಕೃತಿ ಪದ್ದತಿ (ಅಸೀವಗಂ/ಅಜೀವಿಕ ಜೀವನ ಶೈಲಿ) ಅನುಸಾರ, ಆದಿಮ, ಶೈವ, ವೈಷ್ಣವ, ಜೈನ, ಬೌದ್ಧ ಧರ್ಮಗಳ ಆದಿಯನ್ನು ಹೊಲಯ ಮಾದಿಗರು ಅಥವ ಆದಿಮರು ಇಲ್ಲದೇ ಊಹಿಸಿಕೊಳ್ಳಲು ಸಾಧ್ಯವಿಲ್ಲ!

ಇದನ್ನು ಪ್ರಾದೇಶಿಕವಾಗಿಯೂ ಭಿನ್ನವಾದ ನಿಲುವು ತಾಳಿದೆ. ಈಶಾನ್ಯ ಭಾರತದಲ್ಲಿ ಮಲ್ಲರು ಎನಿಸಿಕೊಳ್ಳುವ ನಾಗ/ಹೊಲಯರು ಮೂಲತಃ ಆದಿಶೈವ/ಆದಿವೈಷ್ಣವರಾಗಿದ್ದರೂ ಸಹ, ಬುದ್ಧನ ಕಾಲದಲ್ಲಿ ಶುದ್ಧ ಬೌದ್ಧರಾಗಿದ್ದರೆ, ಮಿಕ್ಕ ಭಾರತದಾದ್ಯಂತ ಆದಿಮ ಶಾಕ್ತರಾಗಿ, ಆದಿ ಶೈವರಾಗಿ, ಕೆಲವೊಮ್ಮೆ ಜೈನರಾಗಿಯೂ, ಆದಿ ವೈಷ್ಣವರಾಗಿಯೂ ಗುರುತಿಸಿಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ ಅಸೀವಗಂ/ಅಜೀವಿಕ (ಹೊಲಯ ಪದ್ಧತಿ :- ಸತ್ತ ಹಿರಿಯರನ್ನು/ಪೂರ್ವಜರನ್ನು ಆರಾಧಿಸುವ ಪದ್ಧತಿ) ಇರುವುದಂತು ನಿಜ.

ಇಂಥಹ ಆದಿಮ ಪರಂಪರೆಯ ಮೂಲದ ಅರಸು ಕುಲಗಳೇ ಭಾರತ ಭೂಮಿಯಲ್ಲಿ ಈ ನೆಲದಲ್ಲಿ ಹುಟ್ಟಿದ ಧರ್ಮಗಳನ್ನೆಲ್ಲಾ ಪೋಷಿಸಿದ್ದಾರೆ. ಎಲ್ಲದಕ್ಕೂ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.
ಇಂತಹ ಹಿನ್ನೆಲೆ ಇತಿಹಾಸ ತಿಳಿಯದ ನಮ್ಮ ಮುಗ್ಧ ಜನರು ಮತಾಂತರಗಳಿಗೆ ಬಲಿಯಾಗಿ ತಮ್ಮ ಸಂಸ್ಕೃತಿ ಪರಂಪರೆಗಳನ್ನು ಅನಾಥ ಪ್ರಜ್ಞೆಗೆ ನೂಕುವಂತಾಗುತ್ತಿರುವುದು ದೊಡ್ಡ ದುರಂತ!
ಆದಿಮರನ್ನು ತಮ್ಮದೇ ಪರಂಪರೆಗಳ ವಿರುದ್ಧ ಎತ್ತುಕಟ್ಟಿ ತಮ್ಮ ಮೂಲ ನೆಲೆಯಿಂದ ದೂರ ಮಾಡಿ ಮತಾಂತರಗಳಿಗೆ ಎಡೆಮಾಡಿಕೊಡುವ ದುರುದ್ದೇಶವೂ ಇದರ ಹಿಂದೆ ಅಡಗಿದ್ದಿರಬಹುದು! ಇಂದು ಇಂತಹ ಹೇಯ ಕೃತ್ಯಗಳು ರಾಜಕೀಯ ಅಸ್ತ್ರವೂ ಆಗಿದೆ!

ಈ ದುಶ್ಕಾರ್ಯ ಸಾಧನೆಗೆ ಮತಾಂತರಿಗಳು ಇಂದು ಬಳಸುತ್ತಿರುವ ಅಸ್ತ್ರ "ಮಹಿಷಾಸುರ ರಾಜನನ್ನು ಚಾಮುಂಡಿಯು ಕೊಂದು, ಮೂಲನಿವಾಸಿಗಳಿಗೆ ಅನ್ಯಾಯ ಮಾಡಿದಳು" ಎಂಬ ಇರಾದೆ!



ಈ ಅಸುರ ಮತ್ತು ಅಸುರ ಮರ್ಧಿನಿಯ ಕಥೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದರೂ ಸಹ, ಅವೆಲ್ಲವೂ ಒಟ್ಟಾರೆ ಒಂದೇ ಕಥೆಯೆಂಬುದು ಮೇಲ್ನೋಟಕ್ಕೆ ತಿಳಿಯಿವುದಂತು ನಿಜ! ಅದನ್ನು "ಅಪಾರ್ಥಕ್ಕೆ ಸೃಷ್ಟಿಯಾದ ಕಟ್ಟು ಕಥೆ" ಎನ್ನಬಹುದು!
"ಮಹಿಷ" ಎಂದರೆ ಈಶ್ವರನ ಮತ್ತೊಂದು ಹೆಸರು. ಹಾಗು ಅದನ್ನು 'ಕೋಣ' ಎಂದೂ ಅರ್ಥೈಸಲಾಗುತ್ತದೆ. ಸಿಂಧೂ ಅವಶೇಷಗಳಲ್ಲಿ ಸಿಕ್ಕಲಾಗಿದೆ ಎನ್ನಲಾಗುವ '



ಪಶುಪತಿ ಮುದ್ರೆ'ಯ ಮೂಲ ಹೆಸರು 'ಮಹಿಷ ಮುದ್ರೆ' ಎಂದು! ಚಿತ್ರ ನೋಡಿದರೆಯೆ ತಿಳಿಯುತ್ತದೆ! ಅಲ್ಲಿಯ ಪಶುಪತಿಯ ಶಿರ ಭಾಗವು ಕೋಣದ ಕೊಂಬು/ತಲೆಯಿಂದ ಕೂಡಿದೆ.

ಮಾರಿಯರ ಬಂಟರು



ಸಾಮಾನ್ಯವಾಗಿ, ಮೇಲೆ ತಿಳಿಸಿರುವ ಮಾರಿಯರಿಗೆ ಒಬ್ಬರು ಅಥವ ಇಬ್ಬರು ಬಂಟರು ಇರುತ್ತಾರೆ. ಸೀಡೀರಣ್ಣ, ಕೆಂಚಣ್ಣ, ಕರಿಯಣ್ಣ, ಸೋಮ, ಭೀಮ ಇತ್ಯಾದಿ ಹೆಸರುಗಳಲ್ಲಿ ಅವರನ್ನು ಗುರುತಿಸಲಾಗುತ್ತದೆ.

ಆದಿಶಕ್ತಿಯ ಪ್ರಸಂಗದಲ್ಲಿಯೂ ಸಹ, ಮೊದಲಿಗೆ ಮೂಲ ಶಕ್ತಿಗೆ ಹರಿ ಮತ್ತು ಹರರು ಬಂಟರಾಗಿದ್ದನ್ನು ಇಲ್ಲಿ ಉದಾಹರಿಸಬಹುದು!
ನಂತರ ಶಕ್ತಿಯು, ಪುನರ್ಜನ್ಮ ತಾಳಿ, ಹರಿ ಹರ ಇಬ್ಬರಿಗೂ, ಪಾರ್ವತಿ ಮತ್ತು ಲಕ್ಷ್ಮಿಯರಾಗಿ ಜನ್ಮ ತಾಳುವುದು ಪುರಾಣದ ಕಥನ!

ಹೀಗೆಯೇ, ಮಾರಿಯರಿಗೂ ಬಂಟರಿರುತ್ತಾರೆ.
ಕೆಲವೊಮ್ಮೆ ಸಿಡೀರಣ್ಣ. ಇನ್ನು ಕೆಲವು ಪ್ರಸಂಗದಲ್ಲಿ ಕರಿಯಣ್ಣ ಕೆಂಚಣ್ಣ, ಇವರೂ ಹಲವು ಸಲ ಶ್ರೀ ಹರಿಯ ಬಂಟರಾದ ಜಯ ವಿಜಯರಾಗಿಯೂ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ಸೋಮಗಳು ಭೀಮರು ಬಂಟರಾಗಿ ಕಾಣಿಸಿಕೊಳ್ಳುತ್ತಾರೆ.

ಹೀಗೆ ಮಹಿಷಾಸುರನನ್ನೂ ಮಾರಿ ಅಥವ ಶಕ್ತಿಯ ಬಂಟ ಎಂದೇ ಪರಿಗಣಿಸಬಹುದು.

ಇದಕ್ಕೆ ಹಿಂಬು ಕೊಡುವಂತೆ ಮಹಿಷನ ಉಲ್ಲೇಖಗಳು ಪಾಂಡ್ಯ ಮತ್ತು ಅಳುಪರ ಕಾಲದ ಶಾಸನಗಳಲ್ಲಿ ಆಗಿದ್ದು, ಅಲ್ಲೆಲ್ಲ ಅವನನ್ನು ಶಿವ-ಶಕ್ತಿ ಆರಾಧಕನೆಂದು ಹೇಳುವುದನ್ನು ಮರೆತಿಲ್ಲ!



ಕೆಲವು ಪುರಾಣ ಕಥೆಗಳ ಪ್ರಕಾರ ಕಾಳಿಯು (ಭೈರವಿಯು) ದುಷ್ಟರನ್ನು ಸಂಹರಿಸಿ ಕೋಪೋದ್ರಿಕ್ತಳಾಗಿ ಆವೇಶದಿಂದ ಎಲ್ಲೆಡೆ ಅಲೆದಾಡಲು ಆರಂಭಿಸಿದಾಗ ಆಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ! ಯಾರೂ ಆ ಸಾಹಸಕ್ಕೆ ಮುಂದಾಗಲಿಲ್ಲ! ಕಾರಣ, ಆ ಆವೇಶದ ಕಾಳಿಯ ಎದುರು ನಿಂತರೆಯೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಲ್ಲರಿಗೂ ತಿಳಿದಿತ್ತು! ಇದನ್ನು ಹೀಗೇ ಬಿಡಬಾರದು ಎಂದು ಗಟ್ಟಿ ಮನಸ್ಸು ಮಾಡಿದ ಶಿವನು (ಭೈರವನು) ಆಕೆಗೆ ಏನಾದರು ಅಸಹಜತೆ ಮನವರಿಕೆಯಾದಲ್ಲಿ ಮಾತ್ರ ಅವಳು ಸಹಜ ಸ್ಥಿತಿಗೆ ಮರಳುತ್ತಾಳೆ ಎಂದು ತಿಳಿದ ಶಿವನು (ಭೈರವನು) ಕಾಳಿಯ (ಭೈರವಿಯ) ದಾರಿಗೆ ಅಡ್ಡಲಾಗಿ ಮಲಗುತ್ತಾನೆ!
ಕಾಳಿಯು (ಭೈರವಿಯು) ಶಿವನ ಎದೆ ಭಾಗದ ಮೇಲೆ ಕಾಲಿಡುತ್ತಾಳೆ! ಕಾಳಿಯ ತುಳಿತಕ್ಕೆ ಶಿವನ ಎದೆ ಬಡಿತ ನಿಂತು ಹೋಗುತ್ತದೆ! ಕಾಳಿಗೆ ಶಿವನ ಗುಂಡಿಗೆಯನ್ನೇ ತುಳಿದ ಅಸಹಜತೆ ಮನವರಿಕೆಯಾಗಿ ಕ್ರೋದದಲ್ಲಿ ಬಾಯಿಂದ ಹೊರ ಹಾಕಿದ್ದ ನಾಲಿಗೆಯನ್ನು ಆತುರದಲ್ಲಿ ಕಚ್ಚಿಕೊಂಡಾಗ, ಆಕೆ ಸಹಜ ಸ್ಥಿತಿಗೆ ಮರಳುತ್ತಾಳೆ! ರುದ್ರಗಣದ ಅಧಿಪತ್ಯದ ಸಂತತಿಯನ್ನು ಉಳಿಸಿಕೊಳ್ಳುವ ಸಲುವಾಗಿ, ಸತ್ತ ಶಿವನೊಂದಿಗೆ (ಭೈರವನೊಂದಿಗೆ) ಸಂಭೋಗ ನಡೆಸುತ್ತಾಳೆ!
(ಅಘೋರಿಗಳು ಶವದೊಂದಿಗೆ ಸಂಭೋಗ ನಡೆಸುವ ಪವೃತ್ತಿ ಪದ್ದತಿ ಈಗಲು ಇದೆ)



ಹೀಗೊಂದು ಹಿನ್ನೆಲೆ ಪುರಾಣ ಕಥೆಗಳಲ್ಲಿದೆ.
ಬಹುಶಃ ಇದೇ ಹಿನ್ನೆಲೆಯನ್ನು ಬಳಸಿಕೊಂಡು "ಮಹಿಷ ಮರ್ಧಿನಿ" ಎಂಬ ಕಟ್ಟು ಕಥೆ ಕಟ್ಟಲಾಗಿದೆ ಎನ್ನಬಹುದು!
ಸಿಡೀರಣ್ಣ, ಕರಿಯಣ್ಣ, ಕೆಂಚಣ್ಣ, ಸೋಮಗಳು, ಭೀಮರ, ಮಾರಿಯರ ಬಂಟರ ಸಾಲಿನಲ್ಲಿ ಮಹಿಷನನ್ನೂ ನಿಲ್ಲಿಸಬಹುದಾಗಿದೆ.
ಒಮ್ಮೊಮ್ಮೆ ಭೈರವರೂ, ಹನುಮರೂ, ಪರಶುರಾಮರು, (ವಾನರರೂ) ಮಾರಿಯರ ಬಂಟ ಪರಂಪರೆಯಲ್ಲಿ ಕಾಣಿಸಿಕೊಳ್ಳುವುದುಂಟು.
ಇವರೆಲ್ಲರೂ ಸಹ ಆದಿಮರ ಪರಂಪರೆಯ ಮೂಲವನ್ನೇ ಹೊಂದಿದ್ದಾರೆ.

ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿದರೆ, ಇಂದು ನಮ್ಮ ಆದಿಮ ಪರಂಪರೆಯನ್ನು ನಮ್ಮ ವಿರುದ್ಧವೇ ಎತ್ತು ಕಟ್ಟು ಮತಾಂತರಿಗಳಂತೆ, ಹಿಂದೆ ಬ್ರಾಹ್ಮಣರೂ ಸಹ ನಮ್ಮ ಆದಿಮ ಪರಂಪರೆಯನ್ನು ನಮ್ಮಿಂದ ದೂರ ಮಾಡಿ, ಶಾಕ್ತ ಪರಂಪರೆಯ ವಾರಸುದಾರಿಕೆಯನ್ನು, ಮಾರಿಯರನ್ನು, ಕಿತ್ತುಕೊಳ್ಳುವ ಹುನ್ನಾರ ನಡೆದ್ದಿದ್ದಂತು ನಿಜ ಎಂಬುದು ಮನದಟ್ಟಾಗುತ್ತದೆ!
ಇರುವ ಹಿನ್ನೆಲೆಗಳನ್ನು ತಿರುಚಿ, ಇಲ್ಲಸಲ್ಲದ ಕಥೆಗಳೆಲ್ಲವನ್ನು ಸೃಷ್ಟಿಸಿದ್ದರು ಎಂಬು ನಿರ್ವಿವಾದ!


ಇತ್ತೀಚೆಗೆ ನಮ್ಮ ಜನರು, ಸತ್ಯವನ್ನು ಸೂಕ್ಷ್ಮ ಸತ್ಯಗಳನ್ನು ಅರಿಯದೆ, ಪಟ್ಟಬದ್ರ ಹಿತಾಸಕ್ತರು, ಮತಾಂತರಿಗಳು, ವಾಮಪಂಥಿಯರು ತಿದ್ದು ವಿರೂಪಗೊಳಿಸಿದ ಕಥೆಗಳನ್ನೇ ಇತಿಹಾಸವೆಂದುಕೊಂಡು, ಮಾರಿ ನಮ್ಮವಳಲ್ಲ, ಚಾಮುಂಡಿ ನಮ್ಮವಳಲ್ಲ ಹಾಗೆ ಹೀಗೆ ಎಂದೆಲ್ಲಾ ತೆಗಳುತ್ತಾ ತಮ್ಮ ಇತಿಹಾಸದ ಮೇಲೆ ತಾವೇ ಚಪ್ಪಡಿಯನ್ನು ಎಳೆದುಕೊಳ್ಳುತ್ತಿದ್ದಾರೆ!
ಇದಕ್ಕಿಂತ ದೊಡ್ಡ ವಿಪರ್ಯಾಸ್ಯ ಮತ್ತೊಂದಿಲ್ಲ!
ಕೆಲ ಪಟ್ಟಬದ್ರಹಿತಾಸಕ್ತರು ಕಟ್ಟುವ ಕಟ್ಟುಕಥೆಗಳಿಗೆ ತಮ್ಮ ಮಾನಸಿಕತೆಯನ್ನು ಬಲಿಕೊಟ್ಟು ನಮ್ಮದೇ ದೈವಗಳನ್ನು ಹೀಯಾಳಿಸುವುವಂತ ಮೂರ್ಖತನದಿಂದ ಹೊರಬರಲಿ!
ತಮ್ಮದು ಯಾವುದು ಪರರದ್ದು ಯಾವುದು, ನಮ್ಮ ಭವ್ಯ ಪರಂಪರೆ ಇತಿಹಾಸಗಳನ್ನು ಅರಿತು ಬಾಳುವಂತಾಗಲಿ.
ಚಾಮುಂಡಿಯು ಅಂಬಾರಿ ಒಳಗಿದ್ದರೆ ಅದಕ್ಕೆ ನಾವು ಹೆಮ್ಮೆ ಪಡಬೇಕೇ ಹೊರತು ಆಡಬಾರದ್ದನ್ನೆಲ್ಲಾ ಆಡಿ ವಿವಾದ ಸೃಷ್ಟಿಸುವುದಲ್ಲ!

ಚಾಮುಂಡಿಯು ಸಹ ಓರ್ವ ಮಾರಿಯೆ. ಬೆಟ್ಟದ ಮಾರಿ.
ಮಹಾರ ಮಾದರ ಸತ್ತ ಹಿರಿಯರು ಮಾರಿಯರು!
ನಮ್ಮ ಪೂರ್ವಜರು ಅಂಬಾರಿಯಲ್ಲಿದ್ದರೆ ನಮಗೆ ಹೆಮ್ಮೆಯಲ್ಲವೆ???





4 ಕಾಮೆಂಟ್‌ಗಳು: